Advertisement
ಗುರುಪ್ರಸಾದ್ ನಿರ್ದೇಶಕನಾಗಿ ಅವಕಾಶ ಪಡೆದ ಮೊದಲ ಸಿನಿಮಾ ಜಗ್ಗೇಶ್ ಅಭಿನಯದ ‘ಮಠʼ ಚಿತ್ರ ಮೂಲಕ. ಗುರುಪ್ರಸಾದ್ ನಿರ್ದೇಶಿಸಿದ ಕೊನೆಯ ಸಿನಿಮಾ ‘ರಂಗನಾಯಕ ಕೂಡ ಜಗ್ಗೇಶ್ ಗಾಗಿ ನಿರ್ದೇಶಿಸಿದ ಸಿನಿಮಾ. ಗುರುಪ್ರಸಾದ್ ಚಿತ್ರರಂಗಕ್ಕೆ ಬಂದಾಗಿನಿಂದಲೂ ಜಗ್ಗೇಶ್ ಗುರುಪ್ರಸಾದ್ ರನ್ನು ಹತ್ತಿರದಿಂದ ಕಂಡ ಬಗ್ಗೆ ವಿವರಿಸಿದ್ದಾರೆ.
ಗುರುಪ್ರಸಾದ್ ಬಹಳ ಒಳ್ಳೆಯ ನಿರ್ದೇಶಕ, ಪ್ರತಿಭಾಶಾಲಿ, ಬರವಣಿಗೆ ಶೈಲಿ ಬಹಳ ಭಿನ್ನವಾಗಿತ್ತು. ಅವರು ಮನಸ್ಸು ಮಾಡಿದ್ದರೆ ಏನೋ ಸಾಧಿಸಬಹುದಾಗಿತ್ತು. ಆದರೆ ಎರಡು ವಿಷಯಗಳು ಅವರ ಬೆಳವಣಿಗೆಯ ತಡೆದವು. ಒಂದು ಮದ್ಯ ಮತ್ತು ಇನ್ನೊಂದು ಅಹಂ. ಅವೆರಡು ಇಲ್ಲದಿದ್ದರೆ ಗುರುಪ್ರಸಾದ್ ರಾಜ್ಯದ ನಂಬರ್ 1 ನಿರ್ದೇಶಕ ಆಗಿರುತ್ತಿದ್ದರು ಎಂದು ಜಗ್ಗೇಶ್ ಹೇಳಿದರು. ಯಾರ ಮಾತು ಕೇಳುತ್ತಿರಲಿಲ್ಲ:
‘ಮಠ’ ಸಿನಿಮಾ ಮಾಡಬೇಕಾದರೆ ಇದ್ದ ಗುರುಪ್ರಸಾದ್ ನನಗೆ ಈಗಲೂ ನೆನಪಿನಲ್ಲಿದೆ. ಆಗ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಕೈಯಲ್ಲಿ ನಾಲ್ಕಾದರೂ ಪುಸ್ತಕ ಇರುತ್ತಿತ್ತು, ಅದೇ ಕೊನೆ ಕೊನೆಗೆ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಬ್ಯಾಗಿನಲ್ಲಿ ನಾಲ್ಕು ಬಾಟಲಿ ಇರುತ್ತಿದ್ದವು. ಬೆಳಿಗ್ಗೆಯಿಂದ ಸಂಜೆವರೆಗೂ ಅವರಿಂದ ಮದ್ಯದ ವಾಸನೆ ಹೋಗುತ್ತಲೇ ಇರಲಿಲ್ಲ. ಇದರ ಜೊತೆಗೆ ಅಹಂ, ಸಿಟ್ಟು ಕೂಡ ಹೆಚ್ಚಿಗೆ ಇತ್ತು. ನನಗೆ ಸರಿ ಅನಿಸಿದ್ದನ್ನಷ್ಟೆ ಮಾಡುವೆ, ಯಾರ ಮಾತು ಕೇಳುವುದಿಲ್ಲ ಎಂಬ ಅಹಂ ಅವರಲ್ಲಿ ಹೆಚ್ಚಿಗೆ ಇತ್ತುʼ ಎಂದಿದ್ದಾರೆ ಜಗ್ಗೇಶ್.
Related Articles
Advertisement
ನಿರ್ಮಾಪಕರಿಗೆ ಗೌರವ ಕೊಡಲಿಲ್ಲ:‘ನಾನು ಅವರು ಸುಮಾರು ಹತ್ತು ವರ್ಷ ದೂರಾಗಿಬಿಟ್ಟಿದ್ದೆವು. ಆತನ ಜಗಳದ ಗುಣ ನನಗೆ ಇಷ್ಟವಾಗಿರಲಿಲ್ಲ. ಆ ನಂತರ ಕೆಲವು ಆಪ್ತರು ನಮ್ಮನ್ನು ಒಟ್ಟಿಗೆ ಕೆಲಸ ಮಾಡಲು ಸ್ಪೂರ್ತಿ ಕೊಟ್ಟರು, ನನ್ನ ಆತ್ಮೀಯರೆ ‘ರಂಗನಾಯಕʼ ಸಿನಿಮಾಕ್ಕೆ ಬಂಡವಾಳ ಹಾಕಿದರು. ನಿರ್ಮಾಪಕರು, ಗುರುಗೆ 90 ಲಕ್ಷ ಹಣ ಕೊಟ್ಟರು. ಅಷ್ಟೆಲ್ಲ ಮಾಡಿದರೂ ಗುರು ಅದಕ್ಕೆ ಗೌರವ ಕೊಡಲಿಲ್ಲ. ನನ್ನನ್ನು ಸೆಟ್ಗೆ ಎರಡು ಗಂಟೆಗೆ ಕರೆಸಿಕೊಂಡರೆ ಆತ ನಾಲ್ಕು ಗಂಟೆಗೆ ಬರುತ್ತಿದ್ದ. ಬಂದಾಗಲೂ ಮದ್ಯದ ವಾಸನೆ ಹೋಗಿರುತ್ತಿರಲಿಲ್ಲ. ಸೆಟ್ಗೆ ಬಂದು ಏನು ಶೂಟಿಂಗ್ ಮಾಡಬೇಕು ಎಂದು ಯೋಚಿಸುತ್ತಿದ್ದ, ಏನು ಡೈಲಾಗ್ ಇರಬೇಕು ಎಂದು ಬರೆಯುತ್ತಿದ್ದ. ಕೆಲವೊಮ್ಮೆ ನಾನೇ ಸೀನ್ಗಳನ್ನು ಬರೆದುಕೊಟ್ಟಿದ್ದೂ ಇದೆʼ ಎಂದಿದ್ದಾರೆ ಜಗ್ಗೇಶ್. ಮೊದಲ ಪತ್ನಿ ಸರಿದಾರಿಗೆ ತರಲು ಯತ್ನಿಸಿದ್ದಳು:
ಗುರು ಮೊದಲ ಪತ್ನಿ ಬಂಗಾರದಂತಹಾ ಮಹಿಳೆ ಇವನನ್ನು ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸಿದಳು. ಆದರೆ ಇವನು ಹೆಂಡದ ಚಟಕ್ಕೆ ದಾಸನಾಗಿದ್ದ. ಈತನನ್ನು ಸರಿದಾರಿಗೆ ತರಲು ಆಕೆ ಸಾಕಷ್ಟು ಪ್ರಯತ್ನ ಪಟ್ಟಳು ಆದರೆ ಸಾಧ್ಯವಾಗಲಿಲ್ಲ. ಆ ನಂತರ ಎರಡನೇ ಮದುವೆಯಾದ ಆ ಮಹಿಳೆಗೆ ಮೂರು ವರ್ಷದ ಹೆಣ್ಣು ಮಗು ಇದೆ. ಆಕೆಯನ್ನೂ ಅನಾಥಳನ್ನಾಗಿ ಮಾಡಿದ. ‘ರಂಗನಾಯಕ’ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಒಮ್ಮೆ ನನ್ನನ್ನು ಅವನ ಮನೆಗೆ ಕರೆದಿದ್ದ, ಮನೆಗೆ ಹೋದರೆ ಮನೆಯ ತುಂಬದ ಎಣ್ಣೆ ಬಾಟಲಿಗಳೇ ತುಂಬಿದ್ದವು’ ಎಂದು ನೆನಪು ಮಾಡಿಕೊಂಡಿದ್ದಾರೆ ನಟ ಜಗ್ಗೇಶ್. ನನ್ನ ಅಪಾರ ಅಭಿಮಾನಿ:
ಗುರು ಪ್ರಸಾದ್ ಜೊತೆಗೆ ಕೆಲವು ಜಾಗರಣೆಗಳ ಮಾಡಿದ್ದೇನೆ. ನನ್ನ ಒಂದು ಪ್ರಶ್ನೆಗೆ ನೂರು ಉತ್ತರಗಳ ಕೊಡುತ್ತಿದ್ದ, ಇದು ಬರವಣಿಗೆಗೆ ಬಂದ್ರೆ ಕನ್ನಡ ಚಿತ್ರರಂಗಕ್ಕೆ ಉತ್ತಮ ಸಿನಿಮಾಗಳು ಆಗುತ್ತಿದ್ದವು. ಅವನು ನನಗೆ ಅಪಾರವಾದ ಅಭಿಮಾನಿ, ಅವನು ನನಗೆ ಹೇಳುತ್ತಿದ್ದ ಗುರೂಜೀ ನೀವು ಯಂಗ್ ಪಾತ್ರಗಳನ್ನೇ ಮಾಡಿ, ಮುದುಕರು ರೀತಿ ಪಾತ್ರಗಳ ಮಾಡಬೇಡಿ ನಿಮಗೆ ಅಂತಹ ಯೌವನದ ಪಾತ್ರಗಳ ಕತೆಗಳ ಬರೆಯುತ್ತೇನೆ ಎಂದು ಹೇಳಿದ್ದ.