Advertisement

Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ

03:00 PM Nov 09, 2024 | Team Udayavani |

ರಾಯಚೂರು: ಸಿಕ್ಕ ಸಿಕ್ಕಲೆಲ್ಲ ಅದನ್ನೇ ಕೇಳುತ್ತಿದ್ದರು. ರೋಡಲ್ಲಿ ಸೆಲ್ಫಿ ತಗೊಂಡ್ರು ಕೇಳುತ್ತಿದ್ದರು. ಅದಕ್ಕೆ ಅನೌನ್ಸ್ ಮಾಡಿಬಿಟ್ಟಿದ್ದೇನೆ ಎಂದು ಡಾಲಿ ಧನಂಜಯ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ‌ನೀಡಿದರು.

Advertisement

ನಗರದಲ್ಲಿ ನ.9ರ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮದುವೆಗೆ ನಿಮ್ಮನ್ನೆಲ್ಲ ಕರಿಯುವೆ, ಬಂದು ಹಾರೈಸಿ ಎಂದೂ ಆಹ್ವಾನಿಸಿದರು.

ಜೀಬ್ರಾ,‌ ಪುಷ್ಪ-2 ಶೀಘ್ರ ತೆರೆಗೆ

ಡಾಲಿ ಧನಂಜಯ ನಟನೆಯ ಜೀಬ್ರಾ, ಪುಷ್ಪಾ- 2 ಸಿನಿಮಾಗಳು ಶೀಘ್ರ ತೆರೆಗೆ ಬರಲಿವೆ. ಈ ಬಗ್ಗೆ ಅಪ್‌ಡೇಟ್ಸ್ ನೀಡಿದ ನಟ, ನ.22 ರಂದು ಜೀಬ್ರಾ ಸಿನಿಮಾ ತೆರೆಗೆ ಬರಲಿದ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಬಹು ನಿರೀಕ್ಷಿತ ಪುಷ್ಪ-2 ಡಿ.5ರಂದು ಬಿಡುಗಡೆಯಾಗಲಿದೆ. ನನ್ನ ಪಾತ್ರದ ಬಗ್ಗೆ ಸಿನಿಮಾ ನೋಡಿದ ಮೇಲೆ ಗೊತ್ತಾಗಲಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಜನ ನೋಡೊಕೆ ರಫ್ ಆಂಡ್ ಟಫ್ ಆದರೂ, ಮನಸ್ಸಿನಿಂದ ಸ್ವೀಟು. ಈ ಭಾಗದ ಬಗ್ಗೆ ಬಹಳ ಪ್ರೀತಿ ಇದೆ. ಈ ಭಾಗದ ಜನರ ಅಭಿಮಾನಕ್ಕೆ ಬೆಲೆ ಕಟ್ಟಲಾಗದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next