Advertisement

ಮರಳು ಸಮಸ್ಯೆ ಬಗೆಹರಿಸಿ

05:28 PM Nov 10, 2018 | |

ಕಾರವಾರ: ಶರಾವತಿ, ಅಘನಾಶಿನಿ, ಗಂಗಾವಳಿ ನದಿಗಳಿಂದ ಮರಳು ಗಣಿಗಾರಿಕೆಗೆ ಅನುಮತಿ ನೀಡಿ, ಕಾಳಿ ನದಿಯಿಂದ ಮಾತ್ರ ಮರಳು ಗಣಿಗಾರಿಕೆಗೆ ನಿರ್ಬಂಧ ಹೇರಿರುವುದನ್ನು ಕಾರವಾರ ಎಂಜಿನಿಯರ್ ಅಸೋಸಿಯೇಶನ್‌, ಆರ್ಕಿಟೆಕ್ಟ್ ಆಸೋಸಿಯೇಶನ್‌, ಸೆಂಟರಿಂಗ್‌ ಗುತ್ತಿಗೆದಾರರ ಸಂಘಟನೆಗಳು ಖಂಡಿಸಿವೆ.

Advertisement

ಪರಿಸರದ ಕಾರಣ ನೀಡಿ ಕೇಂದ್ರ ಸರ್ಕಾರದ ಸಮಿತಿ ಕಾಳಿ ನದಿಯಲ್ಲಿ ಮರಳುಗಾರಿಕೆಗೆ ನಿರ್ಬಂಧ ಹೇರಿದೆ ಎಂದು ಪರಿಸರ ಅಧಿಕಾರಿ ಹಾಗೂ ಜಿಲ್ಲಾಡಳಿತ ಹೇಳುತ್ತಿದೆ. ಕಾರವಾರದ ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆಗೆ ಎಲ್ಲಾ ನಿಯಮಗಳನ್ನು ಹೇರಿ ಅನುಮತಿ ನೀಡಬೇಕು. ಮರಳುಗಾರಿಕೆ ನೀತಿಯಡಿ ಮರಳು ತೆಗೆಯಲು ಅನುಮತಿ ಬೇಕು. ಇದು ಇಲ್ಲಿನ ಕಟ್ಟಡ ಕಾಮಗಾರಿಗಳಿಗೆ ಕಾಳಿ ನದಿಯ ಮರಳುಗಾರಿಕೆ ಅಗತ್ಯವಾಗಿದೆ ಎಂದು ಮನೆ ಕಟ್ಟಡ, ಅಪಾರ್ಟಮೆಂಟ್‌ ನಿರ್ಮಾಣದ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಜಿಲ್ಲಾಡಳಿತದ ಅಪರ ಜಿಲ್ಲಾಧಿಕಾರಿ ಡಾ|ಸುರೇಶ್‌ ಹಿಟ್ನಾಳರ ಮೂಲಕ ಶುಕ್ರವಾರ ನೀಡಿದವು.

ಜಿಲ್ಲೆಯ ಮರಳು ಬೇರೆಡೆಗೆ ಬೇಡ: ಉತ್ತರ ಕನ್ನಡ ಜಿಲ್ಲೆಯ ನದಿಗಳಿಂದ ಎತ್ತಿದ ಮರಳನ್ನು ಪಕ್ಕದ ಜಿಲ್ಲೆಗೆ ರಫ್ತು ಮಾಡಲು ನಿರ್ಬಂಧ ಹೇರಬೇಕು ಎಂದು ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರದಲ್ಲಿ ಮೀನುಗಾರಿಕೆ ಮತ್ತು ಬಂಗಾರದ ಆಭರಣ ತಯಾರಿಕೆ ಬಿಟ್ಟರೆ ಉಳಿದಿರುವುದು ಕಟ್ಟಡ ನಿರ್ಮಾಣ ಕೆಲಸ ಮಾತ್ರ. ಈಗ ಮರಳು ಸಿಗದೇ ಕಟ್ಟಡ ನಿರ್ಮಾಣ ಕಾಮಗಾರಿ ಸಹ ನಿಲ್ಲುವ ಹಂತಕ್ಕೆ ಬಂದಿದೆ. ಕಾಳಿ ನದಿಯಲ್ಲಿ ಮರಳು ದಿನ್ನೆಗಳನ್ನು ಗುರುತಿಸಲಾಗಿದೆ. ಲಕ್ಷ ಲಕ್ಷ ಕ್ಯೂಬಿಕ್‌ ಮೀಟರ್‌ ಮರಳು ಕಾರವಾರ ನಗರಕ್ಕೆ ಬೇಕಾಗುತ್ತದೆ. ಹಾಗಾಗಿ ಕಾಳಿ ನದಿಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡಬೇಕು. ಸರ್ಕಾರ ಎಲ್ಲಾ ನಿರ್ಬಂಧ ಹಾಕಿ ಗಣಿಗಾರಿಕೆಗೆ ಅನುಮತಿ ನೀಡಲಿ. ಪರಿಸರ ಸಮತೋಲನದ ಜೊತೆಗೆ ಉದ್ಯಮವೂ ನಡೆಯಬೇಕಿದೆ. ಜಿಲ್ಲೆಯ ನದಿಗಳ ಮರಳುಗಾರಿಕೆ ಮಾಡಿದ ಮರಳು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ರಫ್ತು, ಸಾಗಾಟ ಹಾಗೂ ಮಾರಾಟದ ಮೇಲೆ ಜಿಲ್ಲಾಡಳಿತ ನಿರ್ಬಂಧ ಹೇರಲಿ. ಆಗ ಸ್ಥಳೀಯರಿಗೆ ಮರಳು ಸಿಗುವಂತಾಗುತ್ತದೆ ಎಂದರು. ಮರಳು ಸಮಸ್ಯೆಗೆ ನ.18 ರೊಳಗೆ ಜಿಲ್ಲಾಡಳಿತ ಪರಿಹಾರ ಹುಡಕಬೇಕು. ಇಲ್ಲದೇ ಹೋದರೆ ನ.19 ರಂದು ಸಾಂಕೇತಿಕ ಧರಣಿ ಮಾಡಲಾಗುವುದು. ಆಗಲೂ ಸಮಸ್ಯೆ ಬಗೆಹರಿಯದಿದ್ದರೆ ಮರಳು ಗಣಿಗಾರಿಕೆ ಉದ್ಯಮಿಗಳು,ಕಾರ್ಮಿಕರು, ಸಾರ್ವಜನಿಕರ ಸಹಕಾರ ಪಡೆದು ದೊಡ್ಡ ಹೋರಾಟ ರೂಪಿಸಲಾಗುವುದು ಎಂದರು.

ಕರಾವಳಿ ಉತ್ಸವಕ್ಕೆ ಬಹಿಷ್ಕಾರ: ಮರಳು ಸಮಸ್ಯೆ ಬಗೆಹರಿಸದಿದ್ದರೆ ಕರಾವಳಿ ಉತ್ಸವಕ್ಕೆ ಬಹಿಷ್ಕಾರ ಹಾಕುತ್ತೇವೆ ಎಂದು ಸಿವಿಲ್‌ ಎಂಜಿನಿಯರ್ ಸಂಘದ ಕಾರ್ಯದರ್ಶಿ ಗೋವೇಕರ್‌ ಹೇಳಿದರು. ಕಾರವಾರದ ಜನರು ಕಷ್ಟದಲ್ಲಿದ್ದಾರೆ. ಮರಳು ಸಿಗುತ್ತಿಲ್ಲ. ಎಂ ಸ್ಯಾಂಡ್‌ ಕಲಬೆರಕಿ ಬರುತ್ತಿದೆ. ಮೇಲಾಗಿ ಅದು ದುಬಾರಿಯಾಗಿದೆ. ಅದನ್ನು ಬಳಸಲು ಮಧ್ಯಮ ವರ್ಗದವರು ಅನುಮಾನ ಪಡುತ್ತಿದ್ದಾರೆ ಎಂದರು. ಎಂ ಸ್ಯಾಂಡ್‌ನ್ನು ಸರ್ಕಾರಿ ಕಾಮಗಾರಿಗಳಿಗೆ ಬಳಸಲಿ. ಸಾಂಪ್ರದಾಯಿಕ ಮರಳನ್ನು ಜನರಿಗೆ, ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ನೀಡಲಿ ಎಂದರು.

Advertisement

ಹಳಿಯಾಳ, ಶಿರಸಿಯಲ್ಲಿ ಮರಳು ಡಿಪೋ ಮಾಡಲಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮರಳು ಡಿಪೋ ಯಾಕೆ ಬೇಡ ಎಂದು ಅವರು ಪ್ರಶ್ನಿಸಿದರು. ಕೈಗಾ, ಸೀಬರ್ಡ್‌ ಯೋಜನೆಗಳು ಇನ್ನು ನಿರ್ಮಾಣ ಹಂತದಲ್ಲಿವೆ. ಸೀಬರ್ಡ್‌ ಪ್ರೊಜೆಕ್ಟ್ ಎರಡನೇ ಹಂತ ನಡೆದಿದೆ. ಕೈಗಾ 5-6 ಬರಲಿದೆ. ಹಾಗಾಗಿ ಇಲ್ಲಿ ಮರಳುಗಾರಿಕೆ, ಡಿಪೋ ಸಹ ಬೇಕು ಎಂದರು. 7 ವರ್ಷಗಳ ಹಿಂದೆ ನಡೆದ ಗೊತ್ತು ಗುರಿಯಿಲ್ಲದ ಮರಳುಗಾರಿಕೆಗೆ ಸರ್ಕಾರ ಹೊಣೆ. ಸರ್ಕಾರ ಆಗಲೇ ಮರಳು ನೀತಿ ರೂಪಿಸಿ, ರಾಜಧನ ಸಂಗ್ರಹಸಿದ್ದರೆ ಇವತ್ತಿನ ನಿರ್ಬಂಧ ಬರುತ್ತಿರಲಿಲ್ಲ. ಹಾಗಾಗಿ ಸರ್ಕಾರವೇ ಈ ಸಮಸ್ಯೆ ಸರಿಪಡಿಸಬೇಕು ಎಂದರು. ಪ್ರದೀಪ ಗುನಗಿ, ನೂರ್‌ ಅಹಮ್ಮದ್‌, ಆರ್ಕಿಟೆಕ್ಟ ಅಸೋಸಿಯೇಶನ್‌ ಸಂಘದ ಅಧ್ಯಕ್ಷೆ, ಕಾರ್ಯದರ್ಶಿ, ಸೆಂಟರಿಂಗ್‌ ಕಾಮಗಾರಿ ಸಂಘಟನೆ ಅಧ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮರಳು ಡಿಪೋ ಕಾರವಾರದಲ್ಲಾಗಲಿ
ಹಳಿಯಾಳ, ಶಿರಸಿಯಲ್ಲಿ ಮರಳು ಡಿಪೋ ಮಾಡಲಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮರಳು ಡಿಪೋ ಯಾಕೆ ಬೇಡ ಎಂದು ಅವರು ಪ್ರಶ್ನಿಸಿದರು. ಕೈಗಾ, ಸೀಬರ್ಡ್‌ ಯೋಜನೆಗಳು ಇನ್ನು ನಿರ್ಮಾಣ ಹಂತದಲ್ಲಿವೆ. ಸೀಬರ್ಡ್‌ ಎರಡನೇ ಹಂತ ನಡೆದಿದೆ. ಕೈಗಾ 5-6 ಬರಲಿದೆ. ಹಾಗಾಗಿ ಇಲ್ಲಿ ಮರಳುಗಾರಿಕೆ, ಡಿಪೋ ಸಹ ಬೇಕು ಎಂದರು. 7 ವರ್ಷಗಳ ಹಿಂದೆ ನಡೆದ ಗೊತ್ತು ಗುರಿಯಿಲ್ಲದ ಮರಳುಗಾರಿಕೆಗೆ ಸರ್ಕಾರ ಹೊಣೆ. ಸರ್ಕಾರ ಆಗಲೇ ಮರಳು ನೀತಿ ರೂಪಿಸಿ, ರಾಜಧನ ಸಂಗ್ರಹಸಿದ್ದರೆ ಇವತ್ತಿನ ನಿರ್ಬಂಧ ಬರುತ್ತಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next