Advertisement

ಆರ್‌ಟಿಇ ಸಮಸ್ಯೆ ಬಗೆಹರಿಸಿ

05:35 PM May 15, 2018 | |

ಹುನಗುಂದ: ಆರ್‌ಟಿಇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪಾಲಕರು ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆಯಿತು.

Advertisement

ಪ್ರತಿಭಟನೆಯ ನೇತೃತ್ವ ವಹಿಸಿ ಸಮಾಜ ಸೇವಕ ರಾಜು ಬಡಿಗೇರ ಮಾತನಾಡಿ, ಪಾಲಕರೊಂದಿಗೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದ್ದು, ಇದರಿಂದ ತಾಲೂಕಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಶಿಕ್ಷಣ ಇಲಾಖೆ ಬಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಚುಣಾವಣೆ ಸಂದರ್ಭದಲ್ಲಿ ಎರಡು ದಿನ ರಜೆ ಬಂದಿದ್ದು ಅರ್ಜಿ ಸಲ್ಲಿಸಲು ಸಮಯದ ಅಭಾವ ಉಂಟಾಗಿದೆ. ಆನ್‌ಲೈನ್‌ದಲ್ಲಿ ಅರ್ಜಿ ಸಲ್ಲಿಸಲು ಹೋದರೆ ಮತ್ತೆ ಮರಳಿ ಪ್ರಯತ್ನಿಸಿ ಎಂದು ಮೇಸೇಜ್‌ ಬರುತ್ತದೆ ಇದರಿಂದ ವಿದ್ಯಾರ್ಥಿಗಳ ಪಾಲಕರಲ್ಲಿ ಆತಂಕ ಉಂಟಾಗಿದೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಈ ಕೂಡಲೇ ಪಾಲಕರಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ದಿನಾಂಕ ಮುಂದೂಡಬೇಕು ಎಂದು ಆಗ್ರಹಿಸಿದರು. 

ಪಾಲಕ ಇಮ್ತಿಯಾಜ ಖತಿಬ್‌ ಮಾತನಾಡಿ, ಆರ್‌ಟಿಎ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ಬಡ ಜನಸಾಮಾನ್ಯ ಪಾಲಕರಿಗೆ ತೊಂದರೆಯಾಗಿದೆ. ನಿಜವಾದ ಪಲಾನುಭವಿಗಳಿಗೆ ಮಹತ್ವಾಕಾಂಕ್ಷಿ ಈ ಯೋಜನೆಯ ಸೌಲಭ್ಯ ದೊರೆಯದೆ ವಂಚಿತರಾಗುತಿದ್ದಾರೆ. ಕಾರಣ ಯೋಜನೆಯನ್ನು ಸರ್ಕಾರ ಸರಳೀಕರಣಗೊಳಿಸಲು ಒತ್ತಾಯಿಸಿದರು. ಜಗದೀಶ ಬಡಿಗೇರ, ಮಂಜು ಹವಾಲ್ದಾರ, ಎಂ.ಐ.ಕಂದಗಲ್ಲ , ಮಹಾಂತೇಶ ಬಾವಿಕಟ್ಟಿ, ಎಂ.ಎಸ್‌. ಮೇಲಿನಮನಿ, ಎಂ.ಎಚ್‌. ಕಲಬುರ್ಗಿ, ಕೆ.ಎನ್‌.ದನ್ನೂರ, ಎನ್‌.ಎ. ಮುಕ್ಕಣ್ಣವರ, ಯಲ್ಲಪ್ಪ ಚುಂಚಾ, ಪಿ.ವಿ. ಮನ್ನಾಪುರ ನೂರಾರು ಸಂಖ್ಯೆಯಲ್ಲಿ ಪಾಲಕರು ಭಾವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next