Advertisement

“ಧಾರ್ಮಿಕ ಕಾರ್ಯದಲ್ಲಿ ಏಕತಾ ಭಾವದಿಂದ ಪಾಲ್ಗೊಳ್ಳೋಣ’

03:46 PM Feb 23, 2017 | Team Udayavani |

ಈಶ್ವರಮಂಗಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯು ಫೆ. 22ರಿಂದ ಮಾ. 1ರ ವರೆಗೆ ನಡೆಯಲಿದ್ದು ಇದರ ಅಂಗವಾಗಿ ಸಾಂಸ್ಕತಿಕ ಕಾರ್ಯಕ್ರಮಕ್ಕೆ ಪಡುಮಲೆ ಕೋಟಿ ಚೆನ್ನಯ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದಾRಡಿ ಚಾಲನೆ ನೀಡಿದರು.

Advertisement

ಅನಂತರ ಅವರು ಮಾತನಾಡಿ,  ದೇವಸ್ಥಾನಗಳು ಹಿಂದುಗಳ ಶ್ರದ್ಧಾ ಕೇಂದ್ರಗಳು ಆಗಿವೆ. ಧಾರ್ಮಿಕ ಕೇಂದ್ರಗಳು ಬಣ ರಾಜಕೀಯದಿಂದ ತತ್ತರಿಸುತ್ತಿವೆ. ನಾವೆಲ್ಲರೂ ಒಂದೇ ಮನಸ್ಸಿನಿಂದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದರು.

ಬೆಳಗ್ಗೆ ಗಣಪತಿಹೋಮ, ಧ್ವಜಾರೋಹಣ, ಬಲಿವಾಡು ಶೇಖರಣೆ, ಮಧ್ಯಾಹ್ನ ಈಶ್ವರಮಂಗಲ  ಹಿಂ. ಜಾಗರಣ ವೇದಿಕೆಯ ಪ್ರಾಯೋಜಕತ್ವದಲ್ಲಿ ಉದಯಕುಮಾರ ಪಟ್ಲಡ್ಕ ಸಂಯೋಜನೆಯಲ್ಲಿ ಕದಂಬ ಕೌಶಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.ಮಧ್ಯಾಹ್ನ ಮಹಾಪೂಜೆ, ದೇವರ ಬಲಿ, ಮಹಾಸಂತರ್ಪಣೆ ನಡೆಯಿತು. ರಾತ್ರಿ ನಿತ್ಯಬಲಿ ನಡೆಯಿತು.ಇಂದಿನ ಕಾರ್ಯಕ್ರಮ ಬೆಳಗ್ಗೆ ಮತ್ತು ರಾತ್ರಿ ನಿತ್ಯಬಲಿ, ರಾತ್ರಿ ತುಳು ಹಾಸ್ಯ ಸಾಮಾಜಿಕ ನಾಟಕ “ಎನ್ನಿಲೆಕ್ಕ ಒವ್ವುಲಾ ಇಜ್ಜಿ “ಪ್ರದರ್ಶನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next