Advertisement

ಬೆಂಗ್ಳೂರಿನ ಸ್ನೇಹ ಸನ್ಯಾಸಿನಿ 

06:40 AM Jan 24, 2018 | Team Udayavani |

ಮುಂಬೈ: ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ, ಕೈತುಂಬ ಸಂಬಳ, ದೊಡ್ಡ ಬ್ಯಾಂಕ್‌ ಬ್ಯಾಲೆನ್ಸ್‌, ಐಶಾರಾಮಿ ಜೀವನ…  ಇಂಥದ್ದೊಂದು ವೈಭವೋಪೇತ ಬಾಳ್ವೆ ಮಾಡುವುದು ಇಂದಿನ ಲಕ್ಷಾಂತರ ಯುವ ಜನರ ಕನಸು. ಆದರೆ, ವಿಚಿತ್ರವೆಂದರೆ, ಕೆಲವೊಮ್ಮೆ ಕೆಲವರಿಗೆ ಇಂಥ ಜೀವನ ಬೇಡ ಎನ್ನಿಸಿ, ಸನ್ಯಾಸತ್ವದ ಕಡೆಗೆ ವಾಲುತ್ತಾರೆ. ಇಂಥವರ ಸಾಲಿಗೆ ಬೆಂಗಳೂರಿನ ಸ್ನೇಹಾ ಕಟಾರಿಯಾ ಸೇರ್ಪಡೆಗೊಂಡಿದ್ದಾರೆ. 

Advertisement

ಅಮೆರಿಕ ಮೂಲದ ಗೋಲ್ಡ್‌ಮನ್‌ ಸ್ಯಾಚ್‌ನಲ್ಲಿ ಉದ್ಯೋಗದಲ್ಲಿದ್ದು ಉತ್ತಮ ವೇತನ, ವೈಭವಯುತ ಜೀವನವಿದ್ದರೂ ಮಂಗಳವಾರ ಜೈನ ಸಾಧ್ವಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರ ಹೆಸರೀಗ ಸಾಧ್ವಿಜಿ ದಕ್ಷನಿಧಿ ಶ್ರೀಜಿ. ಮಂಗಳವಾರ, ಮುಂಬೈನಲ್ಲಿ ನಡೆದ ಚಿಕೂವಾಡಿಯಲ್ಲಿ ಸ್ಥಳೀಯ ಜೈನ ಸಮುದಾಯ ಆಯೋಜಿಸಿದ್ದ “ವಿಜಯ ಪ್ರಶಾಂತ್‌ ಉತ್ಸವ್‌’ನಲ್ಲಿ ಇವರು ಸನ್ಯಾಸತ್ವ ಸ್ವೀಕರಿಸಿದರು. 

ಇದೇ ಸಮಾರಂಭದಲ್ಲಿ, ವೆಬ್‌ ಡಿಸೈನರ್‌ ಆಗಿದ್ದ ಮುಳಂದ್‌ನ ನರ್ವೋದಯ ನಗರದ ಪಾರೇಖ್‌ ಶಾ , ವಿಜ್ಞಾನ ವಿದ್ಯಾರ್ಥಿನಿ ವಿರಾಳ್‌, ಕಾನೂನು ವಿದ್ಯಾರ್ಥಿನಿ ದ್ರಾಷ್ಠಿ ದೆಧಿಯಾ ಸೇರಿ ಹಲವು ಯುವತಿಯರು, ಪುರುಷರು ಸನ್ಯಾಸತ್ವ ಸ್ವೀಕರಿಸಿದರು. 

ವಿಶೇಷ ಮೆರವಣಿಗೆ 
ಸನ್ಯಾಸತ್ವ ಪಡೆದ ಎಲ್ಲರನ್ನು ಬಿಕ್ಕೂವಾಡಿಯ ಬೊರಿವಿಲಿ ರಸ್ತೆಯಲ್ಲಿ ವೈಭವೋಪೇತ ರಥಗಳಲ್ಲಿ ಮೆರವಣಿಗೆ ಮಾಡಿದ್ದು ಆಕರ್ಷಣೀಯವಾಗಿತ್ತು. ದೀಕ್ಷೆ ಪಡೆಯುವ ಪ್ರತಿಯೊಬ್ಬರೂ ಒಂದೊಂದು ರಥದಲ್ಲಿ ನಿಂತು ತಮ್ಮಲ್ಲಿದ್ದ ಅಮೂಲ್ಯ, ಬೆಲೆಬಾಳುವ ವಸ್ತುಗಳನ್ನು ಮೆರವಣಿಗೆ ನೋಡಲು ಬಂದಿದ್ದ ಜನರ ಕಡೆಗೆ ಎಸೆಯುತ್ತಾ ಮುನ್ನಡೆದು, ಆನಂತರ ದೀಕ್ಷೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next