Advertisement

ಮಾರ್ಚ್‌ನಲ್ಲಿ ಅಂಗನವಾಡಿಗೆ ಸ್ಮಾರ್ಟ್‌ಫೋನ್‌

02:07 AM Feb 12, 2020 | mahesh |

ಬೆಳ್ತಂಗಡಿ: ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಪೋಷಣ್‌ ಅಭಿಯಾನ ಕಾರ್ಯಕ್ರಮದಡಿ ಮಾರ್ಚ್‌ನಿಂದ ಅಂಗನವಾಡಿ ಸಮಗ್ರ ಚಟುವಟಿಕೆ ದಾಖಲೀಕರಣ ಸ್ಮಾರ್ಟ್‌ ಆಗಲಿದ್ದು, ಮಾರ್ಚ್‌ ಮೊದಲ ವಾರ ರಾಜ್ಯಾದ್ಯಂತ 66 ಸಾವಿರ ಅಂಗನವಾಡಿಗಳಿಗೆ ಸ್ಮಾರ್ಟ್‌ ಫೋನ್‌ ವಿತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅನ್ನಾಸಾಹೇಬ್‌ ತಿಳಿಸಿದರು.

Advertisement

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರ ಶ್ರಮಿಕ ಕಚೇರಿಗೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಸುಧಾರಣೆ ಅವಶ್ಯವಾಗಿರುವ ನಿಟ್ಟಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ, ಆಹಾರ ನಿರ್ವಹಣೆ, ಗರ್ಭಿಣಿ ಸ್ತ್ರೀಯರ, ಬಾಣಂತಿಯರ ಸಮಗ್ರ ದಾಖಲೆಗಳನ್ನು ರಾಜ್ಯ ಹಾಗೂ ಕೇಂದ್ರ ಸಚಿವಾಲಯಗಳು ಅಲ್ಲಿಂದಲೇ ವೀಕ್ಷಿಸಬಹುದಾಗಿದೆ ಎಂದರು.

ಸ್ವಂತ ನಿವೇಶನಕ್ಕೆ ಚಿಂತನೆ
ರಾಜ್ಯದ 66 ಸಾವಿರ ಅಂಗನವಾಡಿಗಳಲ್ಲಿ ಬಹುತೇಕ ನಿವೇಶನ ಕೊರತೆ ಇದ್ದು, ನಿವೇಶನ ಪಡೆಯುವುದು ಹಾಗೂ ಹೊಸ ಕಟ್ಟಡ ನಿರ್ಮಾಣ ಕುರಿತು ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗುವುದು. 10 ವರ್ಷಗಳಿಂದ ಮಕ್ಕಳಿಗೆ ಹಳೇ ಆಟಿಕೆ ನೀಡುತ್ತಿದ್ದು, ಹೊಸ ವಿಧಾನದ ಆಟಿಕೆ ಸಾಮಗ್ರಿ ವಿತರಣೆ, ಸುಧಾರಿತ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಿಂತಿಸಲಾ ಗಿದೆ. ಈಗಾಗಲೇ ಅಂಗನವಾಡಿ ಶಿಕ್ಷಕಿಯರಿಗೆ ಕೇಂದ್ರ ಸರಕಾರ ಶೇ. 60 ಹಾಗೂ ರಾಜ್ಯ ಸರಕಾರದ ಶೇ. 40 ಅನುದಾನ ದೊಂದಿಗೆ 2,000 ರೂ. ಗೌರವಧನ ಹೆಚ್ಚಿಸಿದೆ ಎಂದರು.

ಹೊಸ ನೇಮಕಾತಿ
ಅಂಗನವಾಡಿ ಅಭಿವೃದ್ಧಿಗೆ ಹಲವು ವರ್ಷಗಳಿಂದ ನೇಮಕಾತಿ ಹಾಗೂ ಭರ್ತಿ ಕಾರ್ಯ ನಡೆಯದೆ ತೊಂದರೆ ಯಾಗಿತ್ತು. ರಾಜ್ಯ ಬಿಜೆಪಿ ಸರಕಾರ ಬಂದ ಬಳಿಕ 6 ತಿಂಗಳಲ್ಲಿ ಅಂಗನವಾಡಿ ಉನ್ನತ ಹುದ್ದೆಗಳನ್ನು ಈಗಾಗಲೇ ಭರ್ತಿಗೊಳಿಸಲಾಗಿದೆ. ಸುಮಾರು 628 ಮೇಲ್ವಿಚಾರಕ ಹುದ್ದೆ
ನೇಮಕ ಮಾಡಿ ತರಬೇತಿ ನಿಡಲಾಗುತ್ತಿದೆ ಎಂದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ತಾಲೂಕಿನ ಅಂಗನವಾಡಿಗಳಿಗೂ ನಿವೇಶನದ ಸಮಸ್ಯೆಯಿದ್ದು ಡಿಸಿ ಮನ್ನಾ ಭೂಮಿ ಬಗ್ಗೆ ಗೊಂದಲವಿದೆ. ಅಂಗನವಾಡಿ ಕೇಂದ್ರಗಳಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಸಚಿವರಲ್ಲಿ ಶಾಸಕರು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next