Advertisement
ಇಲ್ಲಿನ ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ “ಮಂಗಳೂರು ಲಿಟ್ ಫೆಸ್ಟ್’ನ ಆರನೇ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿ, ಕಟ್ಟುವ ಕೆಲಸವನ್ನು ಮುರಿದವರೇ ಮಾಡಬೇಕು, ಹಾಗೆ ಮಾಡಬೇಕಾದರೆ ಅಳಲಿಗೆ ಕಿವಿಕೊಡುವ ಸೂಕ್ಷ್ಮತೆ ಬೇಕು, ಅದನ್ನು ರಾಮಾಯಣ ಹೇಳುತ್ತದೆ ಎಂದು ತಿಳಿಸಿದರು.
ಕಟ್ಟುವ ಉತ್ಸಾಹ ಮತ್ತು ನೋವಿಗೆ ಮಿಡಿಯುವ ಆದ್ರìತೆ ಇವೆರಡೂ ಸೇರಿದಾಗ ಅಲ್ಲಿ ನಮಗೆ ಗೊತ್ತಿಲ್ಲದಂತೆಯೇ ಸೃಷ್ಟಿ ಶೀಲತೆ ಪ್ರಕಟವಾಗುತ್ತದೆ ಎಂದರು.
Related Articles
Advertisement
ಮಹಿಳಾ ಸಶಕ್ತೀಕರಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಗೆ ಮಂಗಳೂರು ಲಿಟ್ ಫೆಸ್ಟ್ ಪರವಾಗಿ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಮಧುರಾ ಹೆಗ್ಡೆ ಅವರು ಪ್ರಶಸ್ತಿ ಸ್ವೀಕರಿಸಿದರು. ಭಾರತ್ ಫೌಂಡೇಶನ್ ಟ್ರಸ್ಟಿಗಳಾದ ಕ್ಯಾ| ಬೃಜೇಶ್ ಚೌಟ, ಶ್ರೀರಾಜ್ ಗುಡಿ ಉಪಸ್ಥಿತರಿದ್ದರು.ಭಾರತ್ ಫೌಂಡೇಶನ್‌ನ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು. ಅಭಿಷೇಕ್ ಶೆಟ್ಟಿ ಮತ್ತು ನಿಧಿ ಹೆಗ್ಡೆ ನಿರೂಪಿಸಿದರು. ಜ. 20, 21ರಂದು ಕಲಾಪ
ಜ. 20, 21ರಂದು ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ವಿವಿಧ ಕಲಾಪಗಳು ನಡೆಯಲಿದ್ದು, ದಿ ಐಡಿಯಾ ಆಫ್ ಭಾರತ್ ಎಂಬ ವಿಚಾರದಲ್ಲಿ ಹಲವು ಮಗ್ಗುಲಗಳಲ್ಲಿ ವಿಷಯಮಂಡನೆ, ಸಮಾಲೋಚನೆಗಳು ನಡೆಯಲಿವೆ.