Advertisement

ತೆಲಂಗಾಣ –ಛತ್ತೀಸ್‌ಗಡ ಗಡಿಯಲ್ಲಿ ಗುಂಡಿನ ಚಕಮಕಿ : 6 ನಕ್ಸಲರ ಹತ್ಯೆ

07:34 PM Dec 27, 2021 | Team Udayavani |

ಹೈದರಾಬಾದ್‌ : ತೆಲಂಗಾಣ ಮತ್ತು ಛತ್ತೀಸ್‌ಗಡದ ಗಡಿ ಪ್ರದೇಶದಲ್ಲಿ ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸುಕ್ಮಾ ಜಿಲ್ಲೆಯ ದಕ್ಷಿಣ ಬಸ್ತಾರ್‌ ಪ್ರದೇಶದಲ್ಲಿ ಅವಿತಿರುವ ಮಾವೋವಾದಿಗಳು ಪೊಲೀಸರ ಮೇಲೆ ದಾಳಿಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ತೆಲಂಗಾಣ ಮತ್ತು ಛತ್ತೀಸ್‌ಗಡ ಪೊಲೀಸರು ಹಾಗೂ ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು.

ಬೆಳಗ್ಗೆ 6.30ರಿಂದ 7 ಗಂಟೆಯವರೆಗೆ ಗುಂಡಿನ ಚಕಮಕಿ ನಡೆದಿದ್ದು, 6 ನಕ್ಸಲರನ್ನು ಹತ್ಯೆಗೈಯ್ಯಲಾಯಿತು ಎಂದು ಭದ್ರಾದ್ರಿ ಕೋಥಗುಡೇಮ್‌ ಜಿಲ್ಲೆಯ ಎಸ್‌ಪಿ ಸುನೀಲ್‌ ದತ್‌ ಹೇಳಿದ್ದಾರೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರದ ಸಿಆರ್ ಪಿಎಫ್ ಯೋಧ ನಾಗಾಲ್ಯಾಂಡ್ ನಲ್ಲಿ ಹುತಾತ್ಮ

Advertisement

Udayavani is now on Telegram. Click here to join our channel and stay updated with the latest news.

Next