Advertisement
ಈ ನಿಟ್ಟಿನಲ್ಲಿ ಬುಧವಾರ ರಾಚಕೊಂಡ ಪೊಲೀಸರು ಹೈದರಾಬಾದ್ನಲ್ಲಿ ನಡೆಯುವ ಹೊಸ ವರ್ಷದ ಕಾರ್ಯಕ್ರಮದ ಆಯೋಜಕರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು. ಅದರಂತೆ ಒಳಾಂಗಣ ಮತ್ತು ಹೊರಾಂಗಣ ಸೇರಿದಂತೆ ಎಲ್ಲಾ ಕಾರ್ಯಕ್ರಮ ಸಂಘಟಕರು ಕಾರ್ಯಕ್ರಮಕ್ಕೆ ಕನಿಷ್ಠ 10 ದಿನಗಳ ಮೊದಲು ಪೊಲೀಸರಿಂದ ಅನುಮತಿ ಪಡೆಯಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಂಘಟಕರು ಪಾಸ್ಗಳು ಅಥವಾ ಟಿಕೆಟ್ಗಳನ್ನು ಮಾಡುವಂತೆ ಸೂಚಿಸಿದ್ದು ಜೊತೆಗೆ ನಿಗದಿತ ಸಂಖ್ಯೆಯಲ್ಲಿ ಮಾರಾಟ ಮಂಡುವಂತೆ ಸೂಚನೆ ನೀಡಿದೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಾರ್ಯಕ್ರಮ ನಡೆಯುವ ಪ್ರದೇಶದಿಂದ ಹಿಡಿದು ಪಾರ್ಕಿಂಗ್ ಸ್ಥಳದ ವರೆಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಇರಬೇಕು ಎಂದು ಕಾರ್ಯಕ್ರಮ ಸಂಘಟಕರಿಗೆ ಸೂಚನೆ ನೀಡಿದ್ದಾರೆ.
ಜನಸಂದಣಿಯನ್ನು ನಿಯಂತ್ರಿಸುವ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಕಾರ್ಯಕ್ರಮದಿಂದ ಇತರ ವಾಹನ ಸವಾರರಿಗೆ ತೂಂದರೆಯಾಗದಂತೆ ಸಂಘಟಕರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಇದಕ್ಕಾಗಿ ಮಹಿಳಾ ಭದ್ರತಾ ಸಿಬಂದಿಗಳನ್ನು ನಿಯೋಜಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ