Advertisement
ಹೂಳೆತ್ತಿಲ್ಲಜುಮ್ಮಾ ಮಸೀದಿ ರಸ್ತೆ ಬಳಿ ಚರಂಡಿ ಇದ್ದರೂ ಕಾಂಕ್ರೀಟ್ ಚರಂಡಿ ಆಗಿಲ್ಲ. ಹಳೆ ಚರಂಡಿಯ ಹೂಳೆತ್ತಿಲ್ಲ. ಜನವರಿಯಲ್ಲಿ ಹೂಳೆತ್ತಲಾಗಿತ್ತು. ನಂತರ ಚುನಾವಣೆ, ಅಧಿಕಾರಿಗಳ ವರ್ಗಾವಣೆ ಎಂದು ಕೆಲಸ ನಡೆಯಲೇ ಇಲ್ಲ. ಆದ್ದರಿಂದ ಮಳೆ ಬಂದಾಗ ನೀರು ನಿಲ್ಲುತ್ತದೆ. ಈ ಭಾಗದ ಒಂದಷ್ಟು ಮಂದಿಗೆ ಒಳಚರಂಡಿ ಕಾಮಗಾರಿ ಅಸಮರ್ಪಕ ಎಂಬ ಬಗ್ಗೆ ಅಸಮಾಧಾನವಿದೆ. ಬ್ಲಾಕ್ ಆಗುವ ಸಮಸ್ಯೆ ಆಗಾಗ ಇದೆ ಎನ್ನುತ್ತಾರೆ. ಜತೆಗೆ ರಸ್ತೆಯಂಚಿಗೆ ಇಂಟರ್‌ಲಾಕ್ ಹಾಕಿದ್ದು ಅದರ ಕಾಮಗಾರಿಯೂ ಅಪೂರ್ಣವಾಗಿದೆ ಎಂಬ ದೂರಿದೆ. ಇನ್ನು ಈ ಭಾಗಕ್ಕೆ ಈಚೆಗಷ್ಟೇ 11 ಲಕ್ಷ ರೂ. ಮಂಜೂರಾಗಿದ್ದು ಅದನ್ನು ಎಸ್‌ಸಿಎಸ್‌ಟಿ ಕಾಲನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ.
ಇಲ್ಲೊಂದು ಸುಂದರ ಪಾರ್ಕ್ ನಿರ್ಮಾಣವಾಗಿದೆ. ಆದರೆ ಅದರ ಹೊರಗೆ ಸಾಕಷ್ಟು ಜಾಗ ಇದೆ ಎಂದು ಖಾಸಗಿ ಬಸ್ಸುಗಳು ಬಂದು ನಿಲ್ಲುತ್ತವೆ. ಈ ಬಗ್ಗೆ ಜನ ಹೋರಾಟಕ್ಕೂ ಮುಂದಾಗಿದ್ದರು. ಈಗ ಇಲ್ಲಿ ಬಂದು ತಂಗುವ ಬಸ್ಸುಗಳ ಸಂಖ್ಯೆ ಕಡಿಮೆಯಾಗಿದೆ. ಮತ್ತೂಂದಷ್ಟು ಮಂದಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಬೀದಿ ದೀಪಗಳಿವೆ. ಪ್ರಮುಖ ಪ್ರದೇಶಗಳು
ಕೋರ್ಟ್ ಆವರಣ, ಕೋರ್ಟ್ ಕ್ಯಾಂಟೀನ್, ಸರಕಾರಿ ಕಚೇರಿ, ಮಿನಿ ವಿಧಾನಸೌಧ, ಶಿಕ್ಷಣಾಧಿಕಾರಿ ಕಚೇರಿ, ಅರಣ್ಯ, ತೋಟಗಾರಿಕಾ ಇಲಾಖೆ, ಐಬಿ, ಮುಖ್ಯರಸ್ತೆಯ ಬಲಬದಿ, ವೆಂಕಟ್ರಮಣ ದೇವಸ್ಥಾನ, ಬೆನಗಲ್ ರಸ್ತೆ ಎಡಬದಿ, ವೆಸ್ಟ್ ಬ್ಲಾಕ್ ರಸ್ತೆ ಇತ್ಯಾದಿಗಳು ಮೊದಲ ವಾರ್ಡ್ ವ್ಯಾಪ್ತಿಯಲ್ಲಿವೆ. ಹೆಚ್ಚಿನ ಸರಕಾರಿ ಕಚೇರಿಗಳು ಇದೇ ವ್ಯಾಪ್ತಿಯಲ್ಲಿವೆ. ಇಲ್ಲಿ ಸುಮಾರು 220 ಮನೆಗಳಿದ್ದು, 800ರಷ್ಟು ಮತದಾರರಿದ್ದಾರೆ.
Related Articles
ಒಳಚರಂಡಿ ಬ್ಲಾಕ್ ಆಗುವ ಸಮಸ್ಯೆ ಇದೆ. ಅದಕ್ಕಾಗಿ ತೆಗೆದ ಇಂಟರ್‌ಲಾಕ್ ಮರಳಿ ಅಳವಡಿಸಿದ್ದು ಸರಿಯಾಗಿಲ್ಲ.
– ಮಹಮ್ಮದ್ ಫಾರೂಕ್,
ಜೆ.ಎಂ. ರೋಡ್ ನಿವಾಸಿ
Advertisement
ಸುಳ್ಳು ಭರವಸೆ24 ತಾಸು ಕುಡಿಯುವ ನೀರು ಕೊಡುತ್ತೇವೆ ಎಂದಿದ್ದರು. ಕೊಟ್ಟಿಲ್ಲ. ಚರಂಡಿ ಹೂಳೆತ್ತಿಲ್ಲ. ಈ ಕಡೆಗೆ ಹೊಸ ಚರಂಡಿ ನಿರ್ಮಾಣಕ್ಕೆ ಅನುದಾನವೂ ಬಂದಿಲ್ಲ.
– ಮಹಮ್ಮದ್ ಗೌಸ್, ಸ್ಥಳೀಯರು ಹೊಂಡ ಮುಚ್ಚಿದರೂ ಸಾಕು
ಕಸ ತಂದು ರಾಶಿ ಹಾಕುವ ಸಮಸ್ಯೆ ಇತ್ತು. ಈಗ ಅದೊಂದು ತೆರವಾಗಿ ಸಮಸ್ಯೆ ನಿವಾರಣೆಯಾಗಿದೆ. ಮತ್ತೆ ಕೆಲವೆಡೆ ರಸ್ತೆ ಹೊಂಡ ಮುಚ್ಚಿದರೂ ಸಾಕು.
–ಮಾಲತಿ ಡಿ.ಕೆ. , ಮುಖ್ಯೋಪಾಧ್ಯಾಯಿನಿ.
ಅಂಜುಮಾನ್ ಮುಸ್ಲಿಂ ಘೋಷ ಶಾಲೆ ಅನುದಾನ ಕಡಿಮೆ
ನಮಗೆ ಬರುವ ಅನುದಾನದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿದೆ ಅನುದಾನ ಕಡಿಮೆ ಇದೆ. ಆದರೂ ಬಹುತೇಕ ಬೇಡಿಕೆಗಳಿಗೆ ಸ್ಪಂದಿಸಿ ಸಮಸ್ಯೆ ನಿವಾರಿಸಲಾಗಿದೆ.
– ಪುಷ್ಪಾ ಶೇಟ್
ಸದಸ್ಯರು, ಪುರಸಭೆ