Advertisement

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

10:21 PM Nov 21, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ಕುಂಭಾಶಿ ರಾ.ಹೆ. 66ರಲ್ಲಿ ಬುಧವಾರ ಇನ್ನೋವಾ ಕಾರಿಗೆ ಹಿಂದಿನಿಂದ ಅತೀ ವೇಗದಿಂದ ಇನ್ಸುಲೇಟರ್‌ ಲಾರಿ ಢಿಕ್ಕಿ ಹೊಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೇರಳದ ಪಯ್ಯನೂರು ಮೂಲದ ನಾರಾಯಣನ್‌, ವಾತ್ಸಲ, ಅನಿತಾ, ಚೈತ್ರಾ ಅವರು ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಪ್ರಸಾದ್‌ ಅವರು ತಿಳಿಸಿದ್ದಾರೆ.

Advertisement

ಇನ್ನುಳಿದ ಗಾಯಾಳು ಮಧುಸೂದನ್‌, ಭಾರ್ಗವನ್‌, ಚಾಲಕ ಫೈಝಲ್‌ ಹಾಗೂ ಇನ್ಸುಲೇಟರ್‌ ಚಾಲಕ ಹೊನ್ನಾವರದ ಮಹೇಶ್‌ ಗಾಯಾಳುಗಳು ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತವಾದ ತತ್‌ಕ್ಷಣ ಸ್ಥಳೀಯರು ಕ್ಷಿಪ್ರಗತಿಯಲ್ಲಿ ಸ್ಪಂದಿಸಿ ಗಾಯಾಳುಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದೇ ಗಾಯಾಳುಗಳು ಬದುಕುಳಿಯಲು ಕಾರಣವಾಯಿತು ಎನ್ನಲಾಗಿದೆ.

ಅಪಘಾತದ ಭೀಕರತೆ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಅಪಘಾತದಲ್ಲಿ ಇನ್ಸುಲೇಟರ್‌ ಲಾರಿ ಮಗುಚಿ ಬಿದ್ದಿತ್ತು. ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿತ್ತು.

ಮರಗಳನ್ನು ಕಡಿಯಲು ಒತ್ತಾಯ
ರಾ.ಹೆ. 66ರಲ್ಲಿ ಕುಂದಾಪುರದಿಂದ ಉಡುಪಿ ಕಡೆಗೆ ಹೋಗುವ ಮಾರ್ಗದಲ್ಲಿ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲವಿದೆ. ಇದರ ರಾಜಗೋಪುರದ ಸಮೀಪದಲ್ಲೇ ಮರಗಳು ರಾ.ಹೆ. 66ಕ್ಕೆ ಆವರಿಸಿಕೊಂಡಿವೆ. ಇದರಿಂದ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ದೇಗುಲ ಒಮ್ಮೆಗೆ ಗೋಚರವಾಗುತ್ತಿಲ್ಲ. ಮುಂದಕ್ಕೆ ಸಾಗಿ ತದನಂತರ ಅದೇ ಹೆದ್ದಾರಿಯಲ್ಲಿ ಹಿಮ್ಮುಖವಾಗಿ ವಾಹನಗಳನ್ನು ಚಲಾಯಿಸಿಕೊಂಡು ಬರುತ್ತಾರೆ. ಇದರಿಂದ ಅವಘಡಗಳು ಸಂಭವಿಸುತ್ತಿವೆ. ಮಾತ್ರವಲ್ಲದೆ ದೇಗುಲದ ಸಮೀಪದಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next