Advertisement

ಯೆಚೂರಿಯೇ ಪ್ರಧಾನ ಕಾರ್ಯದರ್ಶಿ

06:00 AM Apr 23, 2018 | |

ಹೈದರಾಬಾದ್‌: ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಅವರನ್ನೇ ಮತ್ತೂಂದು ಅವಧಿಗೆ ಮುಂದುವರಿಸಲಾಗಿದೆ. ಹೈದರಾಬಾದ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕಾರಟ್‌ ಮತ್ತು ಯೆಚೂರಿ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಂದಾಗಿ ಆಯ್ಕೆ ಪ್ರಕ್ರಿಯೆ ಗೊಂದಲಕ್ಕೆ ಒಳಗಾಗಿತ್ತು.

Advertisement

2015ರಲ್ಲಿ ಅವರು ಮೊದಲ ಬಾರಿಗೆ ಈ ಹುದ್ದೆ ಅಲಂಕರಿಸಿದ್ದರು. ಕಾರ್ಯಕರ್ತರಿಗೆ ನೀಡಬೇಕಾದ ಸಲಹೆ, ಮುಂದಿನ ದಿನಗ ಳಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಯೆಚೂರಿ ಹೇಳಿ ದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನೊಂದಿಗೆ ಸಿಪಿಎಂ ರಾಜಕೀಯ ಮೈತ್ರಿ ಮಾಡಿಕೊಳ್ಳು ವುದಿಲ್ಲ. ಆದರೆ, ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಂಸತ್‌ನ ಒಳಗೂ, ಹೊರಗೂ ಕೆಲ ವಿಚಾರಗಳಲ್ಲಿ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next