Advertisement

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

12:26 PM Nov 23, 2024 | Team Udayavani |

ದಾವಣಗೆರೆ: ಇಲ್ಲಿನ ಶ್ರೀ ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ನ.22ರ ಶುಕ್ರವಾರ ನಡೆದ ಸಹಕಾರ ಭಾರತಿಯ 7ನೇ ರಾಜ್ಯ ಅಧಿವೇಶನದಲ್ಲಿ ಸಾಣೂರು ನರಸಿಂಹ ಕಾಮತ್ ಅವರನ್ನು ಮುಂದಿನ 3 ವರ್ಷದ ಅವಧಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಸರ್ವಾನುಮತದಿಂದ ಆರಿಸಲಾಯಿತು.

Advertisement

ಚುನಾವಣಾ ಅಧಿಕಾರಿಯಾಗಿದ್ದ ಹಿರಿಯ ಸಹಕಾರಿ ಬಾಗಲಕೋಟೆಯ ಜಿ.ಎನ್. ಪಾಟೀಲ್ ಅವರು ಈ ಆಯ್ಕೆಯನ್ನು ಘೋಷಿಸಿದರು.

ನಿರ್ಗಮನ ಪ್ರಧಾನ ಕಾರ್ಯದರ್ಶಿ ಉತ್ತರ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ್ ದಾಸ್ ನಾಯಕ ಅವರು ಸಹಕಾರಿ ಧ್ವಜವನ್ನು ಹಸ್ತಾಂತರಿಸುವುದರ ಮೂಲಕ ಜವಾಬ್ದಾರಿಯ ವರ್ಗಾವಣೆ ಮಾಡಿದರು.

ಈ ಸಂದರ್ಭದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪುರೆ, ರಾಷ್ಟ್ರೀಯ ಸಂರಕ್ಷಕ, ಕೊಪ್ಪಳದ ರಮೇಶ್ ವೈದ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ  ಕಾರ್ಯವಾಹ ಪಟ್ಟಾಭಿರಾಮ ಮತ್ತೂರು, ಉತ್ತರ ಪ್ರಾಂತ ಸಂಘದ ಹಿರಿಯ ಅರವಿಂದ ದೇಶಪಾಂಡೆ, ಹುಬ್ಬಳ್ಳಿ ನಿರ್ಗಮನ ಅಧ್ಯಕ್ಷ ಬಾಗಲಕೋಟೆಯ ರಾಜಶೇಖರ ಶೀಲವಂತ, ನೂತನ ಅಧ್ಯಕ್ಷ ದಾವಣಗೆರೆಯ ಪ್ರಭುದೇವ ಆರ್.ಎಂ., ರಾಯಚೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಪಾಟೀಲ್ ಉಪಸ್ಥಿತರಿದ್ದರು.

Advertisement

ಕೆಎಂಎಫ್ ಮಂಗಳೂರು ಮತ್ತು ಭಾರತಿ ಟೂರಿಸಂ ಡೆವಲಪ್ಮೆಂಟ್ ಕೋ ಆಪರೇಟಿವ್ ನ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಅವರು ಕಳೆದ 2 ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಸಹಕಾರ ಭಾರತಿಯ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯ ತಜ್ಞರಾಗಿರುವ ಇವರು ಸಾಣೂರು ಗ್ರಾಮ ಪಂಚಾಯತ್ ನಲ್ಲಿ 2 ಅವಧಿಗೆ ಅಧ್ಯಕ್ಷರಾಗಿದ್ದು ಅಂತರಾಷ್ಟ್ರೀಯ ಗೂಗಲ್ ಗ್ರಾಮ ಪಂಚಾಯತ್ ಪುರಸ್ಕಾರ ಮತ್ತು ರಾಷ್ಟ್ರಪತಿಗಳ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದಿದ್ದರು.

ಪ್ರಶಿಕ್ಷಣ  ಮತ್ತು ಪಂಚಾಯತ್ ರಾಜ್ ಪ್ರಕೋಷ್ಟಗಳಲ್ಲಿ ಜಿಲ್ಲೆ ಮತ್ತು ರಾಜ್ಯಮಟ್ಟಗಳ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next