Advertisement

Anegundi ಸ್ವಚ್ಛ ಗ್ರಾಮಕ್ಕೆ ಸಹಕರಿಸಿ: ಸಿಇಓ ರಾಹುಲ್ ರತ್ನಂ ಪಾಂಡೆ;ಗ್ರಾ.ಪಂ. ಸಾಮಾನ್ಯ ಸಭೆ

08:29 PM Oct 15, 2024 | Team Udayavani |

ಗಂಗಾವತಿ: ಆನೆಗೊಂದಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ, ಕಸ ವಿಂಗಡಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಸ್ವಚ್ಛ ಗ್ರಾಮವಾಗಿಸುವ ಕೆಲಸವಾಗಬೇಕೆಂದು ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಹೇಳಿದರು.

Advertisement

ತಾಲೂಕಿನ ಆನೆಗೊಂದಿ ಗ್ರಾ.ಪಂ. ಸಭಾಂಗಣದಲ್ಲಿ ಅ.15ರ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಎಸ್.ಡಬ್ಲ್ಯು.ಎಂ. ಘಟಕವನ್ನು ಗ್ರಾ.ಪಂ. ಹಾಗೂ ಸ್ವಸಹಾಯ ಸಂಘದವರು ನಿರ್ವಹಣೆ ಮಾಡುತ್ತಾರೆ. ಇದಕ್ಕೆ ಸಾಹಸ ಸಂಸ್ಥೆಯವರು ಸಹಕಾರ ನೀಡಬೇಕು. ಇದಕ್ಕೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಪಾಲಿಸಿ ಗ್ರಾ.ಪಂ. ಅಗತ್ಯ  ಕ್ರಮಕೈಗೊಳ್ಳಬೇಕು ಎಂದರು.

ತಾಲೂಕು ಮಟ್ಟದ ಅಧಿಕಾರಿಗಳು, ಸ್ವಸಹಾಯ ಸಂಘದವರು ಮನೆ ಮನೆಗೆ ತೆರಳಿ ಒಣ ಮತ್ತು ಹಸಿ ಕಸ ಸಂಗ್ರಹಿಸಬೇಕು. ಈ ಬಗ್ಗೆ ಶಾಲಾ ಮಕ್ಕಳಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಸ್ವಚ್ಛ ಸಂಕೀರ್ಣ ಘಟಕದ ಬಳಿ ಮೂಲ ಸೌಲಭ್ಯಗಳಾದ ನೀರು, ಶೌಚಾಲಯ, ಸಂಪೂರ್ಣ ಕಾಂಪೌಂಡ್ ನಿರ್ಮಾಣ ಹಾಗೂ ವಿದ್ಯುತ್ ಸಂಪರ್ಕ ಸೌಲಭ್ಯ ಒದಗಿಸಬೇಕೆಂದರು.

Advertisement

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರು ಮಾತನಾಡಿ, ಆನೆಗೊಂದಿ ಭಾಗದ ಪ್ರವಾಸಿ ಸ್ಥಳಗಳಲ್ಲಿ ಕಸದ ತೊಟ್ಟಿ ಅಳವಡಿಸಬೇಕು. ಕಸ ಸಂಗ್ರಹಣೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಖರೀದಿಸಬೇಕು. ಜೊತೆಗೆ ಕಸ ಸಂಗ್ರಹಣೆಗೆ ಟ್ರ್ಯಾಕ್ಟರ್ ಖರೀದಿಸಲು ಅನುದಾನ ಬೇಡಿಕೆ ಸೇರಿ ಗ್ರಾಮದ ಸಮಸ್ಯೆಗಳ ಬಗ್ಗೆ ಗ್ರಾ.ಪಂ. ಸದಸ್ಯರು ಸಭೆಯಲ್ಲಿ ಜಿಪಂ ಸಿಇಓ ಅವರ ಗಮನಕ್ಕೆ ತಂದರು.

ಎಸ್.ಡಬ್ಲ್ಯು.ಎಂ. ಘಟಕ ವೀಕ್ಷಣೆ: ಆನೆಗೊಂದಿ ಗ್ರಾ.ಪಂ. ವ್ಯಾಪ್ತಿಯ ಕಡೇಬಾಗಿಲು ಗ್ರಾಮದ ಹೊರ ವಲಯದಲ್ಲಿರುವ ಸ್ವಚ್ಛ ಸಂಕೀರ್ಣ (ಎಸ್ ಡಬ್ಲ್ಯುಎಂ) ಘಟಕದ ಸ್ಥಳಕ್ಕೆ ಜಿ.ಪಂ. ಸಿ.ಇ.ಓ. ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜವಂಶಸ್ಥರಾದ ರತ್ನಶ್ರೀ ರಾಯಲು, ಶ್ರೀಕೃಷ್ಣದೇವರಾಯ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ಪಿಆರ್ ಡಿ ಎಇಇ ವಿಜಯಕುಮಾರ್, ಸಿಡಿಪಿಓ ಜಯಶ್ರೀ, ಹವಮಾನ ಇಲಾಖೆ ಅಧೀಕ್ಷಕರಾದ  ಸುರೇಂದ್ರ, ಪುರಾತತ್ವ ಇಲಾಖೆಯ ಧನಂಜಯ್, ಗ್ರಾಪಂ ಪಿಡಿಓ ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷೆ  ಕೆ.ಮಹಾದೇವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಡಾ.ವೆಂಕಟೇಶ ಬಾಬು, ಸಾಹಸ ಸಂಸ್ಥೆಯ ಮೇಶಾಕ್ ರಾಜ್, ಗ್ರಾ.ಪಂ. ಸರ್ವ ಸದಸ್ಯರು, ನರೇಗಾ ಸಿಬ್ಬಂದಿಗಳು, ಆರ್ ಜಿಪಿಆರ್ ಫೆಲೋ, ಗ್ರಾಮದ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next