Advertisement
ಆದಿತ್ಯ ಠಾಕ್ರೆ ಅವರು ಉದ್ಧವ್ ಶಿವಸೇನೆ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಅವರ ಪುತ್ರ ಮಾತ್ರವಲ್ಲದೇ, ಕಳೆದ ಬಾರಿಯೂ ವರ್ಲಿ ಕ್ಷೇತ್ರದಿಂದ ಜಯ ಸಾಧಿಸಿ ಸಚಿವರಾಗಿದ್ದರು. ಇತ್ತ ರಾಜ್ಯಸಭಾ ಸಂಸದರಾಗಿರುವ ಮಿಲಿಂದ್ ಈ ವರ್ಷಾರಂಭದಲ್ಲಿ ಕಾಂಗ್ರೆಸ್ ತೊರೆದು ಶಿಂಧೆ ಶಿವಸೇನೆ ಸೇರ್ಪಡೆ ಗೊಂಡಿದ್ದರು. ಈ ಬಾರಿ ಆದಿತ್ಯ ಹಾಗೂ ಮಿಲಿಂದ್ ನಡುವೆ ತೀವ್ರ ಜಿದ್ದಾ ಜಿದ್ದಿ ಏರ್ಪ ಡ ಲಿದ್ದು, ವರ್ಲಿ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ. ಮಿಲಿಂದ್ ಹೊರತಾಗಿ ಪ್ರಮುಖ ನಾಯಕರಾದ ಸಂಜಯ್ ನಿರುಪಮ್ ಅವರನ್ನು ದಿಂಡೋಶಿ ಕ್ಷೇತ್ರದಿಂದ, ನಿರೇಶ್ ರಾಣೆ ಅವರನ್ನು ಕುಡಲ್ ಕ್ಷೇತ್ರದಿಂದ ಮತ್ತು ರಾಜೇಂದ್ರ ಗವಿತ್ ಅವರನ್ನು ಪಾಲಾ^ರ್‌ನಿಂದ ಕಣಕ್ಕಿಳಿಸಲಾಗಿದೆ.
ನಟಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕಿ ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹ್ಮದ್, ಎಸ್‌ಪಿ ತೊರೆದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ)ಗೆ ಸೇರ್ಪಡೆಗೊಂಡಿದ್ದಾರೆ. ಈ ಬಾರಿಯ ಮಹಾರಾಷ್ಟ್ರ ಚುನಾವಣೆಯಲ್ಲಿ ಅನುಶಕ್ತಿ ನಗರದಿಂದ ಕಣಕ್ಕಿಳಿಯಲಿರುವ ಅವರು ಅಜಿತ್ ಬಣದ ಸನಾ ಮಲ್ಲಿಕ್ ವಿರುದ್ಧ ಸೆಣಸಾಡಲಿದ್ದಾರೆ. ಫಹಾದ್ ಅವರು ಎಸ್‌ಪಿಯ ಮಹಾರಾಷ್ಟ್ರ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿದ್ದರು.