Advertisement
ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಬುಧವಾರ ಸಿಟಿಜನ್ ಕೌನ್ಸಿಲ್ ವತಿಯಿಂದ ಹಮ್ಮಿಕೊಳ್ಳಲಾದ ಅನೌಪಚಾರಿಕ ಸಂವಾದ ಸಮಾರಂಭದಲ್ಲಿ ಮಾತನಾಡಿದರು.
ಈ ಬಾರಿಯ ಬಜೆಟ್‌ನಲ್ಲಿ ಯುವ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗಾರ್ಹತೆ ಹೆಚ್ಚಿಸಲು 21-24 ವರ್ಷದೊಳಗಿನ ನಿರುದ್ಯೋಗಿ ಯುವಕರಿಗೆ ಕೌಶಲ ನೀಡಲು 500 ಟಾಪ್ ಕಂಪೆನಿಗಳ ಸಹಯೋಗದಲ್ಲಿ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ಯೋಜಿಸಿದ್ದೇವೆ. ಅದೇ ರೀತಿ ಐಟಿಐ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ತರಬೇತಿ ನೀಡಲು ಐಟಿಐಗಳಿಗೆ ಅತ್ಯಾಧುನಿಕ ಯಂತ್ರೋಪಕರಣ ಒದಗಿಸಲಾಗುವುದು ಎಂದು ಹೇಳಿದರು. ಸಿಟಿಝನ್ ಕೌನ್ಸಿಲ್ ಅಧ್ಯಕ್ಷ ವಾಸುದೇವ ಕಾಮತ್ ಇದ್ದರು.
Related Articles
ಬಿಹಾರ, ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ, ಕೇರಳ- ಮಣಿಪುರಕ್ಕೆ ಕಡಿಮೆ ಅನುದಾನ ಹಂಚಿಕೆ ಮಾಡಿರುವ ಕುರಿತು ನಾಗರಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಅಂತಹ ತಾರತಮ್ಯ ಮಾಡಿಲ್ಲ. ಬಿಹಾರದಲ್ಲಿ ಪ್ರತಿವರ್ಷ ಕೋಸಿ ನದಿಯ ಪ್ರವಾಹದಿಂದ ಜನಜೀವನಕ್ಕೆ ತೀವ್ರ ಹಾನಿಯಾಗುತ್ತಿದೆ. ಈ ಕಾರಣಕ್ಕೆ ಸೂಕ್ತ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಹಾಗಂತ ಇತರ ರಾಜ್ಯಗಳನ್ನು ನಿರ್ಲಕ್ಷಿಸಿಲ್ಲ. ಈ ವಿಚಾರದಲ್ಲಿ ಕರ್ನಾಟಕದಂತೆ ಕೇರಳವೂ ರಾಜಕೀಯವಾಗಿ ಕೆಸರೆರಚುವ ಕೆಲಸ ಮಾಡುತ್ತಿದೆ ಎಂದರು.
Advertisement
ವಿದ್ಯಾರ್ಥಿ ಪ್ರಶ್ನೆಗೆ ಸಚಿವೆ ಖುಷ್!ವಿದ್ಯಾರ್ಥಿಗಳಿಗೆ ನೀವು ಕೊಡಬಹುದಾದ ಹಣದ ಪಾಠವೇನು? ಹೀಗೊಂದು ಪ್ರಶ್ನೆಯನ್ನು ಸಭೆಯಲ್ಲಿದ್ದ ರಿಶಾಂತ್ ಎಂಬ 5ನೇ ತರಗತಿ ವಿದ್ಯಾರ್ಥಿ ಮುಂದಿಟ್ಟದ್ದು ಸಚಿವರಿಗೆ ಖುಷಿ ಕೊಟ್ಟಿತು. ಬಾಲಕನನ್ನು ವೇದಿಕೆಗೆ ಕರೆದು ಪ್ರಶ್ನೆಯನ್ನು ಮತ್ತೆ ಕೇಳಿಸಿಕೊಂಡರಲ್ಲದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಕರಾವಳಿಯ ಬಾಲಕನಿಂದ ಈ ಪ್ರಶ್ನೆ ನನಗೆ ಅಚ್ಚರಿ ಮೂಡಿಸಿಲ್ಲ. ಎಲ್ಲ ಮಕ್ಕಳೂ ಹಣಕಾಸು ವಿಚಾರದಲ್ಲಿ ಜಾಗರೂಕರಾಗಬೇಕು. ಡಿಜಿಟಲ್ ಪಾವತಿಯಿರುವ ಈಗಿನ ಕಾಲದಲ್ಲಿ ಗೇಮಿಂಗ್, ಜೂಜಿನಿಂದ ಹಣ ಕಳೆದುಕೊಳ್ಳುವ ಬದಲು ಹಣಕಾಸು ವಿಚಾರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಸಂಸದರಿಗೆ ಭೇಷ್
ದಕ್ಷಿಣಕನ್ನಡದಲ್ಲಿ ಉತ್ಸಾಹಿ ಯುವ ಸಂಸದರಿದ್ದಾರೆ. ಹಿಂದೆ ಇಲ್ಲಿ ಇನ್‌ಕುÂಬೇಷನ್ ಸೆಂಟರ್ ಆರಂಭಿಸಿದ್ದನ್ನು ನೆನಪಿಸಿದ್ದಾರೆ ಎಂದು ಸಂಸದ ಕ್ಯಾ|ಬ್ರಿಜೇಶ್ ಚೌಟರನ್ನು ಶ್ಲಾಘಿಸಿದ ಸಚಿವೆ, ಈ ಭಾಗಕ್ಕೆ ಇನ್ನೇನು ಸೌಲಭ್ಯ ಬೇಕು ಎನ್ನುವುದನ್ನು ಗುರುತಿಸಿ. ಅದನ್ನು ಒದಗಿಸಲು ನಾನು ಬದ್ಧಳಾಗಿದ್ದೇನೆ ಎಂದರು. ಇದನ್ನೂ ಓದಿ: Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ