Advertisement
ದುಬೆ ಹತ್ಯೆ, ಆತನ ಅಪರಾಧ ಕೃತ್ಯಗಳ ಸಂಬಂಧ ತನಿಖೆ ನಡೆಸಲು ಉತ್ತರ ಪ್ರದೇಶ ಸರಕಾರವು ಶನಿವಾರ ವಿಶೇಷ ತನಿಖಾ ದಳವನ್ನು ರಚಿಸಿದ್ದು, ಜುಲೈ 31ರೊಳಗೆ ವರದಿಯನ್ನು ಸಲ್ಲಿಸ ಬೇಕಿದೆ. ದುಬೆ ಅಪರಾಧ ಕೃತ್ಯಗಳ ಸಂಬಂಧ ಎಲ್ಲ ಆಯಾಮಗಳಲ್ಲೂ ಎಸ್‌ಐಟಿ ತನಿಖೆ ನಡೆಸಲಿದೆ. ಇದೇ ವೇಳೆ ರೌಡಿ ವಿಕಾಸ್ ದುಬೆ ಜತೆಗಿದ್ದ ಪೊಲೀಸ್ ಪೇದೆಗೆ ಕೋವಿಡ್ ಸೋಂಕು ತಗಲಿರು ವುದು ದೃಢಪಟ್ಟಿದೆ. ಇದೇ ವ್ಯಾನ್‌ನಲ್ಲಿದ್ದ ನಾಲ್ವರು ಪೇದೆಗಳಿಗೆ ನೆಗೆಟಿವ್ ಇರುವುದು ಕಂಡು ಬಂದಿದೆ.ಉತ್ತರ ಪ್ರದೇಶ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಜತೆ ಪರಾರಿಯಾಗಿದ್ದ ಸಹಚರ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಶನಿವಾರ ಥಾಣೆಯಲ್ಲಿ ಬಂಧಿಸಿದೆ.
ದುಬೆಯ ಸಹಚರ ಅರವಿಂದ್ ಅಲಿಯಾಸ್ ಗುಡ್ಡನ್ ರಾಮ್‌ವಿಲಾಸ್ ತ್ರಿವೇದಿ (46) ಮತ್ತು ಆತನ ಚಾಲಕ ಸುಶೀಲ್ ಕುಮಾರ್ ಅಲಿಯಾಸ್ ಸೋನು ತಿವಾರಿ (30)ಯನ್ನು ಇನ್‌ಸ್ಪೆಕ್ಟರ್ ದಯಾ ನಾಯಕ್ ನೇತೃತ್ವದ ಎಟಿಎಸ್ ತಂಡವು ಕೋಲ್ಶೆಟ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್‌ಪಿ ದೇಶ್‌ಮಾನೆ ತಿಳಿಸಿದ್ದಾರೆ.