Advertisement
ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಎನ್.ಆರ್. ಸಂತೋಷ್ ಸೇರಿ ಹಲವರು ಈ ಸಭೆಯಲ್ಲಿ ಭಾಗವಹಿಸಿದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅರವಿಂದ ಲಿಂಬಾವಳಿ, ಈಗಾಗಲೇ ನಾವು ಮೊದಲ ಸುತ್ತಿನ ವಕ್ಫ್ ಹೋರಾಟ ಪೂರ್ಣಗೊಳಿಸಿದ್ದೇವೆ. ಕರ್ನಾಟಕದ ಅಧಿಕಾರಿಗಳನ್ನು ಗುರುವಾರ ಜೆಪಿಸಿ ವಿವರಣೆ ಪಡೆಯುವುದಕ್ಕಾಗಿ ಕರೆದಿತ್ತು. ನನಗೆ, ಪ್ರತಾಪಸಿಂಹ, ಕುಮಾರ ಬಂಗಾರಪ್ಪ ಅವರಿಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ಜೆಪಿಸಿ ಕೇಳಿದೆ. ಆ ಹಿನ್ನೆಲೆಯಲ್ಲಿ ಚರ್ಚೆ ಮಾಡಲು ಇವತ್ತು ಸಭೆ ಸೇರಿದ್ದೆವು ಎಂದು ಹೇಳಿದರು.
ಇಂದು ನಾವು ನಡೆಸಿರುವುದು ಪ್ರತ್ಯೇಕ ಸಭೆಯಲ್ಲ, ಭಿನ್ನಮತವೂ ಅಲ್ಲ. ನಾವು ವಕ್ಫ್ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೇವೆ. ನಮ್ಮ ಸಭೆಯ ಬಗ್ಗೆ ಮಾಜಿ ಶಾಸಕರು ಏನಾದರೂ ಹೇಳಿಕೊಳ್ಳಲಿ, ನಾವು ವಕ್ಫ್ ಹೋರಾಟ ನಿಲ್ಲಿಸುವುದಿಲ್ಲ. ನಮ್ಮ ಮಟ್ಟದಲ್ಲಿ ಜನಪರ ಹೋರಾಟ ಮಾಡುತ್ತಿದ್ದೇವೆ ಎಂದು ಲಿಂಬಾವಳಿ ಹೇಳಿದರು.
Related Articles
ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಅವರ ಬಗ್ಗೆ ಸಿ.ಟಿ. ರವಿ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. ಸುದ್ದಿಗಾರರು ಎಷ್ಟು ಒತ್ತಾಯಿಸಿದರೂ ಪ್ರತಿಕ್ರಿಯೆಗೆ ನಿರಾಕರಿಸಿದ ಅವರು, ನಾನು ಒಟ್ಟಾರೆ ಅವರ ಬಗ್ಗೆ ಮಾತನಾಡಲ್ಲ, ಬಾಯಿ ಮುಚ್ಚಿಕೊಂಡು ಇರುತ್ತೇನೆ. ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
Advertisement