Advertisement

ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಿಲ್ಲಿಸದಿದ್ದಲ್ಲಿ ಕಚೇರಿಗೆ ಮುತ್ತಿಗೆ

08:20 PM Feb 03, 2022 | Team Udayavani |

ಶಿರಸಿ: ಪ್ರತಿ ಸೋಮವಾರ ಅರಣ್ಯ ಭೂಮಿ ಒಕ್ಕಲೆಬ್ಬಿಸುವ ವಿಚಾರಣೆ ತಕ್ಷಣ ಸ್ಥಗಿತಗೊಳಿಸಬೇಕು, ಅರಣ್ಯವಾಸಿಗಳ ಅರಣ್ಯ ಭೂಮಿ ಅನುಭೋಗಿಸುವ ಹಕ್ಕಿಗೆ ನಿರಂತರವಾಗಿ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ, ಕಿರುಕುಳ ಮತ್ತು ಮಾನಸಿಕ ಹಿಂಸೆ ಜರುಗುತ್ತಿರುವುದನ್ನು ನಿಯಂತ್ರಿಸಬೇಕು ಇಲ್ಲದಿದ್ದಲ್ಲಿ, ಪ್ರತಿಭಟನಾರ್ಥವಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ಮುತ್ತಿಗೆ ಹಾಕಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟದ ನಿಯೋಗವು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿಯೋಗವು ಎಚ್ಚರಿಕೆ ನೀಡಿದ್ದಾರೆ.

Advertisement

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಮೌಲ್ಯಮಾಪನ) ಮಧು ಶರ್ಮ ಅವರಿಗೆ ಇಂದು ಮನವಿ ನೀಡಿ ಮೇಲಿನಂತೆ ಅಗ್ರಹಿಸಲಾಯಿತು.

ಅರಣ್ಯ ಹಕ್ಕು ಕಾಯಿದೆ ಜಾರಿ ಇರುವ ಸಂದರ್ಭದಲ್ಲಿ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗುತ್ತಿರುವುದು ಕಾನೂನು ಬಾಹಿರ ಎಂದು ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪಿಸುತ್ತಾ, ಮಾನವೀಯತೆ ಹೊರತಾಗಿ ಅರಣ್ಯ ಸಿಬ್ಬಂದಿಗಳ ವರ್ತನೆ, ಅರಣ್ಯವಾಸಿ ಪರವಾದ ಸರಕಾರದ ನೀತಿ, ನಿಯಮಕ್ಕೆ ವ್ಯತಿರಿಕ್ತವಾಗಿದ್ದು ಇಂತಹ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಮೇಲಂತಸ್ತಿನ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ನಿಯೋಗವು ಅಗ್ರಹಿಸಿತು.

ಇದನ್ನೂ ಓದಿ : ರಾಜ್ಯದಲ್ಲಿ ಇಂದು 16,436 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 60 ಮಂದಿ ಬಲಿ

ಚರ್ಚೆಯ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಲ್ಯಾಂಡ್ ರೆಕಾರ್ಡ) ಮಿಲೊ ಟಾಗೊ ಉಪಸ್ಥಿತರಿದ್ದರು.

Advertisement

ನಿಯೋಗದಲ್ಲಿ ಭೂಮಿ ಹಕ್ಕು ಹೋರಾಟಗಾರರಾದ ಮಂಜುನಾಥ ಮರಾಠಿ, ಬೋರಯ್ಯ, ಪಂಪಾವತಿ ಬಳ್ಳಾರಿ, ಭಿಮ್ಸಿ ವಾಲ್ಮೀಕಿ, ಜಯಂತ ಅನಂತ ಮರಾಠಿ, ಶಿವಾನಂದ ಜೋಗಿ, ಪ್ರಭಾಕರ ಕೆರಿಯ ಮರಾಠಿ, ಸೀತಾರಾಮ ಗೌಡ, ನಾಗರಾಜ ಈಶ್ವರ ಮರಾಠಿ, ನೂರ್ ಅಹಮದ್ ಸೈಯದ್ ಸಾಬ, ದ್ಯಾಮಣ್ಣ ಜಗದಾಳಿ, ಬಾಬು ಮರಾಠಿ, ರಾಜು ನರೇಬೈಲ್, ರಾಮಚಂದ್ರ ಮರಾಠಿ, ಶೇಖರ್ ನರೇಬೈಲ್, ರಾಮ ಮಂಜುನಾಥ ಮರಾಠಿ, ಈಶ್ವರ ಓಮು ಮರಾಠಿ ಮುಂತಾದವರು ಉಪಸ್ಥಿತರಿದ್ದರು.

ಅರಣ್ಯ ಅಧಿಕಾರಿಗಳ ದೌರ್ಜನ್ಯಕ್ಕೆ ತೀವ್ರ ಆಕ್ರೋಶ:
ಕಾನೂನು ಬಾಹಿರವಾಗಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದು, ಅರಣ್ಯವಾಸಿಗಳ ಮೇಲೆ ದೈಹಿಕ ಹಲ್ಲೆ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಮಂಜೂರಿ ಪ್ರಕ್ರೀಯೆ ಇದ್ದಾಗಲೂ ಪ್ರತೀ ಸೋಮವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರದಲ್ಲಿ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗಿಸುವುದು, ಅರಣ್ಯವಾಸಿಗಳ ಮೇಲೆ ಪೋಲೀಸ್ ಸಹಾಯ ಪಡೆದು ಸುಳ್ಳು ಪ್ರಕರಣ ದಾಖಲಿಸುವುದು, ನಿರಂತರವಾಗಿ ಅರಣ್ಯವಾಸಿಗಳಿಗೆ ಕಿರುಕುಳ ನೀಡುವುದು, ಅರಣ್ಯ ಸಿಬ್ಬಂದಿಗಳ ದುರ್ನಡತೆ ಸಾಕ್ಷ್ಯಚಿತ್ರ, ದಾಖಲೆಗಳ ಮೂಲಕ ನಿಯೋಗವು ಚರ್ಚೆಯ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯವನ್ನ ವಿಶ್ಲೇಷಿಸಲಾಯಿತು ಎಂದು ಹೋರಾಟಗಾರರ ವೇದಿಕೆಯ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಮನವಿ ನೀಡುವ ಮತ್ತು ಚರ್ಚೆಯ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ನಿರಾಕರಿಸಿದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ಜರುಗಿದವು

Advertisement

Udayavani is now on Telegram. Click here to join our channel and stay updated with the latest news.

Next