ಸುಳ್ಯ: ಪೊಲೀಸ್ ಅಧಿಕಾರಿ ಹೆಸರಲ್ಲಿ ಸುಳ್ಯದ ವ್ಯಕ್ತಿಯೋರ್ವರಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.
ನಿಮ್ಮ ಮಗ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಹಣ ಕೊಟ್ಟರೆ ಪ್ರಕರಣವನ್ನು ಇತ್ಯರ್ಥಪಡಿಸಲು ಹಣ ನೀಡಬೇಕು ಎಂಬ ಬೇಡಿಕೆ ಇಟ್ಟು ಅನಾಮಿಕ ವ್ಯಕ್ತಿಯೋರ್ವ ಕರೆ ಮಾಡಿದ್ದಾನೆ. ಸುಳ್ಯದ ಹಳೆಗೇಟು ಆಟೋ ಚಾಲಕ ಜಲೀಲ್ ಅವರಿಗೆ ಕರೆ ಬಂದಿದೆ.
ಆದರೆ ಜಲೀಲ್ ಅವರ ಮಗ ಸುಳ್ಯದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದು ರಜೆ ಇರುವ ಕಾರಣ ಮನೆಯಲ್ಲಿ ಇದ್ದರು. ಇದರಿಂದ ಇದು ವಂಚಕರು ನಡೆಸಿರುವ ಕೃತ್ಯ ಎಂಬುದು ತಿಳಿದಿದೆ.
ಕುಸಿದು ಬಿದ್ದು ಸಾವು
ಸುಳ್ಯ: ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಸುಳ್ಯದಲ್ಲಿ ಬುಧವಾರ ಸಂಭವಿಸಿದೆ.
ಸುಳ್ಯ ಜ್ಯೋತಿ ಸರ್ಕಲ್ ಬಳಿಯ ಕಟ್ಟಡದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಕಲ್ಲಡ್ಕ ನಿವಾಸಿ ಪ್ರಮೋದ್ ಮೃತರು. ಕುಸಿದು ಬಿದ್ದ ಅವರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ತಲುಪುಷ್ಟರಲ್ಲಿ ಮೃತಪಟ್ಟಿದ್ದಾರೆ.