Advertisement

ಅಮೆರಿಕದ ಪಾಪ್ ಗಾಯಕ ಆರನ್ ಕಾರ್ಟರ್ ಮನೆಯಲ್ಲೇ ಶವವಾಗಿ ಪತ್ತೆ; ಕಾರಣ ನಿಗೂಢ

08:46 AM Nov 06, 2022 | Team Udayavani |

ಕ್ಯಾಲಿಫೋರ್ನಿಯಾ : ಅಮೆರಿಕದ ಪಾಪ್ ಐಕಾನ್ ಗಾಯಕ ಮತ್ತು ರಾಪರ್ ಆರನ್ ಕಾರ್ಟರ್ (೩೪) ಅವರು ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲೇ ಅನುಮಾಸ್ಪದ ರೀತಿಯಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಶನಿವಾರ ಮಧ್ಯಾಹ್ನ ತನ್ನ ಮನೆಯ ಬಾತ್ ಟಬ್ ನಲ್ಲಿ ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.

ಆರನ್ ಕಾರ್ಟರ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಸದಸ್ಯ ನಿಕ್ ಕಾರ್ಟರ್ ಅವರ ಸಹೋದರನಾಗಿದ್ದು, ತನ್ನ ಏಳನೇ ವಯಸ್ಸಿನಲ್ಲಿಯೇ ಪ್ರದರ್ಶನ ನೀಡಲು ಪ್ರಾರಂಭಿಸಿದರು ಮತ್ತು 1997 ರಲ್ಲಿ ಒಂಬತ್ತನೇ ವಯಸ್ಸಿನಲ್ಲಿ ತಮ್ಮ ಸ್ವಯಂ-ಶೀರ್ಷಿಕೆಯ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದರು, ಇದು ವಿಶ್ವದಾದ್ಯಂತ ಮಿಲಿಯನ್ ಪ್ರತಿಗಳು ಮಾರಾಟವಾದವು.

ಗಾಯಕ ಮತ್ತು ರಾಪರ್ ಆರನ್ ಕಾರ್ಟರ್ ಅವರ ಕುಟುಂಬದ ಸದಸ್ಯರು ಗಾಯಕನ ಸಾವಿನ ಬಗ್ಗೆ ಮಾಹಿತಿ ನೀಡಿದ್ದು ಲಾಸ್ ಏಂಜಲೀಸ್ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಆರನ್ ಕಾರ್ಟರ್ ಅವರ ಕೊನೆಯ ಆಲ್ಬಂ ‘ಲವ್’ 2018 ರಲ್ಲಿ ಬಿಡುಗಡೆಯಾಗಿತ್ತು. ಅಲ್ಲದೆ ಇದನ್ನು ತುಂಬಾ ಜನ ಇಷ್ಟಪಟ್ಟಿದ್ದು ಇದರೊಂದಿಗೆ ಆರನ್ ಕಾರ್ಟರ್ ಅವರ ಅಭಿಮಾನಿಗಳ ಸಂಖ್ಯೆಯೂ ಜಾಸ್ತಿಯಾಗಿತ್ತು, ಗಾಯಕನ ಅಕಾಲಿಕ ಸಾವಿನಿಂದ ಅಭಿಮಾನಿಗಳು ತೀವ್ರ ದುಃಖಿತರಾಗಿದ್ದಾರೆ.

Advertisement

ಇದನ್ನೂ ಓದಿ : ಹೊಳಲ್ಕೆರೆ: ದಿಢೀರ್ ಕುಸಿದು ಬಿದ್ದ ಮನೆಯ ಗೋಡೆ : ಮನೆಮಂದಿ ಅದೃಷ್ಟವಶಾತ್ ಪಾರು

Advertisement

Udayavani is now on Telegram. Click here to join our channel and stay updated with the latest news.

Next