ಸಿಂಧನೂರು: ತಾಲೂಕು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್‌ನಂತ ಸಂಕಷ್ಟ ಸಂದರ್ಭ ಸೇರಿ ಅನಾಥರು, ನಿರ್ಗತಿಕರಿಗೆ ಆಶ್ರಯ ನೀಡುವ ಕೆಲಸದಲ್ಲಿ ತನ್ನದೇ ಹಿರಿಮೆ ಗಳಿಸಿದೆ ಎಂದು ವಕೀಲ ನಿರುಪಾದೆಪ್ಪ ಗುಡಿಹಾಳ ಹೇಳಿದರು.
ನಗರದ ಕಾರುಣ್ಯಾಶ್ರಮದಲ್ಲಿ ಅಹಿಂದ ಒಕ್ಕೂಟ, ಜಿಆರ್ ಅಸೋಸಿಯೇಟ್ಸ್ ಸಹಭಾಗಿತ್ವದಲ್ಲಿ ಸೋಮವಾರ ವಿವಿಧ ಕ್ಷೇತ್ರದ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಸೇವೆಯಿಂದ ಮಾತ್ರ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕಾರುಣ್ಯಾಶ್ರಮದ ಚನ್ನಬಸವಸ್ವಾಮಿ ಹರೇಟನೂರು ಇಡೀ ತಾಲೂಕು, ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಕಾರುಣ್ಯಾಶ್ರಮದ ಚನ್ನಬಸವ ಸ್ವಾಮಿ ಹರೇಟನೂರು, ಪತ್ರಕರ್ತ ಚಿದಾನಂದ ದೊರೆ, ವನಸಿರಿ ಫೌಂಡೇಶನ್ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ, ಅಕ್ಷರ ಆಹಾರ ಜೋಳಿಗೆ ಟ್ರಸ್ಟ್ ಕಾರ್ಯದರ್ಶಿ ಅಶೋಕ ನಲ್ಲಾ, ಮಲ್ಲಮ್ಮ ಉಟಕನೂರು, ಆಟೋ ಚಾಲಕ ಉಸ್ಮಾನ್ ಮಕಾಂದರ್ ಷಾ, ಶಿಕ್ಷಕ ಬಸವರಾಜ್ ಜಾಡರ್, ಪಿಎಸ್‌ಐ ಹುದ್ದೆಗೆ ನೇಮಕವಾದ ಪ್ರದೀಪ್‌ಕುಮಾರ್, ಶಕೀಲ್ ಆಹ್ಮದ್, ಕರಾಟೆಯಲ್ಲಿ ಗೋಲ್ಡ್ ಮೆಡಲ್ ಪಡೆದ ಜುಲೇಕಾ ಧುಮತಿ, ಖಾಜಾಹುಸೇನ್, ಸನಾ ಎನ್ನುವವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡಬಸವರಾಜ್, ಅಹಿಂದ ಒಕ್ಕೂಟದ ಅಧ್ಯಕ್ಷ ಜೆ.ರಾಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಭೀಮಣ್ಣ ವಕೀಲರು, ಅಹಿಂದ ಘಟಕದ ಉಪಾಧ್ಯಕ್ಷ ಕೆ.ವೆಂಕೋಬ ನಾಯಕ, ಅಹಿಂದ ಕಾರ್ಯಾಧ್ಯಕ್ಷ ಎಚ್.ಎನ್. ಬಡಿಗೇರ್, ಸರಕಾರಿ ಅಭಿಯೋಜಕ ಹನುಮೇಶ, ಮಹಾದೇವಪ್ಪ ಧುಮತಿ ಇದ್ದರು.