ಪ್ರಕೃತಿಯೇ ಒಂದು ವಿಸ್ಮಯ ಪ್ರತಿಯೊಂದು ಜೀವಿಗೂ ಪ್ರಕೃತಿ ವಿಶೇಷ ಶಕ್ತಿಯನ್ನು ನೀಡಿದೆ ಈ ಶಕ್ತಿಯಿಂದಲೇ ಒಂದು ಜೀವಿ ಇತರ ಜೀವಿಗಿಂತ ಭಿನ್ನವಾಗಿರುತ್ತವೆ, ಇನ್ನು ಬೇಟೆಯಾಡುವ ವಿಚಾರ ಬಂದರೂ ಒಂದು ಜೀವಿ ಇನ್ನೊಂದು ಜೀವಿಯನ್ನು ಬೇಟೆಯಾಡುವ ಶಕ್ತಿಯನ್ನು ಹೊಂದಿರುತ್ತವೆ ಅಷ್ಟು ಮಾತ್ರವಲ್ಲದೇ ಕೆಲವೊಮ್ಮೆ ತಾವೇ ಇತರ ಜೀವಿಗಳಿಗೆ ಆಹಾರವಾಗುವುದು ಇದೆ ಇದು ಪ್ರಕೃತಿಯ ನಿಯಮ.
ಅದೇ ರೀತಿ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಬಹಳ ವಿಶೇಷವಾಗಿದೆ ಅದೇನೆಂದರೆ ಮರದ ಕೊಂಬೆಯಲ್ಲಿ ಕುಳಿತು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಹಾವನ್ನೇ ಮೀನೊಂದು ಬೇಟೆಯಾಡಲು ಮುಂದಾಗಿರುವುದು. ಹೌದು ಸಾಮಾನ್ಯವಾಗಿ ಹಾವುಗಳು ಕಪ್ಪೆ, ಮೀನು ಹೀಗೆ ಹಲವು ಜೀವಿಗಳನ್ನು ಬೇಟೆಯಾಡುತ್ತವೆ ಆದರೆ ಇಲ್ಲಿ ಅದು ಉಲ್ಟಾ ಆಗಿದ್ದು ನೀರಿನಲ್ಲಿದ್ದ ಮೀನು ಹಾವಿನ ಬೇಟೆಯಾಡಲು ಹೊರಟಿರುವುದು.
ಸಾಮಾಜಿಕ ಜಾಲತಾಣದಳ್ಳಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೆರೆಯಲ್ಲಿದ್ದ ಮೀನೊಂದು ಅಲ್ಲೇ ಪಕ್ಕದಲ್ಲಿ ಸಣ್ಣ ಮರದ ರೆಂಬೆಯಲ್ಲಿ ಕುಳಿತು ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನು ಬೇಟೆಯಾಡಲು ಜಿಗಿದಿದೆ, ಜಿಗಿದ ಮೀನು ಹಾವಿನ ತಲೆಯನ್ನು ಕಚ್ಚಿ ಹಿಡಿದು ಕೆಲ ಹೊತ್ತು ಹೋರಾಟ ನಡೆಸಿದೆ ಆದರೆ ಮರದಲ್ಲಿ ಸುತ್ತು ಹಾಕಿಕೊಂಡಿದ್ದ ಹಾವು ಮರವನ್ನು ಗಟ್ಟಿ ಆಧಾರವಾಗಿರಿಸಿದ್ದರಿಂದ ಮೀನು ಎಷ್ಟೇ ಪ್ರಯತ್ನ ಪಟ್ಟರು ಬೇಟೆಯಾಡಲು ಸಾಧ್ಯವಾಗಲಿಲ್ಲ ಅಷ್ಟೋತ್ತಿಗೆ ನೀರಿನಲ್ಲಿದ್ದ ಇನ್ನೊಂದು ಮೀನು ಜಿಗಿದು ಬೇಟೆಯಾಡಿದ ಮೀನಿನ ಬಾಲವನ್ನು ಕಚ್ಚಿ ಎಳೆದಿದೆ ಅಷ್ಟೋತ್ತಿಗೆ ಮೀನಿನ ಬಾಯಿಯಿಂದ ತಪ್ಪಿಸಿಕೊಂಡ ಹಾವು ಬದುಕಿದೆ ಬಡಜೀವ ಎಂದು ಸ್ಥಳದಿಂದ ಪಲಾಯನಮಾಡಿದೆ.
The fish mistakenly bit on a snake this time and his fish friend warned and saved him.
pic.twitter.com/ydZyGplO71
— Figen (@TheFigen_)
November 18, 2024
ಸದ್ಯ ಹಾವನ್ನು ಬೇಟೆಯಾಡಲು ಜಿಗಿದ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ…