Advertisement

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

08:06 PM Nov 05, 2024 | Team Udayavani |

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ದೆಹಲಿಯ 1876 ಸೈಟ್‌ಗಳಲ್ಲಿ 5ಜಿ ಸೇವೆಯನ್ನು ನೀಡುವುದಕ್ಕಾಗಿ ಟೆಂಡರ್‌ ಆಹ್ವಾನಿಸಿದೆ. ಆದಾಯ ಹಂಚಿಕೆ ಮಾದರಿಯಲ್ಲಿ 5ಜಿ ಸೇವೆ ನೀಡಲು ಬಿಎಸ್‌ಎನ್‌ಎಲ್‌ ಮುಂದಾಗಿದ್ದು, ಮೊದಲಿಗೆ ನೋಂದಣಿ ಮಾಡಿಕೊಂಡಿರುವ 1 ಲಕ್ಷ ಮಂದಿಗೆ ಈ ಸೇವೆ ಲಭ್ಯವಾಗಲಿದೆ.

Advertisement

ಟೆಂಡರ್‌ ಸಲ್ಲಿಸಲು ನ.22 ಕೊನೇ ದಿನವಾಗಿದ್ದು, 50 ಲಕ್ಷ ರೂ.ನ ಬಿಡ್‌ಗೆ ಭದ್ರತೆಯನ್ನು ಒದಗಿಸಬೇಕು ಎಂದೂ ಸೂಚಿಸಲಾಗಿದೆ. ಬಿಡ್ಡರ್‌ಗಳೇ ಇದರ ಯೋಜನೆ, ವಿನ್ಯಾಸ ಮತ್ತು ಪೂರೈಕೆಯನ್ನು ಯೋಜಿಸಬಹುದು ಎಂದು ಸಂಸ್ಥೆ ತಿಳಿಸಿದೆ. ಈ ಒಪ್ಪಂದ 7 ವರ್ಷಗಳ ಅವಧಿಯನ್ನು ಹೊಂದಿರುತ್ತದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next