Advertisement
ಮೋಜಿನ ವ್ಯಾಯಾಮ ವ್ಯಾಯಾಮವನ್ನು ಆಟವೆಂದು ಪರಿಗಣಿಸಿದಾಗ ಮತ್ತಷ್ಟು ಆಸಕ್ತಿ ಹುಟ್ಟು ತ್ತದೆ. ಶಾಲೆಯಲ್ಲಿ ಓದುವಾಗ ಮಾಡುತ್ತಿದ್ದ ಕಪ್ಪೆ ಜಿಗ್ಗಿತ, ಕರಡಿ ಓಟಗಳಂತಹ ಭಂಗಿಗಳಲ್ಲಿ ಚಲಿಸುವುದು ಎಷ್ಟು ಕಷ್ಟ, ಬಿಗಿಯಾದ ಸ್ನಾಯುಗಳು ಸಡಿಲಗೊಳಿ ಸಲು ಸಹಕಾರಿ. ದೇಹದ ಅಶಕ್ತ ಭಾಗವನ್ನು ಗುರುತಿಸಿ ಅದನ್ನು ಬಲಗೊಳಿಸುತ್ತದೆ.
ದೇಹದ ಫಿಟ್ನೆಸ್ ಕಾಪಾಡುವಲ್ಲಿ ಪುಶ್‌ಅಪ್, ಸಿಟ್‌ಅಪ್ ಸಹಕಾರಿಯಾಗಿವೆ. ಇದನ್ನು ಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದಲ್ಲಿ ಆಕರ್ಷಕ ಅಂಗಸೌಷ್ಟವ ಪಡೆಯಬಹುದು. ಇನ್ನು ಈ ವ್ಯಾಯಾಮ ಮಾಡುವಾಗ 10ರಿಂದ 1ರ ಎಣಿಕೆ ಮಾಡಿ ವ್ಯಾಯಮ ಮಾಡುವುದು ಉತ್ತಮ. ಹಾಗೇ ಮಾಡುವಾಗ ಶಕ್ತಿ ಪ್ರದರ್ಶನ ಮಾಡಲು ಹೋಗದೇ 20 ಸೆಕೆಂಡ್‌ಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ವ್ಯಾಯಾಮ ಪ್ರಾರಂಭಿಸುವುದರಿಂದ ದೇಹದ ಮೇಲೆ ಹಿಡಿತ ಸಾಧಿಸಬಹುದು.
Related Articles
ಯಾವುದೇ ವ್ಯಾಯಾಮ ಮಾಡಲು ಕಾಲುಗಳು ಪ್ರಮುಖ ಪಾತ್ರ ವಹಿಸುತ್ತದೆ. ಈ ಭಾಗದಲ್ಲಿರುವ ಸ್ನಾಯುಗಳನ್ನು ಬಲಿಷ್ಠಗಳಿಸಿಕೊಂಡರೆ, ಹೆಚ್ಚು ಶ್ರಮ ಬಯಸುವ ಇತರ ಭಂಗಿಗಳ ವ್ಯಾಯಾಮ ಮಾಡಲು ಸಾಧ್ಯ. ಒಂದೇ ಮೆಟ್ಟಿಲನ್ನು ವೇಗವಾಗಿ ಹತ್ತುವುದು ಇಳಿಯುವುದು ಮಾಡಿ, ಆಯಾಸವಾದಾಗ ನಿಲ್ಲಿಸಿ, ಮತ್ತು ಪ್ರಾರಂಭಿಸಬೇಕು. ಈ ರೀತಿ ಪ್ರತಿನಿತ್ಯ ಮಾಡಿದಾಗ ಸ್ನಾಯುಗಳಲ್ಲಿ ಹೆಚ್ಚಿನ ಬಲ ತುಂಬಿಕೊಳ್ಳುತ್ತದೆ.
Advertisement
ಸ್ಕಿಪ್ಪಿಂಗ್, ಬ್ಯಾಟಿಂಗ್ಪ್ರತಿ ನಿತ್ಯ ಬೆಳಗ್ಗೆ 10ರಿಂದ 15 ನಿಮಿಷ ಸ್ಕಿಪ್ಪಿಂಗ್ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು, ವ್ಯಾಯಾಮ ಮಾಡಲು ಅನುವು ಮಾಡಿಕೊಡುತ್ತದೆ. ಮನೆಯಲ್ಲಿರುವ ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ವಿವಿಧ ಭಂಗಿಗಳನ್ನು ಅಭ್ಯಸಿಸುವುದರಿಂದ ಕೈಗಳ ಸ್ನಾಯುಗಳು ಬಲಗೊಳ್ಳುತ್ತವೆ. ಕಾರ್ತಿಕ್ ಚಿತ್ರಾಪುರ