Advertisement

ಶಟ್ಲರ್‌ ಸಿಕ್ಕಿ, ಕಿರಣ್‌ ಕೋವಿಡ್ ನೆಗೆಟಿವ್‌; ಸೋಮವಾರದಿಂದ ಶಿಬಿರ

05:14 PM Aug 15, 2020 | keerthan |

ಹೈದರಾಬಾದ್‌: ಶನಿವಾರದ ದ್ವಿತೀಯ ಕೋವಿಡ್‌-19 ಪರೀಕ್ಷೆಯಲ್ಲಿ ಶಟ್ಲರ್‌ ಎನ್‌. ಸಿಕ್ಕಿ ರೆಡ್ಡಿ ಮತ್ತು ಫಿಸಿಯೋ ಕಿರಣ್‌ ಚಲ್ಲಂಗುಡ್ಲ ಅವರ ಫ‌ಲಿತಾಂಶ ನೆಗೆಟಿವ್‌ ಬಂದಿರುವುದು ಭಾರತದ ಬ್ಯಾಡ್ಮಿಂಟನ್‌ ವಲಯದಲ್ಲಿ ಸಂತಸ ಮೂಡಿಸಿದೆ. ಇದರಿಂದ ಸೋಮವಾರದಿಂದ ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್‌ ಶಿಬಿರ ಪುನರಾರಂಭಗೊಳ್ಳಲಿದೆ.

Advertisement

ಕಾಮನ್‌ವೆಲ್ತ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ, 26 ವರ್ಷದ ಸಿಕ್ಕಿ ರೆಡ್ಡಿ ಮತ್ತು ಕಿರಣ್‌ ಸಿ. ಅವರಲ್ಲಿ ಗುರುವಾರ ಪಾಸಿಟಿವ್‌ ಕಂಡುಬಂದಿತ್ತು. ಇಬ್ಬರೂ ಆಗ ಸಾಯ್‌ನ ಪುಲ್ಲೇಲ ಗೋಪಿಚಂದ್‌ ಅಕಾಡೆಮಿಯಲ್ಲಿದ್ದರು. ವಿಷಯ ತಿಳಿದ ಕೂಡಲೇ ಅಕಾಡೆಮಿಯನ್ನು ಮುಚ್ಚಿ ಸ್ಯಾನಿಟೈಸ್‌ ಮಾಡಲಾಯಿತು. ಶಿಬಿರವನ್ನು ಸ್ವಲ್ಪ ದಿನಗಳ ಕಾಲ ಸ್ಥಗಿತಗೊಳಿಸಲಾಯಿತು.

ಇಬ್ಬರೂ ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಕೊಂಡಿದ್ದು, ಇಬ್ಬರ ಫ‌ಲಿತಾಂಶವೂ ನೆಗೆಟಿವ್‌ ಬಂದಿದೆ ಎಂಬುದಾಗಿ ಸಾಯ್‌ ತಿಳಿಸಿದೆ. ಇವರಿಬ್ಬರ ಕುಟುಂಬದ ಸದಸ್ಯರಲ್ಲೂ ನೆಗೆಟಿವ್‌ ಬಂದಿದೆ.

ಆಟಗಾರರು, ಕೋಚ್‌ ಹಾಗೂ ಸಹಾಯಕ ಸಿಬಂದಿ ಸೇರಿದಂತೆ 21 ಮಂದಿಗೆ ಆ. 7ರಂದು ಸಾಯ್‌ ಕೋವಿಡ್‌-19 ಟೆಸ್ಟ್‌ ನಡೆಸಿತ್ತು. ಇದರಲ್ಲಿ 19 ಮಂದಿಯ ಫ‌ಲಿತಾಂಶ ನೆಗೆಟಿವ್‌ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next