Advertisement
ಜೀನ್ಸ್ ಧರಿಸಿ ಆಡಲು ಫಿಡೆ ಅನುಮತಿ ನೀಡಿರುವುದೇ ಇದಕ್ಕೆ ಕಾರಣ.ರ್ಯಾಪಿಡ್ ಚೆಸ್ ವೇಳೆ 9ನೇ ಸುತ್ತಿನಲ್ಲಿ ವಸ್ತ್ರಸಂಹಿತೆ ವಿವಾದದಿಂದಾಗಿ ಕಾರ್ಲ್ಸನ್ ಸ್ಪರ್ಧೆಯಿಂದ ಹೊರಬಿದ್ದಿದ್ದರು. ಜೀನ್ಸ್ ಧರಿಸಿ ಆಡಿದ್ದ ಕಾರ್ಲ್ಸನ್ಗೆ ನಿಯಮ ಉಲ್ಲಂ ಸಿದ ಕಾರಣ ನೀಡಿ ಆರಂಭದಲ್ಲಿ 17,000 ರೂ. ದಂಡ ವಿಧಿಸಲಾಯಿತು. ಬಳಿಕ ಕೂಟದಿಂದಲೇ ಅನರ್ಹಗೊಳಿಸಲಾಗಿತ್ತು.
ಫಿಡೆಯ ಉಪಾಧ್ಯಕ್ಷ, ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ವಿರುದ್ಧ ಕಾರ್ಲ್ಸನ್ ಕಿಡಿ ಕಾರಿದ್ದಾರೆ. ತನ್ನ ಎಲ್ಲ ಒಳ್ಳೆಯ ಗುಣಗಳ ಕಾರಣ, ಆನಂದ್ ತಮ್ಮ ಹುದ್ದೆಗೆ ಸಲ್ಲದವರಾಗಿದ್ದಾರೆ ಎಂದು ನನಗನ್ನಿಸುತ್ತಿದೆ ಎಂದು ಕಾರ್ಲ್ಸನ್ ಹೇಳಿದ್ದಾರೆ. ಆನಂದ್, ತೊಂದರೆ ತೆಗೆದುಕೊಳ್ಳಲು ಸಿದ್ಧರಿಲ್ಲದ ವ್ಯಕ್ತಿ ಎಂಬರ್ಥದಲ್ಲಿ ಕಾರ್ಲ್ಸನ್ ಹೀಗೆ ಹೇಳಿದ್ದಾರೆ. ಜೀನ್ಸ್ ವಿವಾದವಾದಾಗ, ಸಾಮಾನ್ಯವಾಗಿ ಚೆಸ್ ಕೂಟಗಳಲ್ಲಿ ಜೀನ್ಸ್ ಧರಿಸುವುದಿಲ್ಲ ಎಂದು ಆನಂದ್ ಹೇಳಿದರು. ಅದರರ್ಥ, ಕೆಲವು ಸಂದರ್ಭದಲ್ಲಿ ಧರಿಸಬಹುದು ಎಂದಾಗುತ್ತದೆ ಅಲ್ಲವೇ ಎಂದು ಕಾರ್ಲ್ಸನ್ ಪ್ರಶ್ನಿಸಿದ್ದಾರೆ.