Advertisement
ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂದರೆ ಸೈಮಾ ಅವಾರ್ಡ್ಸ್ ಈ ಬಾರಿ 10 ನೇ ವರ್ಷದ ಸಮಾರಂಭದ ಸಂಭ್ರಮದಲ್ಲಿದೆ.
Related Articles
Advertisement
ಗರುಡ ಗಮನ ವೃಷಭ ವಾಹನ: ಲೋ ಬಜೆಟ್ ನಲ್ಲಿ ಸ್ಥಳೀಯ ಕಥೆಯನ್ನಿಟ್ಟುಕೊಂಡು ತೆರೆಗೆ ಬಂದ ರಾಜ್ .ಬಿ ಶೆಟ್ಟಿಯವರ ʼಗರುಡ ಗಮನ ವೃಷಭ ವಾಹನʼ ಪ್ರತಿಷ್ಠಿತ ಸೈಮಾದಲ್ಲಿ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ನಾಮಿನೇಟ್ ಆದ ಪ್ರಮುಖ ತೆಲುಗು ಚಿತ್ರಗಳು : 2021 ರಲ್ಲಿ ಬಂದ ಅಲ್ಲು ಅರ್ಜುನ್ ಅವರ ಮಾಸ್ ಮಸಾಲ ʼಪುಷ್ಪಾʼ ಬರೋಬ್ಬರಿ 12 ವಿಭಾಗದಲ್ಲಿ ನಾಮಿನೇಟ್ ಆಗಿದೆ. ಇದರೊಂದಿಗೆ ಬಾಲಯ್ಯ ಅವರ ʼಅಖಂಡʼ ಸಿನಿಮಾ 10 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ʼಜಾತಿ ರತ್ನಲುʼ 8 ವಿಭಾಗದಲ್ಲಿ ನಾಮಿನೇಟ್ ಆಗಿದೆ. ʼಉಪ್ಪೇನʼ ಚಿತ್ರವೂ ಸೈಮಾದಲ್ಲಿ 8 ವಿಭಾಗದಲ್ಲಿ ನಾಮಿನೇಟ್ ಆಗಿದೆ.
ನಾಮಿನೇಟ್ ಆದ ಪ್ರಮುಖ ತಮಿಳು ಚಿತ್ರಗಳು : ಧನುಷ್ ನಟನೆಯ ವಿಭಿನ್ನ ಕಥೆಯುಳ್ಳ ʼಕರ್ಣನ್ʼ ಚಿತ್ರ 10 ವಿಭಾಗದಲ್ಲಿ ನಾಮಿನೇಟ್ ಆಗಿದೆ. ಇದರೊಂದಿಗೆ ʼಡಾಕ್ಟರ್ʼ 9 ವಿಭಾಗದಲ್ಲಿ ನಾಮಿನೇಟ್ ಆಗಿದ್ದು, ವಿಜಯ್ ಅವರ ʼಮಾಸ್ಟರ್ʼ 7 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಇನ್ನು ಕಂಗನಾ ರಣಾವತ್ ಅವರ ʼತಲೈವಿʼ 7 ವಿಭಾಗದಲ್ಲಿ ನಾಮಿನೇಟ್ ಆಗಿದೆ.
ನಾಮಿನೇಟ್ ಆದ ಪ್ರಮುಖ ಮಲಯಾಳಂ ಚಿತ್ರಗಳು :
ಇನ್ನು ಮಲಯಾಳಂ ಚಿತ್ರಗಳನ್ನು ಗಮನಿಸಿದ್ರೆ, ಫಹಾದ್ ಪಾಸಿಲ್ ಅವರ ʼಜೋಜಿʼ( 6 ನಾಮಿನೇಟ್) ದುಲ್ಖರ್ ಅವರ ʼಕುರುಪ್ʼ(8 ನಾಮಿನೇಟ್), ಮಲ್ಲಿಕ್ (6 ನಾಮಿನೇಟ್), ಮಿನ್ನಲ್ ಮುರಳಿ (10 ನಾಮಿನೇಟ್)
ಸೈಮಾ ಅವಾರ್ಡ್ ಗೆ ನೀವೂ ಕೂಡ ನಿಮ್ಮ ಮೆಚ್ಚಿನ ಚಿತ್ರಗಳಿಗೆ ಓಟ್ ಮಾಡಬಹುದು. ಸೈಮಾ ವೆಬ್ ಸೈಟ್ ಅಥವಾ ಫೇಸ್ ಬುಕ್ ಪೇಜ್ ಗೆ ಹೋಗಿ ಓಟ್ ಹಾಕಬಹುದು. ಈ ಬಾರಿ ಸೈಮಾ ಅವಾರ್ಡ್ಸ್ 10ನೇ ವರ್ಷದ ಸಂಭ್ರಮದಲ್ಲಿದ್ದು, ಬೆಂಗಳೂರಿನಲ್ಲಿ ಸೆಪ್ಟೆಂಬರ್ 10,11 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
SIIMA, the most popular awards show in South India announces its nominations for 2021 | Kannada #GarudaGamanaVrishabhaVahana #Roberrt and #Yuvarathnaa are leading the SIIMA Nominations for 2021 in Kannada.
.
.
.
.#10YearsOfSIIMA #SIIMA #SIIMA2021Nominations #SIIMA2022 pic.twitter.com/JHW8J6HUyi