ಸರ್ವಸಾಧಾರಣ ಜನರ ಜೀವನದಲ್ಲಿ ಸುಖವು ಸರಾಸರಿ ಶೇ.25 ರಷ್ಟು ಮತ್ತು ದುಃಖವು ಶೇ.75 ರಷ್ಟು ಇರುತ್ತದೆ. ದೇಹದಲ್ಲಿ ಪ್ರಾಣ ಇರುವವರೆಗೆ ಪ್ರತಿಯೊಂದು ಜೀವವೂ ಹೆಚ್ಚೆಚ್ಚು ಸುಖವನ್ನು ಪ್ರಾಪ್ತಿ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಸರ್ವೋಚ್ಚ ಮತ್ತು ಚಿರಕಾಲ ಉಳಿಯುವ ಸುಖಕ್ಕೆ ಆನಂದ ಎನ್ನುತ್ತಾರೆ. ಸುಖ ಸಿಗಬೇಕೆಂದು ಕೆಲವರು ವ್ಯವಹಾರ ಮಾಡುತ್ತಾರೆ, ಕೆಲವರು ಮದುವೆ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ಮನೆಗಳನ್ನು ಕಟ್ಟುತ್ತಾರೆ ಇತ್ಯಾದಿ; ಆದರೆ ಇವೆಲ್ಲವುಗಳ ಪ್ರಾಪ್ತಿಯಾದರೂ ಅವರು ನಿಜವಾದ ಅರ್ಥದಲ್ಲಿ ಸುಖೀಗಳಾಗುವುದಿಲ್ಲ. ಏಕೆಂದರೆ, ಇವುಗಳಲ್ಲಿನ ಯಾವುದೇ ವಸ್ತುವಿನ ಗುಣಧರ್ಮವು “ಆನಂದ’ವಾಗಿಲ್ಲ; ಆದುದರಿಂದ, ಇವುಗಳಿಂದ ಆನಂದ ಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಈ ಜಗತ್ತಿನಲ್ಲಿ ಕೇವಲ ಈಶ್ವರನೇ ಆನಂದಮಯವಾಗಿದ್ದಾನೆ; ಆದುದರಿಂದ ಈಶ್ವರಪ್ರಾಪ್ತಿಗಾಗಿ ಸತತ ಪ್ರಯತ್ನ ಮಾಡುವುದೇ ಆನಂದಪ್ರಾಪ್ತಿಯ ಮಾರ್ಗವಾಗಿದೆ.
ಅರುಣ್ ಹೆಚ್.ವಿ
(ಆಧಾರ : ಸನಾತನ ಸಂಸ್ಥೆಯ ಗ್ರಂಥ “ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’)