Advertisement

ಸಿಗಂದೂರು ಕೇಬಲ್‌ ಬ್ರಿಜ್‌ ಕಾಮಗಾರಿಗೆ ವೇಗ

11:52 PM Jul 21, 2022 | Team Udayavani |

ಕೊಲ್ಲೂರು: ಶರಾವತಿ ನದಿಗೆ ನಿರ್ಮಾಣಗೊಳ್ಳಲಿರುವ ಸಿಗಂದೂರು ಕೇಬಲ್‌ ಬ್ರಿಜ್‌ ಕಾಮ ಗಾರಿ ಭರದಿಂದ ಸಾಗುತ್ತಿದ್ದು, ಪೂರ್ಣಗೊಂಡ ಬಳಿಕ ಕೊಲ್ಲೂರು, ನಿಟ್ಟೂರು, ಸಿಗಂದೂರು, ಹೊಸನಗರ, ಸಾಗರ ನಡುವಿನ ಪ್ರಯಾಣ ನಿರಾಳವಾಗಲಿದೆ.

Advertisement

ಒಟ್ಟು 2.14 ಕಿ.ಮೀ. ಉದ್ದದ ಸೇತುವೆ ಇದಾ ಗಿದ್ದು ದೇಶದ ಅತೀ ಉದ್ದದ ಸೇತುವೆಗಳಲ್ಲಿ ಒಂದೆನಿಸಿ ಕೊಳ್ಳಲಿದೆ. ನಿರ್ಮಾಣಕ್ಕೆ ಆರಂಭದ ಹಂತದಲ್ಲಿ ಅನೇಕ ತೊಡಕುಗಳು ಎದುರಾಗಿದ್ದರೂ ಮುಂದಿನ ಒಂದೂವರೆ ವರ್ಷದೊಳಗೆ ಜನ ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆ ಇದೆ.

ರಾಜ್ಯದ ಪ್ರಮುಖ ಶಕ್ತಿ ಕೇಂದ್ರಗಳಾದ ಸಿಗಂದೂರು ಮತ್ತು ಕೊಲ್ಲೂರು ನಡುವೆ ಸಾಗರದಿಂದ ನೇರ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.

ಕುಂದ ನಿರ್ಮಾಣ ಸವಾಲು :

2019ರ ಡಿ. 12ರಂದು ಕಾಮಗಾರಿಗೆ ಚಾಲನೆ ನೀಡಿದ್ದರೂ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಕಾರಣ ಸೇತುವೆ ಕಾಮಗಾರಿಯ ಮೂಲ ಪ್ರಕ್ರಿಯೆ ಆಗಿರುವ ಕುಂದ (ಪೈಲ್‌ ಕ್ಯಾಪ್‌) ನಿರ್ಮಾಣ ಸವಾ ಲಾಗಿತ್ತು. ಒಟ್ಟು 162 ಕುಂದಗಳ ನಿರ್ಮಾಣ ಆಗಬೇಕಿದ್ದು, ಮೊದಲ 2 ವರ್ಷಗಳ ಅವಧಿಯಲ್ಲಿ ಕೇವಲ ಐದನ್ನು ಮಾತ್ರ ನಿರ್ಮಿಸಲು ಸಾಧ್ಯವಾಗಿತ್ತು.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೆಪಿಸಿ (ಕರ್ನಾಟಕ ವಿದ್ಯುತ್‌ ನಿಗಮ) ಸಮಸ್ಯೆಯನ್ನು ಬಗೆಹರಿಸಲು ನಾನಾ ಯೋಜನೆ ರೂಪಿಸಿದರೂ ಒಂದಿಷ್ಟು ಕಾಲ ಅವಕಾಶಕ್ಕಾಗಿ ಕಾಯಬೇಕಾಯಿತು. ಬಳಿಕ ನವೀನ ತಂತ್ರಜ್ಞಾನದ ಮೂಲಕ ಕಾಮಗಾರಿಗೆ ವೇಗ ನೀಡಿದ್ದು ಪ್ರಸ್ತುತ ಇನ್ನೂ 14 ಕುಂದಗಳ ನಿರ್ಮಾಣ ಪೂರ್ಣಗೊಂಡಿದೆ. ಈ 19 ಕುಂದಗಳ ನಿರ್ಮಾಣಕ್ಕೆ 120 ದಿನ ಬೇಕಾಗಬಹುದೆಂದು ಅಂದಾಜಿಸಿದ್ದರೂ ಯೋಜನೆಯ ಅನುಷ್ಠಾನದಲ್ಲಿ ಈಗಾಗಲೇ ವಿಳಂಬ ವಾಗಿರುವುದರಿಂದ 280ಕ್ಕೂ ಅಧಿಕ ಸಿಬಂದಿ ನಿರಂತರವಾಗಿ ಕಾಮಗಾರಿ ನಡೆಸಿ 45 ದಿನಗಳಲ್ಲಿ ಪೂರ್ಣ ಗೊಳಿಸಿದ್ದಾರೆ.

ಕೇಬಲ್‌ ಬ್ರಿಜ್‌ ವೈಶಿಷ್ಟ್ಯ:

ತಳಭಾಗದ ಕುಂದಗಳ ಜತೆಗೆ ಸೇತುವೆಯ ಮೇಲ್ಭಾಗದಲ್ಲಿ ನಿಯಮಿತ ಅಂತರದಲ್ಲಿ ಕುಂದಗಳು ಮತ್ತು ಅವುಗಳಿಂದ ಅಳವಡಿಸಲಾದ ಕೇಬಲ್‌ಗ‌ಳಿಂದ ಸೇತುವೆಗೆ ಹೆಚ್ಚುವರಿ ಆಧಾರ ಒದಗಿಸುವ‌ುದು ಕೇಬಲ್‌ ಬ್ರಿಜ್‌ನ ವೈಶಿಷ್ಟ್ಯ.

ಅವಧಿ ವಿಸ್ತರಣೆ :

ಕೇಂದ್ರ ಸರಕಾರದ ಯೋಜನೆ ಇದಾಗಿದ್ದು ರಾಜ್ಯ ಸರಕಾರದ ಸಹಭಾಗಿತ್ವ ಇದೆ. ಮಧ್ಯಪ್ರದೇಶದ ಖಾಸಗಿ ಸಂಸ್ಥೆ ನಿರ್ಮಿಸುತ್ತಿದ್ದು, ಮುಂದಿನ 10 ವರ್ಷಗಳ ನಿರ್ವ ಹಣೆಯ ಜವಾಬ್ದಾರಿಯೂ ಅದರದೇ ಆಗಿದೆ.

ಪೂರ್ವ ಯೋಜನೆಯಂತೆ ಕಾಮಗಾರಿಯು 2022ರ ಡಿಸೆಂಬರ್‌ತಿಂಗಳಿಗೆ ಮುಗಿಯಬೇಕು. ಆದರೆ ಅನಿವಾರ್ಯ ಕಾರಣಗಳಿಂದಾಗಿ ವಿಳಂಬವಾಗಿದ್ದು ಇನ್ನೂ ಒಂದೂವರೆ ವರ್ಷಕ್ಕೆ ವಿಸ್ತರಿಸಲಾಗಿದೆ. ಮುಂದೆ ಇದನ್ನು ಪ್ರವಾಸಿ ಕೇಂದ್ರವಾಗಿ ಸುವ ಯೋಜನೆಯೂ ಸರಕಾರದ ಮುಂದಿದೆ.

ಬಾರ್ಜ್‌ ಮೂಲಕ ಸಂಚಾರ :

ಕೊಲ್ಲೂರು ಮಾರ್ಗವಾಗಿ ಸಾಗರ, ಶಿವಮೊಗ್ಗಕ್ಕೆ ತೆರಳುವವರಿಗೆ ಶರಾವತಿ ಹೊಳೆ ದಾಟುವುದೇ ದುಸ್ಸಾಹದ ಕೆಲಸ. ಪ್ರಸ್ತುತ ಬಾರ್ಜ್‌ ನಲ್ಲಿ ಕಾರು, ಬಸ್‌ ಇತ್ಯಾದಿ ವಾಹನಗಳನ್ನು ಚಾಲಕ, ಪ್ರಯಾಣಿಕರ ಸಹಿತ ದಾಟಿಸಲಾಗುತ್ತಿದೆ. ಬಾರ್ಜ್‌ ನಿಗದಿತ ಅವ ಧಿಯಲ್ಲಿ ಮಾತ್ರ ಸಂಚರಿಸುವುದರಿಂದ ಅಷ್ಟು ಹೊತ್ತು ಕಾಯುವುದು ಅನಿವಾರ್ಯ. ಇಲ್ಲವೇ 80 ಕಿ.ಮೀ. ಸುತ್ತುಬಳಸು ದಾರಿಯಲ್ಲಿ ಪ್ರಯಾಣಿಸಬೇಕು. ನೂತನ ಸೇತುವೆಯಿಂದ ಪ್ರಯಾಣ ಸುಗಮವಾಗಲಿದೆ.

ಉಳಿತಾಯ: 80  ಕಿ.ಮೀ. ಸುತ್ತು ಬಳಸುವುದು ತಪ್ಪುತ್ತದೆ

ವಾರ್ಷಿಕ : 32 ಕೋ.ರೂ. ಇಂಧನ

ಉದ್ದ  : 2.14 ಕಿ.ಮೀ.

ಅಗಲ: 16 ಮೀಟರ್‌

ಫ‌ುಟ್‌ಪಾತ್‌:  1.5 ಮೀ. ಅಗಲ  (ಎರಡೂ ಬದಿಗಳಲ್ಲಿ)

ಸೇತುವೆ ಕಾಮಗಾರಿಗೆ ಎದುರಾದ ತೊಡಕು ಬಹುತೇಕ ನಿವಾರಣೆಯಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಕೊಲ್ಲೂರು-ಶಿವಮೊಗ್ಗ ನಡುವಿನ ನೇರ ಪ್ರಯಾಣಕ್ಕೆ ಅನುಕೂಲವಾಗಲಿದೆ. ಅಲ್ಲದೇ ಹೊಸನಗರದಿಂದ ಮಾವಿನಕಟ್ಟೆ-ಆಡುಗೋಡು ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ 250 ಕೋಟಿ ರೂ. ವ್ಯಯಿಸಲಾಗಿದ್ದು, ಅನೇಕ ತಿರುವು ಮುಕ್ತ ನೇರ ಮಾರ್ಗವಾಗಿ ಮೂಡಿಬರಲಿದೆ.–  ಬಿ.ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ-ಬೈಂದೂರು

ಸಿಗಂದೂರು ಸೇತುವೆ ನಿರ್ಮಾಣವಾದಲ್ಲಿ ಕೊಲ್ಲೂರು ಶಿವಮೊಗ್ಗ ನಡುವಿನ ಅನಾಯಾಸ ಪ್ರಯಾಣಕ್ಕೆ ಒತ್ತು ಕೊಟ್ಟಂತಾಗುತ್ತದೆ. ಕಾಮಗಾರಿ ಪ್ರಗತಿಯಲ್ಲಿದ್ದು ಈ ಭಾಗದ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ.ಶಶಿಕಾಂತ್‌,  ನಿಟ್ಟೂರು ಗ್ರಾಮಸ್ಥ

ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next