Advertisement
ಮೂಲಗೇಣಿ ಪದ್ಧತಿ ರದ್ಧತಿಗೆ 2012ರ ಜು. 13ರಂದು ರಾಷ್ಟ್ರಪತಿ ಅಂಕಿತ ದೊರಕಿತ್ತು. ಇದುವರೆಗೂ ತಾಲೂಕು ಕಚೇರಿಯಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಅರ್ಜಿ ಇತ್ಯರ್ಥಗೊಳಿಸಲು ವಿಶೇಷ ಅಭಿಯೋಜಕರನ್ನು ನೇಮಕ ಮಾಡಬೇಕು. 2016ರಲ್ಲಿ ಎಲ್ಲವೂ ಸರಿಯಾಗುತ್ತದೆ ಎನ್ನು ವಾಗಲೇ ಇದರ ವಿರುದ್ಧ ಮೂಲಿದಾರರು ಹೈಕೋ ರ್ಟ್ ಮೆಟ್ಟಿಲೇರಿದರು. ಅನಂತರ ಒಕ್ಕಲುಗಳಿಗೆ ನ್ಯಾಯ ಒದಗಿಸಲು ಸರಕಾರ ಮುಂದಾಗಲಿಲ್ಲ. ಕರ್ನಾಟಕ ಹೈಕೋರ್ಟ್ ನ್ಯಾಯಾ ಲಯದಲ್ಲಿ ಮೂಲಗೇಣಿ ಪರ ತೀರ್ಪುಬಂದಿದೆ. ಮೂಲಿದಾರರು ಮೇಲ್ಮನವಿ ಸಲ್ಲಿಸುವ ಮೂಲಕ ಮೂಲಗೇಣಿ ದಾರರಿಗೆ ತೊಂದರೆ ನೀಡುತ್ತಿದ್ದಾರೆ. ಪೊಲೀಸರನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹೇಳಿದರು.