Advertisement

ಅಪ್ಪ, ಅಪ್ಪ, ಅಪ್ಪ..: ಸಿದ್ದರಾಮಯ್ಯ ಪ್ರಾಸಬದ್ಧ ವಾಗ್ದಾಳಿ ಹೀಗಿತ್ತು!

06:48 PM Apr 20, 2022 | Team Udayavani |

ಮೈಸೂರು: ಬಿಜೆಪಿಯವನ ಹತ್ತಿರ 40% ಕಮಿಷನ್ ಕೇಳಿದ್ದೀಯಲ್ಲ ಈಶ್ವರಪ್ಪ.ನಿನಗೆ ನಾಚಿಕೆ ಆಗೋದಿಲ್ವೇನಪ್ಪ.ನೀನು ಸಾರ್ವಜನಿಕ ಜೀವನದಲ್ಲಿ ಇರಬೇಕೇನಪ್ಪ.ಈಶ್ವರಪ್ಪ ನೀನು ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ ಅಲ್ಲಪ್ಪ… ಇದು ವಿಧಾನ ಸಭೆ ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಾಸಬದ್ಧವಾಗಿ ವಾಗ್ದಾಳಿ ನಡೆಸಿದ ಪರಿ.

Advertisement

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಸಿ, ರಾಜ್ಯ ಸರ್ಕಾರದ 40% ಕಮಿಷನ್ ಹಗರಣದ ತನಿಖೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಈಶ್ವರಪ್ಪ ಅವರ ಬಂಧನಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 40% ಕಮಿಷನ್, ಜಿಎಸ್‌ಟಿ ಇತರ ಎಲ್ಲ ಸೇರಿ ಉಳಿಯೋದು 25%.ಇದರಿಂದ ಕ್ವಾಲಿಟಿ ಕೆಲಸ ಮಾಡಲು ಸಾಧ್ಯವಾ. ಈ ರಾಜ್ಯ ಉಳಿಯಬೇಕಾದರೆ ಬಿಜೆಪಿಯನ್ನು ಕಿತ್ತೊಗೆಯಬೇಕು.ಇಲ್ಲದಿದ್ದರೆ ಸುಳ್ಳು ಹೇಳಿ ರಾಜ್ಯ ಹಾಳು ಮಾಡುತ್ತಾರೆ ಎಂದರು.

ಈಶ್ವರಪ್ಪರನ್ನ ಯಾಕೆ ಅರೆಸ್ಟ್ ಮಾಡಬೇಕು ಅಂತಾ ಎಚ್. ಡಿ. ಕುಮಾರಸ್ವಾಮಿ ಕೇಳುತ್ತಾರೆ. ಇನ್ನೇನು ನಿಮ್ಮನ್ನು ಅರೆಸ್ಟ್ ಮಾಡಬೇಕಾ? ವಿರೋಧ ಪಕ್ಷದಲ್ಲಿ ಇರುವವರು ಮಾತನಾಡುವ ಮಾತ ಇದು.ಈಶ್ವರಪ್ಪ 40% ಕಮಿಷನ್‌ ಪಡೆದಿದ್ದಾರೆ. ಅದಕ್ಕೆ ಅವರನ್ನ ಬಂಧಿಸಬೇಕು. ಇದನ್ನು ಸಂತೋಷ್ ಕುಟುಂಬಸ್ಥರೇ ಹೇಳಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿ ಪಾರ್ಟಿಯವನು ಎಂದರು.

ನನ್ನ ಸಾವಿಗೆ ಈಶ್ವರಪ್ಪ ಕಾರಣ ಅಂತ ಡೆತ್ ನೋಟ್ ಇದೆ‌. ನಾನು, ಡಿ.ಕೆ. ಶಿವಕುಮಾರ್ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದೆವು. ಸಂತೋಷ್ ತಾಯಿ ಹಾಗೂ ಅತನ ಹೆಂಡತಿ ಈಶ್ವರಪ್ಪನ್ನ ನೇತು ಹಾಕಿ ಅಂದರು. ಈಶ್ವರಪ್ಪ ಒಬ್ಬ ಕೊಲೆಗಡುಕ.ಎಫ್‌ಐಆರ್ ನಲ್ಲಿ ಈಶ್ವರಪ್ಪ ಮೊದಲ ಆರೋಪಿ. ಆದರೆ ಕೇಸ್ ಭ್ರಷ್ಟಾಚಾರದ ಅಡಿಯಲ್ಲಿ ಹಾಕಿಲ್ಲ.ಇದಕ್ಕೆ ನಮ್ಮ ಪ್ರತಿಭಟನೆ. ಅದಕ್ಕೆ 10 ವರ್ಷ ಶಿಕ್ಷೆ ಇದೆ.ಬೇರೆ ಸಾಮಾನ್ಯ ಜನ ಮಾಡಿದ್ರೆ ಅರೆಸ್ಟ್ ಮಾಡುತ್ತಿದ್ದರು. ಈಶ್ವರಪ್ಪನನ್ನ ಅರೆಸ್ಟ್ ಮಾಡಬೇಕೋ ಬೇಡವೋ..? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next