Advertisement
ಸಿದ್ದರಾಮಯ್ಯ ಪ್ರಾರಂಭದಿಂದಲೇ ಸರಕಾರವನ್ನು ಅಸ್ಥಿರಗೊಳಿಸುವ ಕುತಂತ್ರ ಮಾಡುತ್ತಿದ್ದಾರೆ. ತನ್ನ ರಾಜಕಿಯ ಉಳಿವಿಗಾಗಿ ಏನೇನೋ ನಾಟಕವಾಡಿ ಆ ಎಲ್ಲ ತಪ್ಪುಗಳನ್ನು ಬಿಜೆಪಿಯ ಮೇಲೆ ಹೊರಿಸಿ ರಾಜ್ಯದ ಜನರ ಮನಸ್ಸಿನಲ್ಲಿ ಬಿಜೆಪಿಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವುದು ಅವರ ಏಕಮೇವ ಅಜೆಂಡ ಎಂದರು.ಬಿಜೆಪಿಯನ್ನು ದೂರ ಇಡಬೇಕು ಎಂಬ ಏಕೈಕ ಉದ್ದೇಶದಿಂದ ಒಲ್ಲದ ಮನಸ್ಸಿನಿಂದ ಸರಕಾರ ರಚಿಸಿ ಈಗ ರಾಜ್ಯದ ಜನತೆ ಅನ್ಯಾಯ ಮಾಡಲಾಗುತ್ತಿದೆ. ಈಗಿನ ರಾಜಕೀಯ ನಾಟಕದಲ್ಲಿ ಬಿಜೆಪಿ ಪಾತ್ರ ಎಳ್ಳಷ್ಟೂ ಇಲ್ಲ ಎಂದು ತಿಳಿಸಿದರು.
ನಾವು ದಿಲ್ಲಿಯಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ ಭಾಗ ವಹಿಸಿದ್ದೆವು ಹೊರತು ಯಾವುದೇ ಆಪರೇಷನ್ ಕಮಲ ಮಾಡಲು ಅಲ್ಲಿಗೆ ಹೋದದ್ದಲ್ಲ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದಾಗ 104 ಶಾಸಕರನ್ನು ಹೊಂದಿರುವ ನಾವೆಲ್ಲಾ ಒಂದೆಡೆ ಒಟ್ಟು ಸೇರಿ ಸರಕಾರ ರಚನೆಯ ವಿಚಾರದಲ್ಲಿ ತೊಡಗಿದರೆ ತಪ್ಪೇನು ಎಂದೂ ಪ್ರಶ್ನಿಸಿದರು.
Related Articles
ಮಂಗಳೂರು: ಕಾಂಗ್ರೆಸ್‌ನ ಎಲ್ಲ ಶಾಸಕರನ್ನು ಒಂದೆಡೆ ಸೇರಿಸಿಕೊಂಡು ಒಗ್ಗಟ್ಟು ಪ್ರದರ್ಶಿಸುವ ಕಾರಣಕ್ಕಾಗಿ ರೆಸಾರ್ಟ್‌ಗೆ ಹೋಗಿದ್ದೇವೆಯೇ ವಿನಾ ರೆಸಾರ್ಟ್ ರಾಜಕಾರಣ ಮಾಡಲು ಹೋಗಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
Advertisement
ಮಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಎಲ್ಲ ಸಮಸ್ಯೆಗೆ ಪರಿಹಾರ ಕಾಣುವುದಕ್ಕಾಗಿ ಒಗ್ಗಟ್ಟಾಗಿ ನಾವು ಹೋಗಿದ್ದೇವೆ. ನಮ್ಮ ಎಲ್ಲ ಶಾಸಕರು ಒಟ್ಟಾಗಿದ್ದರೆ ಮಾತ್ರ ಬಿಜೆಪಿಯವರಿಗೆ ಗೊತ್ತಾಗಲಿದೆ. ಮಾಧ್ಯಮಗಳಲ್ಲಿ ಇಬ್ಬರು ಹೋದರು, ಮೂವರು ಹೋದರು ಎಂಬ ಅಪಪ್ರಚಾರದಿಂದ ಗೊಂದಲ ಸೃಷ್ಟಿಯಾಗತ್ತಿದೆ. ಈ ಎಲ್ಲ ಗೊಂದಲಗಳಿಗೆ ಅಂತ್ಯ ಕಾಣುವ ಉದ್ದೇಶದಿಂದ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.