Advertisement
ಇದಲ್ಲದೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸೇರಿ ಒಟ್ಟು 552 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಎಚ್‌ಡಿಕೆ ಆಸ್ತಿ 42.90 ಕೋಟಿ ರೂ.: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಸ್ತಿ 42.90 ಕೋಟಿ ಆಗಿದ್ದು, ಕುಟುಂಬದ ಬಳಿ 167.14 ಕೋಟಿ ರೂ. ಚರಾಸ್ತಿ ಮತ್ತು ಸ್ಥಿರಾಸ್ತಿ ಇದೆ. ಎಚ್‌ಡಿಕೆ ಅವರ ಬಳಿ 7.80 ಕೋಟಿ ರೂ. ಚರಾಸ್ತಿ ಮತ್ತು 35.10 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಅನಿತಾ ಕುಮಾರಸ್ವಾಮಿ ಅವರ ಬಳಿ 94.22 ಕೋಟಿ ರೂ. ಚರಾಸ್ತಿ ಮತ್ತು ಪ್ರಸಕ್ತ ಮಾರುಕಟ್ಟೆ ಬೆಲೆಯ 30 ಕೋಟಿ ರೂ. ಸ್ಥಿರಾಸ್ತಿ ಇದೆ. 4 ಕ್ಯಾರೆಟ್ ವಜ್ರ: ಎಚ್‌ಡಿಕೆ ಬಳಿ 750 ಗ್ರಾಂ ಚಿನ್ನಾಭರಣ, 12.5 ಕೆಜಿ ಬೆಳ್ಳಿ ಮತ್ತು 4 ಕ್ಯಾರೆಟ್ ವಜ್ರ ಇದೆ. ಅನಿತಾ ಅವರ ಬಳಿ 2 ಕೆಜಿ 660 ಗ್ರಾಂ ಚಿನ್ನಾಭರಣ, 17 ಕೆಜಿ ಬೆಳ್ಳಿ ಮತ್ತು 30 ಕ್ಯಾರೆಟ್ ವಜ್ರವಿದೆ. ದಂಪತಿ ಬಳಿ ಒಟ್ಟು 1ಕೋಟಿ ರೂ. 17 ಲಕ್ಷ 85 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣವಿದೆ.
Related Articles
ಜೆಡಿಎಸ್ 24, ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಇನ್ನೂ ಟಿಕೆಟ್ ಘೋಷಿಸಬೇಕಿದೆ. ಜೆಡಿಎಸ್‌ಗೆ ಕೆಲವೆಡೆ ಅಭ್ಯರ್ಥಿಗಳ ಕೊರತೆ ಇರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಪೂರ್ಣ ಪಟ್ಟಿ ಬಿಡುಗಡೆ ಬಳಿಕ ಅತೃಪ್ತರನ್ನು ಸೆಳೆಯಲು ಕಾಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement