Advertisement
ವಾರಾಹಿ ನದಿ ನೀರು ಒದಗಿಸುವ ಯೋಜನೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಇಲ್ಲಿನ ಯಾವುದೇ ಗ್ರಾಮಕ್ಕೆ ಇದರ ನೀರು ಸಿಗುತ್ತಿಲ್ಲ. ಕಾಲುವೆಗಳ ಮೂಲಕ ಬೈಂದೂರು ಕ್ಷೇತ್ರದ ಹೆಚ್ಚಿನ ಗ್ರಾಮಗಳ ಕೃಷಿ ಚಟುವಟಿಕೆಗೆ ವಾರಾಹಿ ನೀರು ಒದಗಿಸುವಂತೆ ಮಾಡುವಲು ರಾಜ್ಯ ಸರಕಾರದ ವಿರುದ್ಧ ಜನಾಂದೋಲನ ರೂಪಿಸಲು ಬೈಂದೂರು ಕ್ಷೇತ್ರದ 4 ಜಿ.ಪಂ. ಕ್ಷೇತ್ರದ ಪ್ರಮುಖರ ಪೂರ್ವ ಸಿದ್ಧತ ಸಭೆ ನಡೆಯಿತು.
Related Articles
ಮಾಜಿ ಸದಸ್ಯ ರೋಹಿತ್ ಶೆಟ್ಟಿ, ಯುವ ಮೋರ್ಚದ ಅಧ್ಯಕ್ಷ ಗಜೇಂದ್ರ, ಮುಖಂಡರಾದ ಬಾಲಚಂದ್ರ ಭಟ್ ಕಮಲಶಿಲೆ, ಸಮ್ರಾಟ ಶೆಟ್ಟಿ, ಸುರೇಶ ಹೆಬ್ಬಾರ್ ಆಜ್ರಿ, ವೇಣುಗೋಪಾಲ ಶೆಟ್ಟಿ ಆಜ್ರಿ, ರವಿ ಕುಲಾಲ ಶಂಕರನಾರಾಯಣ, ಅಶೋಕ ಕೆ.ಅಂಪಾರು, ರಾಜೇಶ ಹೆಬ್ಟಾರ್ ಉಳ್ಳೂರು, ಪ್ರಸಾದ ಶೆಟ್ಟಿ ಕಟ್ಟಿನಬೈಲು, ಪ್ರಾಣೇಶ್ ಯಡಿಯಾಳ, ರವಿ ಶೆಟ್ಟಿ ಹೊಸಂಗಡಿ, ಪ್ರಭಾಕರ ಕುಲಾಲ್, ಹಟ್ಟಿಯಂಗಡಿ ರಾಜೀವ್ ಶೆಟ್ಟಿ, ಹಕ್ಲಾಡಿ ಶುಭಾಶ್ ಶೆಟ್ಟಿ, ಹರ್ಕುರು ಮಂಜಯ್ಯ ಶೆಟ್ಟಿ, ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣ ಪೂಜಾರಿ ಮತ್ತು ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
Advertisement
ಆ.15ರ ಬಳಿಕ ಬೃಹತ್ ಹೋರಾಟಆರಂಭದಲ್ಲಿ ಪ್ರತೀ ಗ್ರಾಮದಲ್ಲೂ ಸಭೆ ನಡೆಸುವ ಮೂಲಕ ವಾರಾಹಿ ಯೋಜನೆಯಡಿ ಬೈಂದೂರಿಗೆ ಆಗಿರುವ ಅನ್ಯಾಯ, ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಲಾಗುವುದು. ಆ.15ರ ಅನಂತರ ರಾಜ್ಯ ಸರಕಾರದ ವಿರುದ್ಧ ಬೃಹತ್ ಹೋರಾಟ ಅಥವಾ ಜನಾಂದೋಲನ ನಡೆಸಲಾಗುವುದು. ಕಾಲುವೆಗಳ ಮೂಲಕ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಒದಗಿಸುವುದು, ವಾರಾಹಿ ಬಲದಂಡೆ ಯೋಜನೆ ಮತ್ತು ಸಿದ್ದಾಪುರ ಏತ ನೀರಾವರಿ ಯೋಜನೆ ಶಕ್ತಿ ತುಂಬುವುದು ಇದರ ಉದ್ದೇಶವಾಗಿದೆ ಎಂದು
ಶಾಸಕರು ಹೇಳಿದರು.