ವಾಷಿಂಗ್ಟನ್: ಭಾರತೀಯರಿಗೆ ಕ್ರಿಪ್ಟೋಕರೆನ್ಸಿ ಬಗ್ಗೆ ಈಗಿನ್ನೂ ಮಾಹಿತಿ ಸಿಗಲಾರಂಭಿಸಿದೆ. ಆದರೆ ಅದಾಗಲೇ ಕ್ರಿಪ್ಟೋಕರೆನ್ಸಿಯ ಸಂಪೂರ್ಣ ಮಾಹಿತಿ ಪಡೆದಿರುವ ಭಾರತೀಯ-ಅಮೆರಿಕನ್ ಅಣ್ಣ ತಂಗಿ ಜೋಡಿಯೊಂದು ಕ್ರಿಪ್ಟೋಕರೆನ್ಸಿ ಮೈನಿಂಗ್ ಮಾಡಿ ಲಕ್ಷಾಂತರ ರೂ. ಸಂಪಾದನೆ ಮಾಡಲಾರಂಭಿಸಿದ್ದಾರೆ.
ಅಮೆರಿಕದಲ್ಲಿರುವ ಇಶಾನ್ (14 ವ) ಮತ್ತು ಆನ್ಯಾ (9 ವ) ಈ ಸಾಧನೆ ಮಾಡಿರುವ ಜೋಡಿ.
ಇಶಾನ್ ಗೆ ಫೆಬ್ರವರಿಯಲ್ಲಿ ಕ್ರಿಪ್ಟೋಕರೆನ್ಸಿ ಬೆಲೆ ಹೆಚ್ಚುತ್ತಿದ್ದುದ್ದನು ಕಂಡು ತನಗೂ ಅದನ್ನು ಖರೀದಿಸುವ ಮನಸ್ಸಾಯಿತಂತೆ. ಆದರೆ ಅಷ್ಟು ಹಣವಿಲ್ಲದ ಕಾರಣ ಆತ ಅದರ ಮೈನಿಂಗ್ ಕೆಲಸ ಆರಂಭಿಸಿದ್ದಾನೆ. ಅದಕ್ಕೆ ತಂಗಿ ಆನ್ಯಾಳೂ ಕೈ ಜೋಡಿಸಿದ್ದಾಳೆ. ಮನೆಯಲ್ಲಿದ್ದ ಗೇಮಿಂಗ್ ಕಂಪ್ಯೂಟರ್ ನೆಲ್ಲಿ ಮೈನಿಂಗ್ ಕಂಪ್ಯೂಟರ್ ಮಾಡಿಕೊಳ್ಳಲಾಗಿದೆ.
ದಿನಕ್ಕೆ 3 ಡಾಲರ್ ದುಡಿಮೆ ಯೊಂದಿಗೆ ಆರಂಭವಾದ ಕೆಲಸ ಈಗ ತಿಂಗಳಿಗೆ 22 ಲಕ್ಷ ರೂ. ದುಡಿಯುವ ಮಟ್ಟಿಗೆ ಬೆಳೆದಿದೆ. ಯೂಟ್ಯೂಬ್ ನೋಡಿ, ಲೇಖನಗಳನ್ನು ಓದಿ ತಂತ್ರಜ್ಞಾನ ಕಲಿತಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಏನಿದು ಕ್ರಿಪ್ಟೋ ಮೈನಿಂಗ್?: ಪ್ರತಿ ಕ್ರಿಪ್ಟೋಕರೆನ್ಸಿಯ ವರ್ಗಾವಣೆಯನ್ನು ಪ್ರೊಸೆಸ್ ಮಾಡುವುದಕ್ಕೆ ಮೈನಿಂಗ್ ಎನ್ನಲಾಗುತ್ತದೆ. ಇದಕ್ಕೆ ಉತ್ತಮ ತಂತ್ರಜ್ಞಾನವಿರುವ ಕಂಪ್ಯೂಟರ್ ಸೇರಿ ಕೆಲ ತಂತ್ರಜ್ಞಾನ ಬೇಕಾಗುತ್ತದೆ.