Advertisement
ಚಂದ್ರ ಗ್ರಹದ ಒಡಲು ತಂಪಾಗುವ ಕಾರಣದಿಂದ ಚಂದ್ರ ಕುಗ್ಗುತ್ತಾನಂತೆ. ಕಳೆದ ಹಲವಾರು ಶತ ಮಿಲಿಯನ್ ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು ಅಂದಿನಿಂದ ನಮ್ಮ ಚಂದ್ರನ ಗಾತ್ರ ಸುಮಾರು 50 ಮೀಟರ್ ಗಳಷ್ಟು ಅಂದರೆ ಬರೋಬ್ಬರಿ 150 ಅಡಿಗಳಷ್ಟು ಕುಗ್ಗಿದೆ.
Related Articles
Advertisement
ಚಂದ್ರನ ಮೆಲ್ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಸಂರಚನೆಗಳು ಮಹಡಿಯ ಮೆಟ್ಟಿಲುಗಳಂತೆ ಕಾಣುತ್ತದೆ. ಇದು ಸಾಮಾನ್ಯವಾಗಿ ಹತ್ತು ಮೀಟರ್ ಗಳಷ್ಟು ಎತ್ತರವನ್ನು ಹೊಂದಿದ್ದು ಹಲವಾರು ಕಿಲೋಮೀಟರ್ ಗಳವರೆಗೆ ಇದು ಚಾಚಿಕೊಂಡಿರುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಅಪೋಲೋ ಖಗೋಳ ವಿಜ್ಞಾನಿಗಳು ಚಂದ್ರನ ಮೆಲ್ಮೈಯ ಮೇಲೆ ಇರಿಸಿರುವ ನಾಲ್ಕು ಕಂಪನ ಮಾಪಕಗಳ ಮೂಲಕ ವಿಶಿಷ್ಟ ಗಣಿತ ಲೆಕ್ಕಾಚಾರದಲ್ಲಿ ಈ ಕಂಪನಗಳನ್ನು ಅಳೆಯಲಾಗಿ ‘ಚಂದ್ರ ಕಂಪನ’ ಸಂಬಂಧಿತ ವಿಸ್ತೃತ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.
ಅಪೋಲೋ 11, 12, 14, 15 ಮತ್ತು 16 ಮಿಷನ್ ಉಡ್ಡಯನ ಸಂದರ್ಭದಲ್ಲಿ ಈ ಕಂಪನ ಮಾಪಕಗಳನ್ನು ಚಂದ್ರನ ಮೆಲೆ ಇರಿಸಲಾಗಿತ್ತು. ಇವುಗಳಲ್ಲಿ ಅಪೋಲೋ 11 ಇರಿಸಿದ್ದ ಕಂಪನ ಮಾಪಕ ಕೇವಲ ಮೂರು ವಾರಗಳವರೆಗೆ ಮಾತ್ರವೇ ಕೆಲಸ ಮಾಡಿತ್ತು.
ಇನ್ನುಳಿದ ನಾಲ್ಕು ಕಂಪನ ಮಾಪಕಗಳು ಒಟ್ಟಾರೆಯಾಗಿ 28 ಚಂದ್ರ ಕಂಪನಗಳನ್ನು ದಾಖಲಿಸಿಕೊಂಡಿದೆ. ಇವುಗಳಲ್ಲಿ ಕಂಪನ ಪ್ರಮಾಣ ರಿಕ್ಟರ್ ಮಾಪಕದಲ್ಲಿ 2 ರಿಂದ 5ರವರೆಗೂ ದಾಖಲಾಗಿತ್ತು.