Advertisement

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

11:47 PM Dec 23, 2024 | Team Udayavani |

ಕಾಸರಗೋಡು: ಅಗತ್ಯವಾಗಿರುವ 150 ಎಕ್ರೆ ಸ್ಥಳ ನೀಡಿದರೆ ಕೇರಳದಲ್ಲಿ ಅಣು ವಿದ್ಯುತ್‌ ನಿಲಯ ಮಂಜೂರು ಮಾಡುವುದಾಗಿ ಕೇಂದ್ರ ಇಂಧನ ಸಚಿವ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ. ರಾಜ್ಯದ ವಿದ್ಯುತ್‌ ನಗರ ಅಭಿವೃದ್ಧಿ ಚಟುವಟಕೆಯನ್ನು ಅವಲೋಕಿಸಲು ತಲುಪಿದ ಸಚಿವರು ಈ ವಿಷಯವನ್ನು ಸ್ಪಷ್ಟಪಡಿಸಿದರು. ಕಾಸರಗೋಡಿನಲ್ಲಿ ಚೀಮೇನಿ ಇದಕ್ಕೆ ಸೂಕ್ತ ಸ್ಥಳವೆಂದು ಸಚಿವರು ಹೇಳಿದರು.

Advertisement

ಆದರೆ ಈ ವಿಷಯದಲ್ಲಿ ರಾಜ್ಯ ಸರಕಾರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಸೂಕ್ತವಾದ ಸ್ಥಳವನ್ನು ಗುರುತಿಸುವುದು ರಾಜ್ಯ ಸರಕಾರದ ಕೆಲಸ. ಕೇರಳದ ಕರಾವಳಿಯಲ್ಲಿ ಥೋರಿಯಂ ಅಡಕವಾಗಿರುವ ಮೊನೋಸೈಟಿಸ್‌ನ ದೊಡ್ಡ ಗಣಿ ಇದೆಯೆಂದು ಸಚಿವರು ಹೇಳಿದರು. ರಾಜ್ಯದಲ್ಲಿ ಥೋರಿಯಂ ಆಧಾರಿತ ಅಣು ವಿದ್ಯುತ್‌ ನಿಲಯ ಸ್ಥಾಪಿಸಲು ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next