Advertisement
ಓದೋ ಟೈಮಲ್ಲಂತೂ ಓದಿಲ್ಲ… ಕೊನೆಪಕ್ಷ ಇಂತದ್ದು ಮಾಡ್ತಿನಿ ಅಂತಾದರೂ ಹೇಳಬೇಕಲ್ಲ. ಹೀಗೆ ಆದ್ರೆ ನಾವು ಏನಂತ ತಿಳಿಬೇಕು…? ಏನೋ, ನೀವೇ ಅವನಿಗೆ ಬೈದು ಬುದ್ಧಿ ಹೇಳಿ ಸರಿ ದಾರಿಗೆ ತರಬೇಕು ಹಾಗಂತ ತಾಯಿಯೊಬ್ಬಳು ಹತ್ತಿರದಲ್ಲಿದ್ದ ತನ್ನ ಮಗನನ್ನು ತೋರಿಸುತ್ತಾ ಮೇಷ್ಟ್ರ ಬಳಿ ಅವಲತ್ತುಕೊಂಡಳು.
Related Articles
Advertisement
ಯಾವುದೋ ಒಂದು ವಿಷಯ ನಿನ್ನನ್ನು ತುಂಬಾ ಹೊತ್ತು ಇಂಪ್ರಸ್ ಮಾಡಲ್ಲ ಅಂದಾಗಾಯಿತು. ಅಂದ್ರೆ, ಪ್ರತಿ ಕ್ಷಣದಲ್ಲೂ ಪ್ರತಿ ಹಂತದಲ್ಲೂ ಹೊಸತನ್ನೆನೋ ನೋಡೋಕೆ ಹಂಬಲಿಸುತ್ತಿಯಾ ಅಂತಾಯಿತು. ಗುಡ್, ಖಂಡಿತ ನಿನ್ನದು ಸಮಸ್ಯೆನೆ ಅಲ್ಲ. ಇದು ನಿನ್ನಲ್ಲಿರೋ ಕ್ವಾಲಿಟಿ. ಪ್ರತಿಯೊಂದರಲ್ಲೂ ಸ್ವಾರಸ್ಯವಾದದ್ದೆನನ್ನೊ ನಿರೀಕ್ಷೆ ಮಾಡೋದು ನಿನ್ನ ಮನಸ್ಸು ಎಂದರು. ನಿನ್ನ ಮನಸಿಗೆ ಏನೇನ್ ತೋಚುತ್ತೂ ಅದನ್ನು ಬರೆಯೋಕೆ ಶುರುಮಾಡು.
ಇಂತದ್ದೇ ವಿಚಾರ ಅಂತಿಲ್ಲ. ನಿನಗೆ ಯಾವ ವಿಷಯದಲ್ಲಿ ಏನ್ ಅನ್ನಿಸುತ್ತೂ ಅದನ್ನೆಲ್ಲ ಬರೆಯುತ್ತಾ ಹೋಗು… ಒಂದ್ ವೇಳೆ ಅದು ಬೋರ್ ಅನ್ನಿಸಿದ್ರೆ, ಅದನ್ನಲ್ಲಿಗೆ ಮುಗಿಸಿ ಬೇರೆ ವಿಷಯದ ಬಗ್ಗೆ ಶುರುಮಾಡು. ಒಟ್ಟಿನಲ್ಲಿ ಬರೆಯೋದನ್ನು ನಿಲ್ಲಿಸಬಾರದು. ಕನಿಷ್ಠ ಎರಡೂ¾ರು ತಿಂಗಳಾದ್ರು ನೀನಿದನ್ನು ಮಾಡ್ಬೇಕು. ದಿನದಲ್ಲಿ ನಿನಗೆ ಇಷ್ಟವಾಗೋ ಯಾವುದಾದರೂ ವಿಷಯದ ಬಗ್ಗೆ ಕನಿಷ್ಠ ಎರಡು ಪುಟಗಳನ್ನಾದರೂ ಬರಿಬೇಕು. ಅದು ಹ್ಯಾಗೆ ಇರಲಿ.
ಮೊದಲು ಇಷ್ಟು ಮಾಡು ಎಂದರು. ಹುಡುಗನಿಗೆ ನಿರಾಳತೆ ಭಾವ ತೋರಿತು. ಮನೆಗೆ ಬಂದವನೆ ಬರೆಯಲು ಶುರುಮಾಡಿದ. ಮೊದಮೊದಲು ಅವನ ಪೆನ್ನು ಓಡಲಿಲ್ಲ. ಮನಸ್ಸಿನಲ್ಲಿದ್ದ ವಿಚಾರಗಳು ಕದ ತೆರೆದು ಹೊರಬರಲು ಶುರುಮಾಡಿದವೋ, ಆಗಲೇ ಅವನ ಪೆನ್ನು ಸರಾಗವಾಯಿತು. ನಂತರ ಅವನು ಹಿಂತಿರುಗಿ ನೋಡಲಿಲ್ಲ. ಬರೆದ ಬರೆದ ಬರೆದ…
ಇಂತ ವಿಷಯ ಅಂತಿಲ್ಲದೆ ಎಲ್ಲದರ ಬಗ್ಗೆಯೂ ಮನಸ್ಸು ಬಿಚ್ಚಿ ಬರೆದ. ಇಷ್ಟು ದಿನ ಮಾತಿನಲ್ಲಿ ಹೇಳಲಾಗದ ಎಲ್ಲಾ ವಿಷಯಗಳನ್ನು ಬರೆದು ಬರೆದೇ ಹಗುರ ಮಾಡಿಕೊಂಡ. ಯಾವುದೇ ವಿಷಯ ಸ್ವಲ್ಪ ಬೋರ್ ಹೊಡೆಯುತ್ತಿದ್ದಂತೆಯೇ ಅದನ್ನಲ್ಲಿಗೆ ಮುಗಿಸಿ ಬೇರೆ ವಿಷಯದ ಕಡೆಗೆ ಶಿಫ್ಟ್ ಆಗುತ್ತಿದ್ದ. ಹೀಗಾಗಿ ಬೋರ್ ಎನ್ನುವ ಶಬ್ದವೇ ಮಾಯಾವಾಯಿತು. ಬದಲಾಗಿ ತಾನೂ ಒಂದಷ್ಟು ವಿಷಯಗಳ ಬಗ್ಗೆ ಬರೆಯಬಲ್ಲೆ ಅನ್ನೊ ಸಾಮರ್ಥ್ಯ ತಿಳಿಯಿತು. ಇದು ಅವನಿಗೆ ಬರೆದದ್ದನ್ನು ಪತ್ರಿಕೆಗಳಿಗೆ ಕಳಿಸೋಕೂ ಪ್ರಚೋದನೆಯನ್ನು ನೀಡಿತು. ಮೊದಮೊದಲು ಪತ್ರಿಕೆಗಳಿಂದ ಪ್ರತಿಕ್ರಿಯೆ ಬರಲಿಲ್ಲ.
ಆದರೆ ಅದೊಂದು ದಿನ ಅವನು ತನ್ನ ಏರಿಯಾದ ಒಳಚರಂಡಿಯ ವ್ಯವಸ್ಥೆಯ ಬಗ್ಗೆ ಮಾಡಿದ ಗಂಭೀರ ವರದಿಯೊಂದು ಪೇಪರಿನಲ್ಲಿ ಪ್ರಕಟವಾಗಿ ದೊಡ್ಡ ಸುದ್ದಿ ಮಾಡಿತು. ಮೇಷ್ಟ್ರು ಕೂಡ ಅದನ್ನು ನೋಡಿ ಗಮನಿಸಿದರು. ಅವನನ್ನು ಕರೆಸಿಕೊಂಡು ಶಹಬ್ಟಾಸ್ ಗಿರಿ ಹೇಳಿದರು.ಎಲ್ಲ ನಿಮ್ಮಿಂದ ಸರ್. ದಿನಕ್ಕೆ ಕನಿಷ್ಠ ಎರಡು ಪುಟ ಬರಿ ಅಂದಿದ್ರಿ. ಆದ್ರೆ ಒಂದೊಂದು ವಿಷ್ಯಾನೇ ನನ್ನನ್ನು ಪುಟಗಟ್ಟಲೆ ಎಳಕೊಂಡು ಹೋದ್ರು… ಆರಂಭದಲ್ಲಿ ಆ ವಿಷ್ಯಗಳ ಬಗ್ಗೆ ನಂಗೇನು ಗೊತ್ತು ಅಂತ ಸುಮ್ಮನಿರ್ತಿದ್ದೆ.
ಆದರೆ ಬರಿಯೋಕೆ ಶುರುಮಾಡಿದ ಮೇಲೆ ನನಗೆನೆ ಗೊತ್ತಿಲ್ಲದಂತೆ ಹಲವು ವಿಚಾರಗಳು ಸೇರಿಕೊಂಡವು. ಈಗ ಯಾವ್ ವಿಷ್ಯ ಕೊಟ್ರೂ ಬರಿಬಹುದು ಅನ್ನೊ ಕಾನ್ಫಿಡೆನ್ಸ್ ಸಿಕ್ಕಿದೆ ಸರ್. ನೀನೊಬ್ಬ ಬರಹಗಾರ. ಮುಂದೆ ಪತ್ರಿಕೆಯ ವರದಿಗಾರನಾಗುವ ಸಾಮರ್ಥ್ಯ ನಿನಗೆ ಇದೆ. ನಿನಗೆ ಅನ್ನಿಸಿದ್ದನ್ನು ಒಂದು ಲಹರಿಯಲ್ಲಿ ಬರೆದುಬಿಡ್ತಿ… ಆದರೆ ಓದುಗನಿಗೆ ಅದು ಬೋರ್ ಆಗಲೇಬಾರದು ಅಂತೇನಿಲ್ಲ. ಯಾಕ್ ಹೇಳ್ತಿದೀನಿ ಅಂದ್ರೆ, ಯಾವುದು ನಿನಗೆ ಏನ್ ಅನುಭವ ನೀಡಿರ್ತದೊ, ಬೇರೆಯವರಿಗೂ ಕೂಡ ಅದೇ ಅನ್ನೊದನ್ನ ಮರಿಬಾರದು. ನೆನಪಿರಲಿ, ಇದು ಒಳ್ಳೆ ವಿಷಯಕ್ಕೂ ಅಪ್ಲೆç ಆಗುತ್ತೆ. ಒಳ್ಳೆದಾಗಲಿ… ಎಂದು ಶುಭ ಹಾರೈಸಿದರು. ಮೇಷ್ಟ್ರ ಮಾತುಗಳನ್ನು ಕೇಳಿ ಹುಡುಗನಿಗೆ ಮತ್ತಷ್ಟು ಹುರುಪು ಬಂದಂತಾಯಿತು.
-ಮಧುಕರ್
ಬಳ್ಕೂರು