ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ವೈಧ್ಯನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಬುಧವಾರ ಸಂಭ್ರಮದಿಂದ ನಡೆಯಿತು.
ಪಟ್ಟಣದ ಒಳಕೋಟೆಯಲ್ಲಿರುವ ಶ್ರೀ ವೈಧ್ಯನಾಥೇಶ್ವರ ದೇವಾಲಯದಲ್ಲಿ ಕಳೆದ 3-4 ದಿನಗಳಿಂದ ವಿಶೇಷ ಪೂಜೆ ಹೋಮ ಹವನಾದಿಗಳು ನಡೆದಿದ್ದು, ಮಂಗಳವಾರ ರಾತ್ರಿ ಗಿರಿಜಾ ಕಲ್ಯಾಣೋತ್ಸವ ನೆರವೇರಿತು. ಬುಧವಾರ ಬೆಳಗ್ಗೆ 10.30ರಿಂದ 12.15 ಗಂಟೆಯೊಳಗೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀ ವೈಧ್ಯನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಬಣೆಯಿಂದ ನೆರವೇರಿತು.
ಸಾವಿರಾರು ಭಕ್ತರು ಹೂಗಳಿಂದ ಅಂಲಕೃತಗೊಂಡ ರಥದಲ್ಲಿ ಪಾರ್ವತಿ ದೇವಿ ಹಾಗೂ ಈಶ್ವರರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆಯಾಕಾರದಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ರಥದಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನೆರೆದಿದ್ದ ಸಾವಿರಾರು ಭಕ್ತರು ಭಕ್ತಿ ಪರವಶತೆಯಿಂದ ತೇರನ್ನು ಎಳೆದು ಪುನೀತರಾದರು.
ಅನ್ನಸಂತರ್ಪಣೆ:
ಜಾತ್ರಾ ಮಹೋತ್ಸವದ ಅಂಗವಾಗಿ ಬಂದಿದ್ದ ಭಕ್ತರಿಗೆ ಅನ್ನಸಂತರ್ಪಣೆಯನ್ನು ನೆರವೇರಿಸಿದರೆ ಸ್ಥಳೀಯ ಹಲವಾರು ಸಂಘಟನೆಗಳು ನೆರೆದಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆ ಮತ್ತು ಕಡಲೆಬೇಳೆಯನ್ನು ವಿತರಣೆ ಮಾಡಿದ್ದು ವಿಶೇಷವಾಗಿತ್ತು.