Advertisement

ಸಿದ್ದೇಶ್ವರ ಶ್ರೀ ಪ್ರವಚನಕ್ಕೆ ಚಾಲನೆ

02:34 PM Feb 25, 2017 | Team Udayavani |

ಧಾರವಾಡ: ಇಂದು ನಮಗೆಲ್ಲಾ ಮೂರು ತಾಪಗಳು ಬಹಳಷ್ಟು ಕಾಡುತ್ತಿವೆ. ಅಧಿಭೌತಿಕ, ಅಧಿದೈವಿಕ ಹಾಗೂ ಆಧ್ಯಾತ್ಮಿಕ ತಾಪಗಳು. ಇಂತಹ ಆಧ್ಯಾತ್ಮಿಕ ತಾಪ ಕಳೆಯುವ ಶಕ್ತಿ ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಪ್ರವಚನಕ್ಕಿದೆ ಎಂದು ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಬಸವಾನಂದ ಶ್ರೀಗಳು ಹೇಳಿದರು. 

Advertisement

ನಗರದಲ್ಲಿ ಕರ್ನಾಟಕ ಕಾಲೇಜ್‌ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಆರಂಭಗೊಂಡ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಒಂದು ತಿಂಗಳ ಪ್ರವಚನ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲೆಡೆ ಆಧ್ಯಾತ್ಮಿಕ ಬಿಟ್ಟು ಚರ್ಚೆಗಳು ನಡೆಯುತ್ತವೆ. ಮೂಲ ಬಿಟ್ಟು ಎಷ್ಟೇ ಚರ್ಚೆ ಮಾಡಿದರೂ ಪರಿಹಾರ ಸಾಧ್ಯವಿಲ್ಲ.

ಇಂದು ವಿಶ್ವಸಂಸ್ಥೆಯಿಂದ ಕೂಡ ಯುದ್ಧಗಳನ್ನು ತಡೆಗಟ್ಟಿ ಶಾಂತಿ ಸ್ಥಾಪಿಸಲು ಆಗುತ್ತಿಲ್ಲ. ಸ್ವಯಂ ನಿಯಂತ್ರಣವೇ ಆಧ್ಯಾತ್ಮಿಕತೆ. ರಾಷ್ಟ್ರಾತೀತ ಚಿಂತನೆಯ ಅಗತ್ಯವಿದ್ದು, ಅದು ವಿಶ್ವಮಾನವ ಸಿದ್ದೇಶ್ವರ ಶ್ರೀಗಳ ಚಿಂತನೆಗಳಿಂದ ಸಾಧ್ಯವಿದೆ. ಇದಲ್ಲದೇ ಜೀವನ ಮೊಟಕು, ಕಲಿಕೆ ದೀರ್ಘ‌, ಅನುಭವ ಮೋಸ, ತೀಪುì ಕಷ್ಟಕರ ಎಂಬುದನ್ನು ನಾವುಗಳು ಅರಿತಾಗ ಹೊಸ ಬೆಳಕು ಮೂಡಲಿದೆ ಎಂದರು. 

ಹೇಬಿಕ್‌ ಮೋಮೋರಿಯಲ್‌ ಚರ್ಚನ ಫಾದರ್‌ ಎಸ್‌.ಎಸ್‌. ಸಕ್ರಿ ಮಾತನಾಡಿ, ಇಲ್ಲಿಗೆ ಹರಿದು ಬಂದ ಜನಸಾಗರವನ್ನು ನೋಡಿದರೆ ಧರ್ಮದಲ್ಲಿರುವ ಆಸಕ್ತಿ ಕಾಣುತ್ತದೆ. ಲೋಕ ಸಂಪಾದಿಸಿ ಆತ್ಮ ನಷ್ಟ ಮಾಡಿಕೊಂಡರೆ ಏನೂ ಪ್ರಯೋಜನವಿಲ್ಲ. ಹೀಗಾಗಿ ಆತ್ಮ ಬಲ ಹೆಚ್ಚಿಸಿಕೊಳ್ಳಲು ಪ್ರವಚನ ಸಹಕಾರಿಯಾಗಲಿದೆ. ಸಿದ್ದೇಶ್ವರ ಶ್ರೀಗಳ ಪ್ರವಚನ ಇಡೀ ಧಾರವಾಡ ಮಹಾನಗರವನ್ನು ಬದಲಿಸಲಿದೆ ಎಂದು ಹೇಳಿದರು.  

ನಾವು ಯಾರು ದೇವರನ್ನು ನೋಡಿಲ್ಲ. ಆದರೆ ದೇವರ ಅವತಾರಿ ಪುರುಷರನ್ನು ನೋಡಿದ್ದೇವೆ. ಅಂತಹ ಅವತಾರಿ ಪುರುಷರ ಮಾರ್ಗದರ್ಶನ ಪಡೆದು ಜೀವನ ಧನ್ಯ ಮಾಡಿಕೊಳ್ಳೋಣ. ಬೈಬಲ್‌ ನಲ್ಲಿ ಹೇಳಿರುವಂತೆ ದೇವರು ಕೊಟ್ಟಿರುವುದರಲ್ಲಿ ಸಂತಸ ಪಟ್ಟು ಇತರರಿಗೆ ಪ್ರೀತಿಸಿ, ಪರರ ಸೇವೆಯಲ್ಲಿ ಕಾಲ ಕಳೆಯೋಣ ಎಂದರು. 

Advertisement

ಚಿಕ್ಕಮಲ್ಲಿಗವಾಡದ ಎ.ಪಿ. ಪಾಟೀಲ ಗುರೂಜಿ ಮಾತನಾಡಿ, ದೇವರನ್ನು ಕಂಡ ಬಸವಾದಿ ಶರಣರು ಜೀವನದ ಬಗ್ಗೆ ಮಾತನಾಡಿದ್ದಾರೆ. ಜ್ಞಾನ ಇಲ್ಲದೆ ಜೀವನ ಸಾಗಿಸಲು ಸಾಧ್ಯವಿಲ್ಲ. ನಮ್ಮೊಳಗಿನ ದೇವರನ್ನು ಅರ್ಥೈಸಿಕೊಳ್ಳೊಣ. ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಇಲ್ಲಿಯೇ ಇದ್ದು, ಅದನ್ನು ಅನುಭವಿಸಿದರೆ ಮಾತ್ರ ನಮ್ಮಲ್ಲಿ ಬದಲಾವಣೆ ಬರಲು ಸಾಧ್ಯ.

ಬದಲಾವಣೆ ನಿಸರ್ಗದ ನಿಯಮ. ಅದನ್ನು ನಾವು ಇಂತಹ ಶ್ರೀಗಳ ಪ್ರವಚನದ ಮೂಲಕ ತಂದುಕೊಳ್ಳಬೇಕು. ದೇಹ ಸಮರ್ಪಿಸಿದರೆ, ಮನಸ್ಸಿನ  ಅಡಿಯಾಳದಿಂದ ಹೊರ ಬರಲು ಸಾಧ್ಯ. ಮೊದಲು ನನ್ನನ್ನು ನಾನು ಬದಲಿಸಿಕೊಳ್ಳಲು ಪ್ರಯತ್ನಿಸಬೇಕು ಎಂಬ ಚಿಂತನೆ ಬರಬೇಕಿದೆ ಎಂದರು.  

ರಾಮಕೃಷ್ಣ ಆಶ್ರಮದ ವಿಜಯಾನಂದ ಸರಸ್ವತಿ ಮಾತನಾಡಿ, ಜ್ಞಾನ, ಕರ್ಮ, ಆಧ್ಯಾತ್ಮಿಕ ಹಾಗೂ ಭಕ್ತಿ ಮಾರ್ಗಗಳಿವೆ. ಅವುಗಳನ್ನು ಅರಿತುಕೊಂಡು ಈ  ಬಂಧನದಿಂದ ಮುಕ್ತರಾಗಬೇಕು. ಅದು ಸಿದ್ದೇಶ್ವರ ಶ್ರೀಗಳ ಪ್ರವಚನದ ಅನುಸಂಧಾನದಿಂದ ಮಾತ್ರ ಸಾಧ್ಯ. ನಮ್ಮ ಹಲವಾರು ವರ್ಷಗಳ ಬೇಡಿಕೆ ಮಹಾಶಿವರಾತ್ರಿಯಂದು ಕರುಣಿಸಿದ್ದು, ಶಿವನ ಆಶೀರ್ವಾದವಾದಂತಾಗಿದೆ. ಇದು ನಮಗೆಲ್ಲಾ ಹೆಮ್ಮಯ ಸಂಗತಿ. ನಮ್ಮ ಎಲ್ಲ ದೌರ್ಬಲ್ಯಗಳನ್ನು ಶಿವನ ಮಡಿಲಿಗೆ ಹಾಕಿ ಜೀವನವನ್ನು ಪಾವನ ಮಾಡಿಕೊಳ್ಳೋಣ ಎಂದರು.   

Advertisement

Udayavani is now on Telegram. Click here to join our channel and stay updated with the latest news.

Next