Advertisement

ಶ್ರೀ ಕ್ಷೇತ್ರ ಕುಡುಪು: ಕಿರು ಷಷ್ಠಿ ರಥೋತ್ಸವ ಸಂಪನ್ನ

10:00 AM Dec 25, 2017 | |

ಮಹಾನಗರ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮ ನಾಭ ದೇವಸ್ಥಾನದಲ್ಲಿ
ಕಿರುಷಷ್ಠಿ ರಥೋತ್ಸವ ಸಂಪನ್ನಗೊಂಡಿತು. ಬೆಳಗ್ಗೆ ಅನಂತ ಪದ್ಮನಾಭ ದೇವರಿಗೆ ಉಷಾಃ ಕಾಲಪೂಜೆ, ಧನುಪೂಜೆ ಜರಗಿ ವಿಶೇಷ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ನವಕ ಕಲಶಭಿಷೇಕ , ಸಹಸ್ರನಾಮ ಅರ್ಚನೆ, ಅಮೃತಪಡಿ ನಂದಾದೀಪ, ಹರಿವಾಣ ನೈವೇದ್ಯದೊಂದಿಗೆ ಸರ್ವಾಭರಣ ಭೂಷಿತ ಶ್ರೀ ಅನಂತ ಪದ್ಮನಾಭ ದೇವರಿಗೆ ಷಷ್ಠಿಯ ಮಹಾಪೂಜೆ ಜರಗಿತು.

Advertisement

ತದನಂತರ ಶ್ರೀ ದೇವರ ಬಲಿ ಹೊರಟು ದೇವಳದ ರಾಜಾಂಗಣ ದಲ್ಲಿ ಶ್ರೀ ದೇವರ ಕಿರುಷಷ್ಠಿ ಬ್ರಹ್ಮರಥಾರೋಹಣವಾಗಿ ಸುಮಾ ರು ಐದು ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಶ್ರೀ ದೇವರಿಗೆ ವಿಶೇಷ ಬಲಿ ಉತ್ಸವ, ರಥೋತ್ಸವ, ಪಾಲಕಿ ಉತ್ಸವದೊಂದಿಗೆ ಸಂಭ್ರಮದ ಕಿರುಷಷ್ಠಿ ಉತ್ಸವ ಸಂಪನ್ನಗೊಂಡಿತು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಿತ್ರಮಂಡಳಿ ಕುಡುಪು ಅವರಿಂದ ತುಳುನಾಟಕ ಪ್ರದರ್ಶನಗೊಂಡಿತು. ದೇವಳದ ಆಡಳಿತ ಮಂಡಳಿಯ ಸರ್ವ ಮೊಕ್ತೇ ಸರರು, ದೇವಳದ ಕಾರ್ಯ ನಿರ್ವಾಹಣಾಧಿಕಾರಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಬ್ರಹ್ಮ ಕಲಶೋತ್ಸವ ಸಮಿತಿ ಸದಸ್ಯರು ಉತ್ಸವಕ್ಕೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next