Advertisement

15 ವಾರ್ಡ್‌ಗಳಲ್ಲಿ ಬಿಗಡಾಯಿಸಿದ ಕುಡಿಯುವ ನೀರಿನ ಅಭಾವ

04:16 PM Apr 19, 2021 | Team Udayavani |

ಗುಂಡ್ಲುಪೇಟೆ: ಪಟ್ಟಣದ ಹಲವು ವಾರ್ಡ್‌ಗಳಿಗೆ15 ದಿನಗಳಿಂದಲೂ ಕುಡಿಯುವ ನೀರು ಪೂರೈಕೆಯಾಗದ ಕಾರಣ ಜನರು ಕಂಗೆಟ್ಟಿದ್ದಾರೆ. ಸಮಸ್ಯೆಅರಿವಿದ್ದರೂ ಪುರಸಭೆ ಮುಖ್ಯಾಧಿಕಾರಿ ಹಾಗೂಅಧ್ಯಕ್ಷರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದುಸಾರ್ವಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣದ 1, 2, 3, 4, 6, 7, 9, 10, 11, 15,16, 17, 21 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಬಿಗಡಾಯಿಸಿದ್ದು, ಯುಗಾದಿ ಆಚರಣೆಗೂನೀರಿಲ್ಲದೆ ಜನರ ಪರದಾಡುವಂತಾಗಿತ್ತು. ಪಟ್ಟಣಕ್ಕೆನೀರು ಪೂರೈಸಲು ಕಬಿನಿ ಪ್ರಮುಖ ಜಲಮೂಲವಾಗಿದ್ದರೂ ಸಮಸ್ಯೆ ತಪ್ಪಿಲ್ಲ.ಪುರಸಭೆಯಿಂದ ಹೊಸದಾಗಿ 9 ಬೋರ್‌ವೆಲ್‌ಕೊರೆಸಲಾಗಿದೆ.

ಈ ಪೈಕಿ 6ರಲ್ಲಿ ಮಾತ್ರ ನೀರುಸಿಕ್ಕಿದೆ. ಕಳೆದ 15 ದಿನಗಳಿಂದಲೂ ನಲ್ಲಿಗಳಲ್ಲಿ ನೀರುಬಿಡದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಹೆಚ್ಚಾಗಿದೆ. ಬೇಸಿಗೆಯ ಅರಿವಿದ್ದರೂ ಪುರಸಭೆನಿರ್ಲಕ್ಷ್ಯದಿಂದ ನೀರಿಗಾಗಿ ಪರದಾಡು ವಂತಾಗಿದೆಎಂದು ಸ್ಥಳೀಯರಾದ ಜಿ.ಎಸ್‌.ಸಂದೀಪ್‌ ಕುಮಾರ್‌ಅಳಲು ತೋಡಿಕೊಂಡಿದ್ದಾರೆ.

ವಾಟರ್‌ಮ್ಯಾನ್‌ಗಳ ಮೊಬೈಲ್‌ ಸ್ವಿಚ್‌ಆಫ್:ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ನೀರಿನಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಸ್ಥಳೀಯರುವಾಟರ್‌ಮ್ಯಾನ್‌ಗಳನ್ನು ತರಾಟೆಗೆ ತೆಗೆದುಕೊಂಡಕಾರಣ ಅವರು ತಮ್ಮ ಮೊಬೈಲ್‌ ಸ್ವಿಚ್‌ಆಫ್ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ವಾಡ್‌ìಗಳಲ್ಲಿ ನೀರಿನ ಮೋಟರ್‌ ಸುಟ್ಟು ಹೋಗಿದೆ,ಬೋರ್‌ ರಿಪೇರಿ ಇದೆ ಎಂದು ಸಬೂಬುಹೇಳುತ್ತಿದ್ದಾರೆ ಎಂದು 16ನೇ ವಾರ್ಡ್‌ ನಿವಾಸಿಗಳುಅಸಹಾಯಕತೆ ವ್ಯಕ್ತಪಡಿಸಿದ್ದಾರೆ.ಓವರ್‌ ಹೆಡ್‌ ಟ್ಯಾಂಕ್‌ಗಳು ನಿರುಪಯುಕ್ತ:ಪಟ್ಟಣ ವ್ಯಾಪ್ತಿಯಲ್ಲಿ 5ರಿಂದ 6 ಓವರ್‌ ಹೆಡ್‌ನೀರಿನ ಟ್ಯಾಂಕ್‌ಗಳಿದ್ದು, ಯಾವೊಂದು ಟ್ಯಾಂಕ್‌ಗೂ ನೀರು ಪೂರೈಕೆಯಾಗದೆ ನಿರುಪಯುಕ್ತವಾಗಿವೆ.

ಕಳೆದ 12 ವರ್ಷದ ಹಿಂದೆ ವೆಂಕಟಾಚಾಲಪುರಸಭಾ ಅಧ್ಯಕ್ಷರಾಗಿದ್ದ ವೇಳೆ ಟ್ಯಾಂಕ್‌ಗಳಿಗೆನೀರು ತುಂಬಿಸಿದ್ದು ಬಿಟ್ಟರೆ ಇಲ್ಲಿಯವರೆಗೆ ಟ್ಯಾಂಕ್‌ಗಳು ನೀರನ್ನೇ ಕಂಡಿಲ್ಲ. ಹಲವು ವರ್ಷಗಳ ಹಿಂದೆಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿದ್ದ ಟ್ಯಾಂಕ್‌ಗಳು ಶಿಥಿಲಾವಸ್ಥೆ ತಲುಪಿವೆ.

Advertisement

ನೀರು ಪೂರೈಕೆಗೆ ಒಂದೇ ಟ್ಯಾಂಕರ್‌: ಗುಂಡ್ಲುಪೇಟೆ ಪಟ್ಟಣ ಬಹಳ ದೊಡ್ಡದಾಗಿದ್ದು, 30 ಸಾವಿರಜನಸಂಖ್ಯೆ ಹೊಂದಿದೆ. ಒಟ್ಟು 23 ವಾರ್ಡ್‌ಗಳಿದ್ದು, ಇಲ್ಲಿಗೆ ನೀರು ಪೂರೈಕೆ ಮಾಡಲು ಕೇವಲಒಂದೇ ಒಂದು ಟ್ಯಾಂಕರ್‌ ಇರುವುದುವಿಪರ್ಯಾಸವಾಗಿದೆ.

ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next