ಬೆಂಗಳೂರು: ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ (Shobha Shetty) ಅರ್ಧದಲ್ಲೇ ಶೋ ಬಿಟ್ಟು ಆಚೆ ಬಂದಿದ್ದಾರೆ. ಈ ವಿಚಾರ ಕಳೆದ ಎರಡು ದಿನಗಳಿಂದ ಬಿಗ್ ಬಾಸ್ ವೀಕ್ಷಕರಲ್ಲಿ ಚರ್ಚೆ ಆಗುತ್ತಿದೆ.
ತೆಲುಗು ಬಿಗ್ ಬಾಸ್ ಶೋನಲ್ಲಿ ಬಲಾಢ್ಯ ಸ್ಪರ್ಧಿಯಾಗಿ ಫಿನಾಲೆ ಹಂತದವರಗೂ ಹೋಗಿ ಕೊನೆ ಘಳಿಗೆಯಲ್ಲಿ ಆಚೆ ಬಂದಿದ್ದ ಶೋಭಾ ಕನ್ನಡ ಬಿಗ್ ಬಾಸ್ನಲ್ಲಿ ಆ ರೀತಿ ಕಾಣಿಸಿಕೊಂಡಿಲ್ಲ. ಮನೆಗೆ ಬಂದ ಎರಡು ದಿನ ಡಾಮಿನೇಟ್ ಆಟವನ್ನು ಆಡುವ ಪ್ರಯತ್ನ ಮಾಡಿದ್ದರು. ಆದರೆ ಆದಾದ ಬಳಿಕ ಅಷ್ಟಾಗಿ ಸದ್ದು ಮಾಡಲೇ ಇಲ್ಲ. ಅನಾರೋಗ್ಯದ ಕಾರಣ ಕೊಟ್ಟ ಶೋಭಾ ಬಿಗ್ ಬಾಸ್ ಬಿಟ್ಟು (Bigg Boss Boss Kannnada-11) ಆಚೆ ಬಂದಿದ್ದಾರೆ.
ತಾನು ಯಾಕೆ ಬಿಗ್ ಬಾಸ್ ಬಿಟ್ಟು ಅರ್ಧದಲ್ಲೇ ಬಂದಿದ್ದೇನೆ ಎನ್ನುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಾರಣವನ್ನು ಕೊಟ್ಟು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?:
“ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಟಾಪ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಹೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರೆಯಲು ಬಿಡುತ್ತಿಲ್ಲ. ಯಾರನ್ನು, ಯಾವುದನ್ನು ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಾಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ” ವೆಂದಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯಲ್ಲಿ ಸವಾಲಿಗೆ ಸವಾಲು.. ತಲೆ ಬೋಳಿಸಿಕೊಂಡ ರಜತ್
“ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೇನೆ. ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು.
ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ನಿಮ್ಮ ಪ್ರೀತಿಯ ಶೋಭಾ ಶೆಟ್ಟಿ ಎಂದು ಪೋಸ್ಟ್ ಮಾಡಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಶೋಭಾ ಅವರೇ ಯು ಆರ್ ಸೇಫ್ ಎಂದಿದ್ದರು. ಶೋಭಾ ನನ್ನ ಹೆಲ್ತ್ ನಿಂದ ನನ್ನನ್ನು ನಾನು ಪ್ರೂವ್ ಮಾಡೋಕೆ ಆಗ್ತಾ ಇಲ್ಲ. ಎಲ್ಲೋ ಒಂದು ಕಡೆ ನನಗೆ ಇರೋಕೆ ಆಗ್ತಾ ಇಲ್ಲ ಅಂಥ ಅನ್ನಿಸ್ತಾ ಇದೆ. ನನಗೆ ಕಂಟಿನ್ಯೂ ಮಾಡೋಕೆ ಆಗ್ತಾ ಇಲ್ಲ. ವೀಕ್ಷಕರ ನಿರೀಕ್ಷೆಗಳನ್ನು ರೀಚ್ ಮಾಡೋಕೆ ಆಗ್ತಾ ಇಲ್ಲ ಎಂದಿದ್ದರು.
ಅರ್ಥ ಮಾಡ್ಕೊಳ್ಲಿ ಯಾಕೆ ಒಳಗಡೆ ಹೋದ್ರಿ ಅಂಥ. ನಿಮ್ಮನ್ನು ಸೇವ್ ಮಾಡಿದ್ರು ಅಲ್ವಾ ಅವರ ನಂಬಿಕೆ ಮೇಲೆ ನೀವು ಈ ರೀತಿ ಹೇಳೋಕೆ ಆಗಲ್ಲ. ನಿಮಗೆ ಬಾಗಿಲು ಓಪನ್ ಮಾಡುತ್ತೇನೆ. ಒಂದಾ ಉಳಿದುಕೊಳ್ಳಿ ಅಥವಾ ಹೊರಡಿ ಎಂದು ಕಿಚ್ಚ ಹೇಳಿದ್ದರು.
ಕಿಚ್ಚನ ಮಾತು ಕೇಳಿ ಶೋಭಾ ಅವರು ಕಂಬ್ಯಾಕ್ ಮಾಡುತ್ತೇನೆ ಶೋಭಾ ಶೆಟ್ಟಿ ಏನು ಅಂಥ ತೋರಿಸುತ್ತೇನೆ ಎಂದು ಹೇಳಿದ್ದರು. ಆದರೆ ಆ ಬಳಿಕ ಶೋಭಾ ಮಾತು ಬದಲಾಯಿಸಿ ಹೊರಗೆ ಹೋಗ್ತೇನೆ ಎಂದಿದ್ದರು. ಮಾತು ಬದಲಾಯಿಸಿದ ಶೋಭಾ ಅವರು ನಿರ್ಧಾರಕ್ಕೆ ಸುದೀಪ್ ಗರಂ ಆಗಿದ್ದರು. ಶೋಭಾ ಎಲ್ಲರ ಬಳಿ ಕ್ಷಮೆ ಕೇಳಿ ಮನೆಯಿಂದ ಆಚೆ ಬಂದಿದ್ದರು.