Advertisement

ಕೃಷಿ ಯಂತ್ರದ ಎಂಆರ್‌ಪಿ ಪ್ರದರ್ಶನಕ್ಕೆ ಶೋಭಾ ಸೂಚನೆ

09:45 PM Aug 06, 2021 | Team Udayavani |

ಉಡುಪಿ: ಟ್ರ್ಯಾಕ್ಟರ್‌, ಟಿಲ್ಲರ್‌ ಸೇರಿದಂತೆ ರೈತರು ಖರೀದಿಸುವ ಕೃಷಿ ಯಂತ್ರೋಪಕರಣ ಮಾರಾಟ ಮಾಡುವ ಡೀಲರ್‌ಗಳು ಕಡ್ಡಾಯವಾಗಿ ಗರಿಷ್ಠ ಮಾರಾಟ ದರ (ಎಂಆರ್‌ಪಿ)ವನ್ನು ಪ್ರದರ್ಶಿಸುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

Advertisement

ಕೃಷಿ ಯಂತ್ರೋಪಕರಣ ಉತ್ಪಾದನ ಕಂಪೆನಿಗಳು, ಮಾರಾಟ ಮಾಡುವ ಡೀಲರ್‌ಗಳು ಹಾಗೂ ಆಯಾ ರಾಜ್ಯ ಸರಕಾರಗಳ ಕೃಷಿ ಇಲಾಖೆಗಳ ಅಧಿಕೃತ ವೆಬ್‌ ಸೈಟ್‌ಗಳಲ್ಲೂ ಕಡ್ಡಾಯವಾಗಿ ದರ ಪ್ರಕಟಿಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಯಂತ್ರೋಪಕರಣ ಖರೀದಿಸುವ ರೈತರಿಗೆ ಉತ್ತೇಜನದ ರೂಪದಲ್ಲಿ ನೀಡಲಾಗುವ ಸಹಾಯಧನ ಸೌಲಭ್ಯದ ಕುರಿತು ಸಮರ್ಪಕ ಮಾಹಿತಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಮತ್ತು ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ.90ರಷ್ಟು ಗರಿಷ್ಠ 1 ಲಕ್ಷ ರೂ.ಗಳ ಮಿತಿಗೊಳಪಟ್ಟು ಉಪಕರಣ ಗಳ ಸಹಾಯಧನವನ್ನು ನಿಗದಿಪಡಿಸಲಾಗಿದೆ. ನಾನಾ ಭಾಗದಲ್ಲಿ ಯಂತ್ರೋಪಕರಣಗಳ ಮಾರಾಟಗಾರರು ಮನಬಂದಂತೆ ದರ ವಿಧಿಸಿ ರೈತರಿಗೆ ವಂಚಿಸುವ ಆರೋಪ ಕೇಳಿ ಬರುತ್ತಿದ್ದರಿಂದ ಕೆಲವು ಮಾನದಂಡಗಳನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆಯೆಂದು ಸಚಿವರು ತಿಳಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಅನಂತರ 2014ರಿಂದ 2022ರ ವರೆಗೆ ಒಟ್ಟು 5,490 ಕೋ. ರೂ. ಅನುದಾನವನ್ನು ಈ ಯೋಜನೆಯಡಿ ಒದಗಿಸಿದ್ದು, ಕರ್ನಾಟಕ ರಾಜ್ಯಕ್ಕೆ ಒಟ್ಟು 560.67 ಕೋಟಿ ರೂ. ಅನುದಾನ ರೈತರ ಯಂತ್ರೋಪಕರಣಗಳ ಖರೀದಿಗಾಗಿ ಮಂಜೂರಾಗಿದೆ.

ಈ ಅವಧಿ ದೇಶಾದ್ಯಂತ ಒಟ್ಟು 13,23,773 ಯಂತ್ರೋಪಕರಣಗಳನ್ನು, ಕರ್ನಾಟಕ ರಾಜ್ಯದಲ್ಲಿ 1,58,725 ಯಂತ್ರೋಪ
ಕರಣಗಳನ್ನು ರೈತರಿಗೆ ಪೂರೈಸಲಾಗಿದೆ ಯೆಂದು ಸಚಿವರು ತಿಳಿಸಿದರು.

Advertisement

ರೈತರಿಗೆ ಸರಿಯಾದ ಬಿತ್ತನೆ, ನೀರಾವರಿ, ಕೊಯ್ಲು ಮತ್ತು ಸಂಗ್ರಹಣೆ ಮಾಡಲು ಸಹಾಯ ಮಾಡುವ ಆಧುನಿಕ ಕೃಷಿ ಉಪಕರಣಗಳೊಂದಿಗೆ ಕೃಷಿ ಕೆಲಸವನ್ನು ಮಾಡಲು ಮಾತ್ರ ಸಾಧ್ಯವಿದೆ.

ವಿವಿಧ ಕೃಷಿ ಯಂತ್ರೋಪಕರಣಗಳಿಗೆ ಕೇಂದ್ರ ಸರಕಾರ ನಿಗದಿಪಡಿಸಿದ ಮಾನದಂಡಗಳನ್ನು ಪರಿಶೀಲಿಸಿ ಕೃಷಿ ಇಲಾಖೆಯು ಕೃಷಿ ಯಂತ್ರೋಪಕರಣಗಳ ಸರಬರಾಜು ದಾರರನ್ನು ಎಂಪ್ಯಾನಲ್‌ ಮಾಡಲಾಗುತ್ತಿದೆ. ಮಾದರಿವಾರು ಸರಬರಾಜುದಾರರು ನೀಡಿದ ದರವನ್ನು ದರಕರಾರು ಪಟ್ಟಿಯಲ್ಲಿ ನೀಡಲಾಗಿರುತ್ತದೆ. ದರಗಳು ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆಯನ್ನು ಒಳಗೊಂಡಂತೆ ಗರಿಷ್ಠ ದರಗಳಾಗಿದ್ದು ಇಲಾಖೆಯು ನಿಗದಿ ಪಡಿಸಿದ ದರಗಳಾಗಿರುವುದಿಲ್ಲ. ಆದ್ದರಿಂದ ರೈತರು ಗರಿಷ್ಠ ದರಕ್ಕಿಂತ ಕಡಿಮೆ ದರಕ್ಕೆ ಚೌಕಾಸಿ ಮಾಡಿ ಉಪಕರಣಗಳನ್ನು ಖರೀದಿ ಮಾಡಲು ಸಹ ಅವಕಾಶವಿರುವುದಾಗಿ ಕೇಂದ್ರ ಸಚಿವರು ತಿಳಿಸಿದರು.

ರಾಜ್ಯದಲ್ಲಿ 213
ಹೈಟೆಕ್‌ ಹಬ್ಸ್
ಒಟ್ಟು 7 ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 213 ಹೈಟೆಕ್‌ ಹಬ್‌ಗಳನ್ನು ನಿರ್ಮಿಸಲಾಗಿದೆ. ಕರ್ನಾಟಕ ರಾಜ್ಯ ಈ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ. ಗ್ರಾ.ಪಂ. ಹಾಗೂ ಕೃಷಿ ವಿಜ್ಞಾನಗಳ ಕೇಂದ್ರಗಳ ಮೂಲಕವೂ ರೈತರಿಗೆ ಕೃಷಿ ಯಂತ್ರೋ ಪಕರಣಗಳು ಬಾಡಿಗೆ ರೂಪದಲ್ಲಿ ದೊರೆಯುವಂತೆಯೂ ಕ್ರಮ ಕೈಗೊಳ್ಳ ಲಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next