Advertisement
ಕೋಲಾರ ತಾಲೂಕು ಅರಾಭಿಕೊತ್ತನೂರ ಗ್ರಾಪಂನ ಚಿಕ್ಕಅಯ್ಯೂರು ಗ್ರಾಮದ ಸತೀಶ್ ಎಂಬುವರು, ಉದ್ಯೋಗ ಖಾತ್ರಿಯಡಿ, ಹೂವು ಬೆಳೆದು, ಹೊಸ ಬದುಕು ರೂಪಿಸಿಕೊಂಡಿದ್ದಾರೆ. ಸತೀಶ್ ಈ ಹಿಂದೆ ತಮ್ಮ ಕುಟುಂಬದ ಪೋಷಣೆಗಾಗಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪೂರ್ವಜರಿಂದ ಬಂದಿದ್ದ 30 ಗುಂಟೆ ಜಮೀನಿನಲ್ಲಿ ನೀಲಗಿರಿ ಹಾಕಿದ್ದರು. ಆದರೆ, ಅದರಿಂದ ಹೆಚ್ಚು ಪ್ರಯೋಜನವೇನು ಇರಲಿಲ್ಲ. ನಿತ್ಯ ದೂರದ ಊರಿಗೆ ಹೋಗಿ ಅನ್ಯರ ಬಳಿಯ ದುಡಿಮೆ ತೃಪ್ತಿತರಲಿಲ್ಲ.
Related Articles
Advertisement
ಮಾರುಕಟ್ಟೆಯಲ್ಲಿ ಎಲ್ಲಾ ಕಾಲಕ್ಕೂ ಗುಲಾಬಿಗೆ ಬೇಡಿಕೆ: ಗುಲಾಬಿ ಹೂವಿಗೆ ಸರ್ವಕಾಲದಲ್ಲೂ ಬೇಡಿಕೆ ಇದ್ದು, ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತದೆ. ದಿನಬಿಟ್ಟು ದಿನ ಕೊಯ್ಲು ಮಾಡುತ್ತಿದ್ದು, 80ರಿಂದ 100 ಕೆ.ಜಿ. ಹೂವು ದೊರೆಯುತ್ತಿದೆ ಸತೀಶ್ ತಮ್ಮ ಗುಲಾಬಿ ಹೂವುಗಳನ್ನು ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಗುಲಾಬಿಗೆ ಸಾಮಾನ್ಯ ದಿನಗಳಲ್ಲಿ 60ರಿಂದ 100 ರೂಪಾಯಿ ಇದ್ದರೆ, ಹಬ್ಬದ ದಿನಗಳಲ್ಲಿ 150 ರಿಂದ 200 ರೂ.ಗೆ ಮಾರಾಟವಾಗುತ್ತದೆ. ಇದರಿಂದ ರೈತ ಸತೀಶ್ ತಿಂಗಳಿಗೆ ಸರಾಸರಿ 40 ರಿಂದ 50 ಸಾವಿರ ಆದಾಯ ಗಳಿಸುತ್ತಿದ್ದಾರೆ.
ಲಾರಿ ಚಾಲಕನಾಗಿದ್ದ ನಾನು, ಈಗ ನರೇಗಾ ನೆರವು ಪಡೆದು ಗುಲಾಬಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೇನೆ. ಗುಲಾಬಿ ಹೂವಿಗೆ ಸದಾ ಬೇಡಿಕೆ ಇದ್ದು, ನಷ್ಟ ಆಗೋದಿಲ್ಲ. ತೋಟವನ್ನ ಉತ್ತಮ ನಿರ್ವಹಣೆ ಮಾಡಿದರೆ, ಲಾಭ ಪಡೆಯಬಹುದು. ಉದ್ಯೋಗ ಖಾತ್ರಿ ಯೋಜನೆ ರೈತರಿಗೆ ಉಪಯುಕ್ತವಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಸತೀಶ್, ಗುಲಾಬಿ ಬೆಳೆಗಾರ, ಚಿಕ್ಕ ಅಯ್ಯೂರು