Advertisement

ನಿಮ್ಮ ಪರಿಶ್ರಮ ವ್ಯರ್ಥ ಆಗದು: ಸಿಎಂ ಭರವಸೆ

10:58 AM Jun 11, 2017 | Team Udayavani |

ಭೋಪಾಲ್‌: ಮಧ್ಯ ಪ್ರದೇಶದಲ್ಲಿ ರೈತರ ಪ್ರತಿಭಟನೆ, ಹಿಂಸಾಚಾರ 10ನೇ ದಿನ ಪೂರೈಸಿದ್ದು, ಪ್ರಕ್ಷುಬ್ಧ ಗೊಂಡಿ ರುವ ರಾಜ್ಯ ದಲ್ಲಿ ಮತ್ತೆ ಶಾಂತಿ ಮೂಡಿ ಸುವ ಉದ್ದೇ ಶದಿಂದ ಸ್ವತಃ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೇ ಶನಿವಾರದಿಂದ ನಿರಶನ ಆರಂಭಿಸಿದ್ದಾರೆ.

Advertisement

ಶಾಂತಿ ಮರುಕಳಿಸುವವರೆಗೂ ಅಂದರೆ ಅನಿರ್ದಿಷ್ಟಾವಧಿವರೆಗೆ ಉಪವಾಸ ನಡೆಸುವುದಾಗಿ ಅವರು ಹೇಳಿ ದ್ದಾರೆ. ಈ ಮೂಲಕ ಪ್ರತಿಭಟನಾನಿರತ ರೈತ ರನ್ನು ತಮ್ಮತ್ತ ಸೆಳೆಯಲು ಚೌಹಾಣ್‌ ಯತ್ನಿಸಿದ್ದಾರೆ. ಭೋಪಾಲ್‌ನ ದಸೆಹ್ರಾ ಮೈದಾನದಲ್ಲಿ ಉಪವಾಸ ಆರಂಭಿಸಿ ಮಾತನಾಡಿದ ಅವರು, “ನಮ್ಮ ಸರಕಾರವು ನಿಮ್ಮೊಂದಿಗಿದೆ. ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ. ಇಲ್ಲಿಗೆ ಬಂದು ಸಂಕಷ್ಟಗಳನ್ನು ಹೇಳಿ. ನಿಮ್ಮ ಪರಿಶ್ರಮ ವ್ಯರ್ಥವಾಗಲು ಬಿಡುವುದಿಲ್ಲ. ರೈತರ ಬೆಳೆಗಳನ್ನು ರಾಜ್ಯ ಸರಕಾರವೇ ಕೊಂಡುಕೊಂಡು, ಲಾಭದಾಯಕ ಬೆಲೆ ಯನ್ನು ನಿಮಗೆ ನೀಡಲಿದೆ’ ಎಂದಿದ್ದಾರೆ.

ಎಲ್ಲ ನಾಟಕ ಎಂದ ವಿಪಕ್ಷಗಳು: ಇದೇ ವೇಳೆ, ಸಿಎಂ ಚೌಹಾಣ್‌ ಅವರ ನಿರಶನ ವನ್ನು ವಿಪಕ್ಷಗಳು “ನಾಟಕ’ ಎಂದು ಕರೆ ದಿವೆ. ಇದು ನಾಟಕವೇ ಅಥವಾ ತಾವು ಮಾಡಿರುವ ತಪ್ಪು ಕೆಲಸಗಳಿಗಾಗಿ ಮಾಡು ತ್ತಿರುವ ಪಶ್ಚಾತ್ತಾಪವೇ ಎಂದು ಸ್ವತಃ ಚೌಹಾಣ್‌ ಅವರೇ ತಿಳಿಸಬೇಕು ಎಂದು ಕಾಂಗ್ರೆಸ್‌ ಹೇಳಿದೆ. ಇನ್ನೊಂದೆಡೆ, ಬಿಜೆಪಿ ಮಿತ್ರಪಕ್ಷ ಶಿವಸೇನೆ ಕೂಡ ಚೌಹಾಣ್‌ ವಿರುದ್ಧ ಕಿಡಿಕಾರಿದೆ. ಉಪವಾಸ ಕುಳಿತು ಕೊಳ್ಳುವ ಬದಲು ಚೌಹಾಣ್‌ ಮಂಡ್‌ಸಾರ್‌ಗೆ ಹೋಗಿ ರೈತರನ್ನು ಸಮಾಧಾನಪ ಡಿ ಸ‌ಬಹುದಿತ್ತು ಎಂದಿದೆ.

ಕರ್ಫ್ಯೂ ಸಡಿಲ: ಹಿಂಸಾಚಾರ ಪೀಡಿತ ಮಂಡ್‌ಸಾರ್‌ ಶನಿವಾರ ಸಹಜ ಸ್ಥಿತಿಗೆ ಬಂದಿದ್ದು, ಅಹಿತಕರ ಘಟನೆಗಳು ವರದಿ ಯಾಗಿಲ್ಲ. ಈ ಹಿನ್ನೆಲೆಯಲ್ಲಿ 12 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು.

7 ಲಕ್ಷ ರೈತರಿಗೆ  6 ಲಕ್ಷದ ವಿಮೆ
ಜೈಪುರ
: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ರೈತರ ಪ್ರತಿಭಟನೆಯ ಕಾವು ಹೆಚ್ಚಿರುವಂತೆಯೇ ರಾಜಸ್ಥಾನದಲ್ಲಿ ರೈತರಿಗೆ ವಿಮಾ ಸೌಲಭ್ಯ ಒದಗಿಸಲಾಗಿದೆ. ಸಹಕಾರಿ ಬ್ಯಾಂಕುಗಳಿಂದ ಬೆಳೆ ಸಾಲ ಪಡೆದಿರುವ ಸುಮಾರು 7 ಲಕ್ಷ ರೈತರಿಗೆ ತಲಾ 6 ಲಕ್ಷ ರೂ.ಗಳ ವಿಮಾ ಸೌಲಭ್ಯವನ್ನು ಸರಕಾರ ಘೋಷಿಸಿದೆ. ವಾರ್ಷಿಕ 27 ರೂ. ಕಂತಿನಲ್ಲಿ ಈ ವಿಮೆ ದೊರೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next