Advertisement

ರಾಜ್ಯಸಭೆಗೆ ಶಿವರಾಜ್‌ ಪಾಟೀಲ್‌ ಹೆಸರು: ಕೈ ನಾಯಕರಿಂದ ಆಕ್ಷೇಪ 

06:40 AM Mar 03, 2018 | Team Udayavani |

ಬೆಂಗಳೂರು: ನಾಲ್ವರು ಸಂಸದರ ನಿವೃತ್ತಿಯಿಂದ ಖಾಲಿಯಾಗಲಿರುವ ರಾಜ್ಯಸಭಾ ಸ್ಥಾನಕ್ಕೆ ರಾಜ್ಯ ವಿಧಾನಸಭಾ ಕೋಟಾದಿಂದ ಆಯ್ಕೆಯಾಗಲು ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ಆರಂಭವಾಗಿದೆ. ಜಾತಿ ಲೆಕ್ಕಾಚಾರದಲ್ಲಿ ದಲಿತರು, ಲಿಂಗಾಯತರು ಹಾಗೂ ಅಲ್ಪ ಸಂಖ್ಯಾತ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ದೆಹಲಿ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಬಳಸುತ್ತಿದ್ದಾರೆ.

Advertisement

ಲಿಂಗಾಯತ ಕೋಟಾದಡಿ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್‌ ಪಾಟೀಲ್‌ ಹೆಸರು ಹೊಸದಾಗಿ ಕೇಳಿ ಬರುತ್ತಿದೆ. ಅವರನ್ನು ಆಯ್ಕೆ ಮಾಡಿದರೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವನ್ನು ಸೆಳೆಯಲು ಮತ್ತಷ್ಟು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ಇದೆ.

ಆದರೆ, ಈಗಾಗಲೇ ಹೊರರಾಜ್ಯದ ಲೋಕಸಭಾ ಮಾಜಿ ಸ್ಪೀಕರ್‌ ಮೀರಾಕುಮಾರಿ ಹೆಸರು ಬಲವಾಗಿ ಕೇಳಿ ಬರುತ್ತಿರುವುದರಿಂದ ರಾಜ್ಯದ ಆಕಾಂಕ್ಷಿಗಳು ಪ್ರಾದೇಶಿಕತೆಯ  ಬಳಸಲು ಮುಂದಾಗಿದ್ದಾರೆ.

ಹೊರಗಿನವರನ್ನು ರಾಜ್ಯಸಭೆಗೆ ಕಳುಹಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂಬ ವಾದ ಮಂಡಿಸಲು ಮುಂದಾಗಿದ್ದಾರೆ. ಶಿವರಾಜ್‌ ಪಾಟೀಲ್‌ ಹೆಸರು ಪ್ರಸ್ತಾಪವಾಗುತ್ತಿರುವಂತೆ ರಾಣಿ ಸತೀಶ್‌ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next