Advertisement

ಶಿರ್ವ: ರಸ್ತೆ ಬದಿಯಲ್ಲಿ ಕಸದ ರಾಶಿ

07:00 AM Jul 10, 2018 | |

ಶಿರ್ವ: ಕಟಪಾಡಿ-ಶಿರ್ವ- ಬೆಳ್ಮಣ್‌ ಮುಖ್ಯರಸ್ತೆಯ ಶಿರ್ವ ಮಸೀದಿಯ ಬಳಿ ಜನರು ಪ್ಲಾಸ್ಟಿಕ್‌ ಹಾಗೂ ಗೋಣಿ ಚೀಲದಲ್ಲಿ ಕಸ ತಂದು ಹಾಕುತ್ತಿದ್ದು ಸಮಸ್ಯೆ ತಲೆದೋರಿದೆ.

Advertisement

ಮಸೀದಿ ಬಳಿ ರಸ್ತೆ ಬದಿಯಲ್ಲಿದ್ದ  ಕಸದ ತೊಟ್ಟಿಯನ್ನು ತೆರವುಗೊಳಿಸಲಾಗಿದ್ದು ಪ್ಲಾಸ್ಟಿಕ್‌ ಮತ್ತು ಗೋಣಿ ಚೀಲಗಳಲ್ಲಿ ತುಂಬಿ ಎಸೆದ ಸತ್ತ ಕೋಳಿ, ಪ್ರಾಣಿಗಳನ್ನು ನಾಯಿ,ನರಿ ರಸ್ತೆಗೆ ಎಳೆದು ತಂದು ತಿನ್ನುತ್ತಿವೆ. ಪರಿಸರವಿಡೀ ದುರ್ವಾಸನೆಯಿಂದ ಕೂಡಿದ್ದು ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವಂತಾಗಿದೆ. ಮಳೆಗೆ ಕಸ ತ್ಯಾಜ್ಯ ಒಟ್ಟಾಗಿ ಕೊಳೆತು ದುರ್ನಾತ ಬೀರುತ್ತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಶಿರ್ವ ಗ್ರಾ.ಪಂ.ವ್ಯಾಪ್ತಿಯಲ್ಲಿ  ಮನೆಮನೆಗೆ ಹೋಗಿ ಕಸ ಸಂಗ್ರಹಿಸುವ ವಾಹನ ವ್ಯವಸ್ಥೆಯಿದ್ದರೂ ನಾಗರಿಕರು ಮಾತ್ರ ರಸ್ತೆ ಬದಿಯಲ್ಲಿ ಕಸ,ತ್ಯಾಜ್ಯ ಸುರಿಯುತ್ತಿರುವುದು ಬೇಸರದ ಸಂಗತಿ.ಪ್ರಧಾನ ಮಂತ್ರಿಯವರ ಸ್ವತ್ಛ ಭಾರತ -ಸ್ವಸ್ಥ ಭಾರತ ಪರಿಕಲ್ಪನೆಯಲ್ಲಿ ಸ್ವತ್ಛತೆಗೆ ಆದ್ಯತೆ ನೀಡದೆ ರಸ್ತೆ ಬದಿ ಕಸ ಹಾಕಬಾರದೆಂಬ ಮನವಿಗೆ ಕಿವಿಗೊಡದ ಪ್ರಜ್ಞಾವಂತ ಸುಶಿಕ್ಷಿತ ನಾಗರಿಕರು ಕಸ ಎಸೆಯುತ್ತಿದ್ದಾರೆ. ಸ್ವ ತ್ಛತೆಯನ್ನು ಕಾಪಾಡುವಲ್ಲಿ ಸಾರ್ವಜನಿಕರ, ಗ್ರಾಮಸ್ಥರ ಸಹಕಾರ ಅತೀ ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next